News Kannada
Wednesday, October 05 2022

ಕರಾವಳಿ

ವೇಣೂರು: ದೇವಸ್ಥಾನ-ಬಸದಿಯಲ್ಲಿ ಕಳ್ಳತನ - 1 min read

Photo Credit :

ವೇಣೂರು: ದೇವಸ್ಥಾನ-ಬಸದಿಯಲ್ಲಿ ಕಳ್ಳತನ

ಬೆಳ್ತಂಗಡಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಶಾಂತಿನಾಥಸ್ವಾಮಿ ಕಲ್ಲು ಬಸದಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಗಳನ್ನು ಕಳವುಗೈದ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎಡಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮಹಾಗಣಪತಿ ಮತ್ತು ಜನಾರ್ದನ ಸ್ವಾಮಿಯ ದೇವರ ಎದುರಿಗಿದ್ದ 2 ಕಾಣಿಕೆ ಡಬ್ಬಿ ಹಾಗೂ ದೇವಳದ ಮುಂಭಾಗದಲ್ಲಿದ್ದ ಜೀರ್ಣೋದ್ಧಾರದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಸುಮಾರು ರೂ. 1500 ನಗದನ್ನು ದೋಚಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಗೆ ತಂದ 3 ಕಾಣಿಕೆ ಹುಂಡಿಗಳನ್ನು ದೇವಸ್ಥಾನದ ಎಡ ಬದಿಯ ಗದ್ದೆಗೆ ಕೊಂಡೊಯ್ದು ಅಲ್ಲಿ ಅದರ ಬೀಗ ಹೊಡೆದು ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಇಲ್ಲಿನ ಕಲ್ಲುಬಸದಿಯ ಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಪಡೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. 2 ಕಾಣಿಕೆ ಡಬ್ಬಿಗಳನ್ನು, ಬಸದಿಯ ಹೊರಗಿದ್ದ ಬ್ಯಾಟರಿ ಹಾಗೂ ಇನ್ವಟರ್ ನ್ನು ಕಳ್ಳರು ಕದ್ದೊಯ್ದಿದ್ದಾರೆ. ಎರಡು ಕಡೆಗಳಲ್ಲೂ ಸಿಸಿ ಕೆಮರವನ್ನು ಇತ್ತು. ಕಳ್ಳರು ಇಲ್ಲಿನ ದೃಶ್ಯಾವಳಿಗಳು ಸೆರೆಯಾಗದಂತೆ ಅದನ್ನು ತಿರುಗಿಸಿರುವುದಾಗಿ ತಿಳಿದು ಬಂದಿದೆ.

ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಬಳಿಕ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಭಾನುವಾರ ಬೆಳಿಗ್ಗೆ ಅರ್ಚಕರು ಪೂಜೆಗೆಂದು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿ ಟಿವಿಯಲ್ಲಿ ಕೆಲವು ದೃಶ್ಯಗಳು ಸೆರೆಯಾಗಿದೆ ಎಂದು ತಿಳಿದುಬಂದಿದೆ. ಕಳ್ಳತನ ಸಂದರ್ಭ ಮುಖಕ್ಕೆ ಮುಸುಕು ಧರಿಸಿದ್ದರು ಎಂದು ತಿಳಿದು ಬಂದಿದೆ.

ವೇಣೂರು ದೇವಸ್ಥಾನದಲ್ಲಿ ಶಿಬಿರ: ರಾಜಸ್ಥಾನ ಮೂಲದ ವೈದ್ಯರುಗಳಿಂದ ವೇಣೂರು ದೇವಸ್ಥಾನದಲ್ಲಿ ಕಳೆದೊಂದು ವಾರದಿಂದ ಆರೋಗ್ಯ ಶಿಬಿರ ನಡೆಯುತ್ತಿದ್ದು, ಇದರ ಸಿಬ್ಬಂದಿ ದೇವಸ್ಥಾನದ ಹೊರಾಂಗಣದಲ್ಲೇ ಮಲಗುತಿದ್ದರು. ಆದರೆ ಇವರ ಗಮನಕ್ಕೆ ಬಾರದ ರೀತಿಯಲ್ಲಿ ಸುಮಾರು 2 ಗಂಟೆಗಳ ಕಳ್ಳರು ಕಾರ್ಯಾಚರಣೆ ನಡೆಸಿರುವುದು ಆಶ್ವರ್ಯಕ್ಕೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕ ಕೊರಗಪ್ಪ ನಾಯ್ಕ, ಎಎಸ್ಐ ಶೀನಪ್ಪ ಗೌಡ ಹಾಗೂ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಆಗಮಿಸಿ ತನಿಖೆ ನಡೆಸಿದ್ದಾರೆ.

 

See also  ಶೀಘ್ರವೇ ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಸಚಿವ ನಾರಾಯಣ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು