ಕಾಸರಗೋಡು: ಕೆಎಸ್ ಆರ್ ಟಿಸಿ ಬಸ್ ನಡಿಗೆ ಸಿಲುಕಿ ತಾಯಿ ಮತ್ತು ಎಂಟು ತಿಂಗಳ ಮಗು ದಾರುಣವಾಗಿ ಮೃತಪಟ್ಟ ಘಟನೆ ಆದಿತ್ಯವಾರ ಮಧ್ಯಾಹ್ನ ಪೆರ್ಲಡ್ಕದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಾನತ್ತೂರಿನ ರಜನಿ(30), ಪುತ್ರ ಋತುವೇದ ಎಂದು ಗುರುತಿಸಲಾಗಿದೆ. ಜೊತೆಗಿದ್ದ ರಜನಿಯ ತಾಯಿ ರೋಹಿಣಿ ಮತ್ತು ರಜನಿಯ ಪುತ್ರಿ ಅತಿಕಾ (3) ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ದು ಕಲ್ಲಳ್ಳಿಯಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಹತ್ತುತ್ತಿದ್ದಾಗ ಬಸ್ಸು ಒಮ್ಮೆಲೇ ಮುಂದಕ್ಕೆ ಚಲಾಯಿಸಿದ್ದು, ಈ ಸಂದರ್ಭದಲ್ಲಿ ಬಸ್ಸಿನ ಹಿಂಬದಿ ಟಯರ್ ನಡಿ ಸಿಲುಕಿದ ತಾಯಿ ಮತ್ತು ಮಗು ಮೃತಪಟ್ಟರೆ ಇಬ್ಬರು ಗಾಯಗೊಂಡರು. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಬೊಬ್ಬೆ ಹಾಕಿದಾರೂ ಚಾಲಕ ಬಸ್ಸು ಮುಂದಕ್ಕೆ ಚಲಾಯಿಸಿದ್ದರಿಂದ ದಾರುಣ ಘಟನೆ ನಡೆದಿದೆ. ರಜನಿ ಯು ಪೆರ್ಲಡ್ಕದಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಇಬ್ಬರು ಮಕ್ಕಳು ಮತ್ತು ತಾಯಿ ಜೊತೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣವೆನ್ನಲಾಗಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.