News Kannada
Friday, October 07 2022

ಕರಾವಳಿ

ಕುಡಿಯುವ ನೀರಿನ ಪೈಪ್ ಕಡಿದ ಪ್ರಕರಣ- ವ್ಯಾಪಕ ಆಕ್ರೋಶ - 1 min read

Photo Credit :

ಕುಡಿಯುವ ನೀರಿನ ಪೈಪ್ ಕಡಿದ ಪ್ರಕರಣ- ವ್ಯಾಪಕ ಆಕ್ರೋಶ

ಸುಳ್ಯ: ಸುಳ್ಯ ತಾಲೂಕಿನ ಮರ್ಕಂಜ-ಅರಂತೋಡು ಗ್ರಾಮಗಳ ಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕುಡಿಯುವ ನೀರಿನ ಪೈಪ್ ಗಳನ್ನು ಕಡಿದು ತುಂಡರಿಸಿದ ಘಟನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೈಪ್ ಕಡಿದ ಕಾರಣ ಹನಿ ನೀರಿಲ್ಲದೆ 15 ಕ್ಕೂ ಹೆಚ್ಚು ಕುಟುಂಬಗಳು ಪರದಾಡುವ ಸ್ಥಿತಿ ಮುಂದುವರಿದಿದೆ.

ಮರ್ಕಂಜ ಗ್ರಾಮದ ಅಜ್ಜಿಕಲ್ಲು, ಕಟ್ಟಕೋಡಿ, ಅರಂತೋಡು ಗ್ರಾಮದ ಬಾಜಿನಡ್ಕ ಪ್ರದೇಶದ ಜನರಿಗೆ ವಾಹನಗಳಲ್ಲಿ ಅಥವಾ ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಬೇಕಾದ ಸ್ಥಿತಿ ಉಂಟಾಗಿದೆ. ಪೈಪ್ ಕಡಿದ ಕಾರಣದಿಂದ ಈ ಭಾಗಕ್ಕೆ ಮೂರು ದಿನಗಳಿಂದ ನೀರಿನ ಸರಬರಾಜು ಸಂಪೂರ್ಣ ನಿಂತು ಹೋಗಿದೆ. ಪ್ರದೇಶದ ಜನರು ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದಲ್ಲಿ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತೆಗೆದುಕೊಂಡು ಹೋಗಿ ಕುಡಿಯಲು ಮತ್ತು ಇತರ ದೈನಂದಿನ ಉಪಯೋಗಕ್ಕೆ ಬಳಸುತ್ತಿದ್ದರು. ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಬುಧವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಪೈಪ್ ಗಳನ್ನು ತುಂಡರಿಸಿ ನೀರು ಸರಬರಾಜಿಗೆ ತಡೆ ಒಡ್ಡಿದ್ದರು. ಬದಲಿಯಾಗಿ ಪೈಪ್ ಗಳನ್ನು ಹಾಕಿ ನೀರು ಸರಬರಾಜು ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡುವುದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದು ಜನರು ಈ ನಿರೀಕ್ಷೆಯಲ್ಲಿದ್ದಾರೆ.

ಜನಪ್ರತಿನಿಧಿಗಳ ಭೇಟಿ:
ಪೈಪ್ ಕಡಿದು ನೀರಿನ ಸರಬರಾಜು ಕಡಿತಗೊಂಡಿರುವ ಕಟ್ಟಕೋಡಿ, ಬಾಜಿನಡ್ಕ, ಅಜ್ಜಿಕಲ್ಲು ಪ್ರದೇಶಕ್ಕೆ ಜನಪ್ರತಿನಿಧಿಗಳ ತಂಡ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ  ಬಡ ಕುಟುಂಬಗಳೇ ಹೆಚ್ಚಾಗಿರುವ ಈ ಪ್ರದೇಶದ ಜನರಿಗೆ ಕುಡಿಯಲು ಮತ್ತಿತರ ಅಗತ್ಯತೆಗಳಿಗೆ ಬೇರೆ ನೀರಿನ ಮೂಲಗಳು ಇಲ್ಲ. ಆದುದರಿಂದ ಇವರಿಗೆ ಪೈಪ್ ನೀರಿನ ವ್ಯವಸ್ಥೆಯನ್ನು ಕೂಡಲೇ ಮರುಸ್ಥಾಪನೆ ಮಾಡಬೇಕು ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಒತ್ತಾಯಿಸಿದ್ದಾರೆ. ಈ ಪ್ರದೇಶಕ್ಕೆ ಶಾಶ್ವತ ಈರಿನ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಅಳಲನ್ನು ಜನಪ್ರತಿನಿಧಿಗಳ ಮುಂದಿರಿಸಿದರು.

ಸಚಿವರ ಗಮನಕ್ಕೆ- ಎಂ.ವೆಂಕಪ್ಪ ಗೌಡ:
ಅರಣ್ಯ ಇಲಾಖೆಯ ಸಿಬ್ಬಂದಿಗಳು ಪೈಪ್ ಕಡಿದ ಕಾರಣ ಕುಡಿಯುವ ನೀರಿನ ಸರಬರಾಜು ನಿಂತು ಹೋಗಿ ಸಮಸ್ಯೆಗೆ ಸಿಲುಕಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ. ಸಾಧಕ ಬಾಧಕಗಳನ್ನು ಗಮನಿಸಿ ಕೊಂಡು ಅಗತ್ಯ ಬಿದ್ದರೆ ಪ್ರಕರಣದ ಗಂಭೀರತೆಯನ್ನು ಅರಣ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

See also  ರಸ್ತೆಯೆಲ್ಲಾ ಹೊಂಡಮಯ: ನಾಗರಿಕರ ಆಕ್ರೋಶ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು