News Kannada
Tuesday, September 27 2022

ಕರಾವಳಿ

ಬಿಜೆಪಿ ಕಚೇರಿಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ - 1 min read

Photo Credit :

ಬಿಜೆಪಿ ಕಚೇರಿಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ

ಕಾರ್ಕಳ: ಬಿಜೆಪಿ ಕಚೇರಿಯಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ.

ವಾರ ಪತ್ರಿಕೆಯ ಮೆಲ್ಛಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದ ವಸಂತ ಬೆಳ್ತಂಗಡಿ ಎಂಬಾತ ಹಲ್ಲೆ ನಡೆಸಿದ್ದು ಆರ್ ಬಿ ಜಗದೀಶ್ ಎಂಬಾತ ಹಲ್ಲೆಗೊಳಗಾಗಿದ್ದು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ನೀಡಲಾಗಿದೆ. ಬಿಜೆಪಿ ವತಿಯಿಂದ ಸುದ್ದಿಗೋಷ್ಠಿ ಆಯೋಜಿಸಿದ್ದು ಇದೇ ಕುರಿತು ಕಾರ್ಕಳ ಪತ್ರಕರ್ತರು ಈ ಸುದ್ದಿಗೋಷ್ಠಿಗೆ ತೆರಳಿದ ಸಂದರ್ಭದಲ್ಲಿ ಕಾರ್ಕಳ ಪತ್ರಕರ್ತ ಸಂಘದ ನಿಯಾಮವಳಿಯನ್ನು ಪಾಲಿಸುವಂತೆ ಆಯೋಜಕರಿಗೆ ಕಾರ್ಕಳ ಪತ್ರಕರ್ತ ಸಂಘದ ಪ್ರಬಾರ ಅಧ್ಯಕ್ಷನಾಗಿರುವ ಆರ್,ಬಿ ಜಗದೀಶ್ ಅವರು ವಿಸ್ತಾರವಾಗಿ ಹೇಳುವ ಸಂದರ್ಭದಲ್ಲಿ ವಸಂತ ಎಂಬಾತ ಈ ನಿಯಾಮವಳಿ ಹಾಗೂ ನಿಮ್ಮ ಸಂಘದ ವಿರುದ್ದ ಆತನ ಆಕ್ಷೇಪ ಸಲ್ಲಿಸಿದ್ದು, ಇದೇ ವಿಚಾರಕ್ಕಾಗಿ ಅಧ್ಯಕ್ಷರು ಜಿಲ್ಲಾ ಕಮಿಟಿಯ ಸದಸ್ಯತ್ವ ಹೊಂದಿದ್ದವರು ಮಾತ್ರ ನಮ್ಮ ಸಂಘಕ್ಕೆ ಸೇರಿದ್ದವರು. ಪತ್ರಕರ್ತ ಅಲ್ಲದವರು ಇದರ ಬಗ್ಗೆ ಆಕ್ಷೇಪ ಸಲ್ಲಿಸುವುದು ಸಮಂಜಸ ಅಲ್ಲ. ಅದನ್ನು ಹೊರತು ಪಡಿಸಿ ಸದಸ್ಯತ್ವ ಇಲ್ಲದವರು ನಮ್ಮ ಸಂಘಕ್ಕೆ ಆರ್ಹರು ಆಗಿರುವುದಿಲ್ಲ ಎಂದು ಜಗದೀಶ್ ಅವರು ಸಮಾಜಾಯಿಸಿ ತಿಳಿಸಿದಾಗ ಸಭೆಯಲ್ಲಿ ಮುಖಭಂಗಗೊಂಡು ಕೋಪಿತನಾದ ವಸಂತ ಕ್ಯಾಮರಾದ ಸ್ಟಾಂಡ್ ನಿಂದ ಜಗದೀಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ವಸಂತ ಬೆಳ್ತಂಗಡಿ ವಿರುದ್ದ ಪ್ರಕರಣ ದಾಖಲಾಗಿದೆ.

ಪ್ರತಿ ದೂರು :
ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ವಸಂತ ಬೆಳ್ತಂಗಡಿ ನನ್ನ ಮೇಲೆ ಆರ್ ಬಿ ಜಗದೀಶ್ ಹಲ್ಲೆ ನಡೆಸಿದ್ದಾನೆ ಎಂದು ಆತ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾನೆ.
 

See also  ಮಂಗಳೂರಿನ ಮಾಲ್ ನಲ್ಲಿ `ಹಿಂದೂ ರಾಷ್ಟ್ರ' ಎಂದವನಿಗೆ ಗುಂಪಿನಿಂದ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು