ಬೆಳ್ತಂಗಡಿ: ಖಾಸಗಿ ಬಸ್-ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳ್ತಂಗಡಿಯ ಪಣೆಜಾಲ್ ನಲ್ಲಿ ನಡೆದಿದೆ.
ಬೈಕ್ ಸವಾರ ಮೆಲಂತಬೆಟ್ಟಿನ ಚಂದ್ರಹಾಸ್ (28) ಎಂದು ಗುರುತಿಸಲಾಗಿದ್ದು, ಅಪಘಾತದ ರಭಸಕ್ಕೆ ತಲೆಯ ಮೆದುಳು ರಸ್ತೆಗೆ ಚೆಲ್ಲಿ ಹೋದ ಘಟನೆ ನಡೆದಿದೆ.
ಗೇರುಕಟ್ಟೆಯಲ್ಲಿರುವ ಅಂಗಡಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.