News Kannada
Wednesday, October 05 2022

ಕರಾವಳಿ

ದೈವಗಳ ಜೊತೆ ಮನಬಂದಂತೆ ಕುಣಿದಾಡಿದ ಯುವಕರು, ಮಕ್ಕಳು…ಎಲ್ಲೆಡೆಯಿಂದ ಆಕ್ರೋಶ! - 1 min read

Photo Credit :

ದೈವಗಳ ಜೊತೆ ಮನಬಂದಂತೆ ಕುಣಿದಾಡಿದ ಯುವಕರು, ಮಕ್ಕಳು...ಎಲ್ಲೆಡೆಯಿಂದ ಆಕ್ರೋಶ!

ಮಂಗಳೂರು: ಕರಾವಳಿಯ ಜನರಿಗೆ ಭೂತಾರಾಧನೆ ಎಂದರೆ ಎಲ್ಲಿಲ್ಲದ ಭಯ, ಭಕ್ತಿ ಹಾಗೂ ನಂಬಿಕೆ. ಇಲ್ಲಿನ ಜನರು ದೇವರನ್ನು ಎಷ್ಟು ನಂಬುತ್ತಾರೋ ಗೊತ್ತಿಲ್ಲ. ಆದರೆ ಅದೇನೇ ಕಷ್ಟ ಬಂದರೂ ಇಷ್ಟಾರ್ಥ ಸಿದ್ಧಿಗಾಗಿ ಭೂತಾರಾಧನೆಯ ಮೂಲಕ ದೈವಗಳ ಮೊರೆ ಹೋಗುವುದು ಇಲ್ಲಿ ಸರ್ವೇ ಸಾಮಾನ್ಯ. ತುಳುನಾಡಿನಲ್ಲಿ ದೈವಾರಾಧನೆಗೆ ಅದರದೇ ಆದ ವೈಶಿಷ್ಟ್ಯ ಹಾಗೂ ಮಹತ್ವವಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ, ಸಂಸ್ಕೃತಿಗಳು ಮೂಲೆಗುಂಪಾಗಿರುವುದು ವಿಷಾದವೇ ಸರಿ. ಇದಕ್ಕೆ ಸಾಕ್ಷಿಯೆಂಬಂತೆ ಭೂತ ಕೋಲದಲ್ಲಿ ದೈವಗಳ ಜೊತೆಗೆ ಸಾರ್ವಜನಿಕರು ಮನಬಂದಂತೆ ಕುಣಿದಾಡಿದ ಘಟನೆ ಕಳಸದಲ್ಲಿ ನಡೆದಿದ್ದು, ಎಲ್ಲೆಡೆಯಿಂದ ವ್ಯಾಪಕ ಖಂಡನೆ ಕೇಳಿಬರುತ್ತಿದೆ.

ಘಟನೆ:
ಭೂತಕೋಲದ ವಾಲಗದ ನಿನಾದಕ್ಕೆ ಯುವಕರು, ಮಕ್ಕಳು ದೈವಗಳ ಜೊತೆಗೆ ಕುಣಿದು ಸಂತಸಪಟ್ಟ ಘಟನೆ ಕಳಸದ ಮನೆಯೊಂದರಲ್ಲಿ ಕೋಲೋತ್ಸವದ ಸಂದರ್ಭದಲ್ಲಿ ನಡೆದಿದೆ.

ಸಾರ್ವಜನಿಕರು ದೈವದ ಜೊತೆಗೆ ಕುಣಿಯುವುದು ಕಳಸದಲ್ಲಿ ಒಂದು ಸಂಪ್ರದಾಯ. ಆದರೆ, ಅದೂ ಎಲ್ಲಾ ಸಂದರ್ಭದಲ್ಲೂ ಅಲ್ಲ. ಕೆಲವೊಮ್ಮೆ ಇಲ್ಲಿ ದೈವದ ಪಾತ್ರಧಾರಿಗಳೇ ಯುವಕರು ಹಾಗೂ ಮಕ್ಕಳನ್ನು ಕುಣಿಯಲು ಪ್ರೇರೇಪಿಸುತ್ತಾರೆ ಎಂದು ಹೇಳಲಾಗುತ್ತಿದೆ.

ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಬಾಳೆಹೊನ್ನೂರು, ಕಳಸ, ಮೂಡಿಗೆರೆ ಆಸುಪಾಸಿನಲ್ಲಿ ಧೂಮಾವತಿ, ಚೌಡಿ, ರಾಜ ದೈವ, ಒಂಟಿ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುತ್ತದೆ. ಕಣ್ಣಮುಂದೆ ಸಾಕ್ಷಾತ್ ದೇವರನ್ನು ಕಂಡಾಗ ಜನ ಹರ್ಷ ವ್ಯಕ್ತಪಡಿಸುವ ರೀತಿ ಇದಾಗಿದೆ.

ಮೊದಲಿಗೆ ದೈವದ ಕೈಹಿಡಿಯುವವರು, ದೈವದ ಚಾಕರಿ ಮಾಡುವವರು ದೈವದೊಂದಿಗೆ ಕುಣಿಯಲು ಪ್ರಾರಂಬಿಸುತ್ತಾರೆ. ಒಬ್ಬೊಬ್ಬರಾಗಿ ನೆರೆದವರು ಸೇರಿಕೊಂಡು ಜನ ದೈವದ ಜೊತೆಗೆ ಕುಣಿಯುತ್ತಾರೆ. ದೈವದ ಗಗ್ಗರ ನರ್ತನ ಸೇವೆಯಾದ ಬಳಿಕ ತೆಂಗಿನ ಕಾಯಿ ನೀಡುವ ಮೂಲಕ ವಾಲಗದವರಿಗೆ ಗೌರವ ಸಲ್ಲಿಸಲಾಗುತ್ತದೆ. ಇದು ಈ ಊರಿನ ಸಂಪ್ರದಾಯವೆಂದು ಹೇಳಲಾಗುತ್ತಿದ್ದು, ಆದರೂ ವಿಭಿನ್ನವಾದ ಈ ಆಚರಣೆಯ ಹಿನ್ನೆಲೆ ತಿಳಿಯದೆ, ದೈವರಾಧನೆಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಂಬಿಕೊಂಡು ಬಂದ ಜನರಿಗೆ ಈ ವೀಡಿಯೋ ಒಮ್ಮೆಲೆ ನೋಡಿದಾಗ ಮನಸ್ಸಲ್ಲಿ ಅಸಮಾಧಾನ ಮೂಡುವುದು ಮಾತ್ರ ಸುಳ್ಳಲ್ಲ…

See also  ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು