ಬಂಟ್ವಾಳ: ಇತ್ತೀಚೆಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಅವರ ಮನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಭೇಟಿ ನೀಡಿದರು.
ಜಲೀಲ್ ಅವರ ತಂದೆ, ತಾಲ್ಲೂಕು ಪಂಚಾಯಿತಿ ಸದಸ್ಯ ಉಸ್ಮಾನ್ ಹಾಜಿ ಅವರಿಗೆ ಹರಿಪ್ರಸಾದ್ ಅವರು ಸಾಂತ್ವನ ಹೇಳಿ ಬಳಿಕ ಘಟನೆ ಬಗ್ಗೆ ವಿವರ ಕೇಳಿದರು.
ಈ ಸಂದರ್ಭ ಎಐಸಿಸಿ ಸದಸ್ಯ ಮೋಹನ್ ಪಿ.ವಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಬಂಟ್ವಾಳ ಪುರಸಭೆ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಲುಕ್ಮಾನ್, ಅಝೀಝ್, ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.