ಕಾಸರಗೋಡು: ಮಾದಕ ಮಾತ್ರೆ ಸಹಿತ ಯುವಕನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಂಜತ್ತೂರಿನ ಇರ್ಷಾದ್ ನಗರದ ಅಪ್ಝಲ್ ಅಲಿ(29) ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ 45 ಮಾದಕ ಮಾತ್ರೆಯನ್ನು ವಶಪಡಿಸಿಕೊಂಡಿದ್ದಾರೆ.
ಶಾಲೆ, ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕ ಮಾತ್ರೆಗಳನ್ನು ಈತ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಕರ್ನಾಟಕದಿಂದ ಕಾಸರಗೋಡಿಗೆ ಮಾದಕ ಮಾತ್ರೆ ಸಾಗಾಟವಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ