News Kannada
Tuesday, October 04 2022

ಕರಾವಳಿ

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಇನ್ನಿಲ್ಲ - 1 min read

Photo Credit :

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಇನ್ನಿಲ್ಲ

ಕಾಸರಗೋಡು: ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಳ್ಳಿಪುರಂ ಬಾಲನ್ ( 78)  ಶನಿವಾರ ತಡರಾತ್ರಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು..
ಸಿಪಿಐ ರಾಜ್ಯ ಸಮಿತಿ ಸದಸ್ಯರಾಗಿದ್ದರು.

2006ರಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1939 ರ ಅಕ್ಟೊಬರ್ 10 ರಂದು ಕಣ್ಣೂರಿನ ಪಳ್ಳಿಪುರದಲ್ಲಿ  ಜನಿಸಿದ್ದ ಬಾಲನ್  ಶಾಲಾ ದಿನಗಳಿಂದಲೇ ರಾಜಕೀಯದಲ್ಲಿ  ಸಕ್ರಿಯರಾಗಿದ್ದರು.ಯುವ ಸಂಘಟನೆಯಾದ ಎ ವೈ ಎಫ್ ನ ಕಣ್ಣೂರು  ಜಿಲ್ಲಾ ಕಾರ್ಯದರ್ಶಿ, ತಾಲೂಕು ಕಾರ್ಯದರ್ಶಿ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಪರಿಶಿಷ್ಟ ಜಾತಿ/ ಪಂಗಡ  ಅಭಿವೃದ್ಧಿ ನಿಗಮ ಅಧ್ಯಕ್ಷ , ಕೇರಳ ಆದಿವಾಸಿ ಯೂನಿಯನ್ ರಾಜ್ಯ ಕಾರ್ಯದರ್ಶಿ, ಕಣ್ಣೂರು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಾರ್ಥಿವ ಶರೀರವನ್ನು  ಬೆಳಿಗ್ಗೆ 9 ಗಂಟೆಗೆ ಮನೆಗೆ ತರಲಾಗುವುದು. ಬಳಿಕ  ಮಧ್ಯಾಹ್ನ ಎರಡು ಗಂಟೆಗೆ  ಕಣ್ಣೂರು ಸಿಪಿಐ ಜಿಲ್ಲಾ ಕಚೇರಿಯಲ್ಲಿ  ಅಂತಿಮ ದರ್ಶನಕ್ಕಿಡಲಾಗುವುದು.  ಸಂಜೆ ನಾಲ್ಕು ಗಂಟೆಗೆ ಪಯ್ಯoಬಳ ದಲ್ಲಿ  ಅಂತ್ಯಕ್ರಿಯೆ ನೆರವೇರಲಿದೆ.

See also  ಮಹಿಳೆಯ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ : ಡಾ.ಎಂ.ಉಷಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು