ಮೂಡುಬಿದಿರೆ: ಅಣ್ಣಾ ಡಾಮರು ಏಪ ಆಪುಂಡು ಈ ರಸ್ತೆಗು….? ಗಾಡಿನ್ ಗುಂಡಿಗು ಪಾಡೊಂದು ಪೊಪುನ ಕರ್ಮ… ನನಲ ಏತ್ ದಿನ-ಕಾತ್ ಕಾತ್ ಸಾಕಾಯಿನ ಊರುದಕುಲು.
ಇಂತಹದೊಂದು ತುಳು ಭಾಷೆಯಲ್ಲಿರುವ ಫ್ಲೆಕ್ಸ್ ಶಿರ್ತಾಡಿಯಲ್ಲಿ ಗಮನ ಸೆಳೆಯುತ್ತಿದೆ. ಶಿರ್ತಾಡಿ-ಮಕ್ಕಿ ರಸ್ತೆ ದುಸ್ಥಿತಿಯನ್ನು ನೋಡಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ತೋರ್ಪಡಿಸಿದ್ದಾರೆ. ಅಣ್ಣಾ ಈ ರಸ್ತೆಗೆ ಡಾಮರು ಯಾವಾಗ ಆಗುತ್ತದೆ. ವಾಹನವನ್ನು ಹೊಂಡ-ಗುಂಡಿಗೆ ಹಾಕಿ ಹೋಗುವ ಕರ್ಮ ಇನ್ನೆಷ್ಟು ದಿನ. ಕಾದು ಕಾದು ಸುಸ್ತಾಗಿರುವ ಊರಿನವರು ಎಂದು ಅರ್ಥ ಬರುವಂತೆ ಬ್ಯಾನರ್ ಅನ್ನು ಅಳವಡಿಸಲಾಗಿದ್ದು, ಬುಧವಾರ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದೆ. ಅಸಮಾಧನಗೊಂಡಿರುವ ಗ್ರಾಮಸ್ಥರು ಮಂಗಳವಾರ ರಾತ್ರಿ ಬ್ಯಾನರ್ ಅಳವಡಿಸರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.