News Kannada
Sunday, October 02 2022

ಕರಾವಳಿ

ದಾರಿಹೋಕ ಮಾನಸಿಕ ಅಸ್ವಸ್ಥ ಮನೆಗೆ ನುಗ್ಗಿ ಮಾರಾಣಾಂತಿಕ ಹಲ್ಲೆ - 1 min read

Photo Credit :

ದಾರಿಹೋಕ ಮಾನಸಿಕ ಅಸ್ವಸ್ಥ ಮನೆಗೆ ನುಗ್ಗಿ ಮಾರಾಣಾಂತಿಕ ಹಲ್ಲೆ

ಕಾರ್ಕಳ: ದಾರಿಹೋಕ ಮಾನಸಿಕ ಅಸ್ಪಸ್ಥನೊಬ್ಬ ಕೆಂದಿಂಜೆ ಬೋಳ ಕ್ರಾಸ್ ನಲ್ಲಿರುವ ಮನೆಯೊಂದಕ್ಕೆ ನುಗ್ಗಿ ಮೂವರ ಮೇಲೆ ದಾಳಿ ನಡೆಸಿದ್ದು, ಬಾಲಕಿಯ ಸ್ಥಿತಿ ಗಂಬೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಹಿಣಿ(60), ಸಪ್ನ(40), ಮಾನ್ವಿ(9) ಎಂಬವರು ಘಟನೆಯಲ್ಲಿ ಗಾಯಗೊಂಡವರು.

ಸೋಮವಾರ ಬೆಳಿಗ್ಗೆ ಕೆದಿಂಜೆ ಬೋಳ ಕ್ರಾಸ್ ಪರಿಸರದಲ್ಲಿ  ಬಾಗಿಲು ತೆರದುಕೊಂಡಿದ್ದ ಮನೆಯೊಂದಕ್ಕೆ ದಾರಿಹೋಕ ಅಸ್ವಸ್ಥ  ಏಕಾಏಕಿ ಪ್ರವೇಶಕ್ಕೆ ಮುಂದಾಗಿದ್ದನು. ಆ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ ಸಪ್ನಳ ಮೇಲೆರಸಿ ಹಲ್ಲೆ ಗೈದ ಆತ ಸಮೀಪದಲ್ಲಿ ಇದ್ದ ಹಾರೆಯೊಂದಿಗೆ ಮನೆಯೊಳಕ್ಕೆ ಅಕ್ರಮ ಪ್ರವೇಶಗೈದು ಕೋಣೆಯಲ್ಲಿ ನಿದ್ರಿಸಿದ ಮಾನ್ವಿ ಎಂಬಾಕೆಯ ತಲೆಗೆ ಹಾರೆಯಿಂದ ಮಾರಾಣಾಂತಿಕವಾಗಿ ಹೊಡೆದಿದ್ದಾನೆ. ತಡೆಯಲು ಬಂದಿದ್ದ ರೋಹಿಣಿಯ ಮೇಲೂ ಹಲ್ಲೆ ನಡೆಸಿದ್ದಾನೆ.

ಕೋಣೆಯ ಕವಾಟನ್ನು ತೆರೆದು ಚೆಲ್ಲಾಪಿಲಿ ಗೊಳಿಸಿ ಕೊಣೆಯೊಂದರಲ್ಲಿ ಕುಳಿತ್ತಿದ್ದನು. ಸ್ಥಳೀಯ ನಿವಾಸಿಗಳು ಈ ಎಲ್ಲಾ ಬೆಳವಣಿಯ ನಡೆಯುವ ಸ್ಥಳಕ್ಕೆ ಧಾವಿಸಿ ಬಂದು ಮಾನಸಿಕ ಅಸ್ಪಸ್ಥ ವ್ಯಕ್ತಿಯ ಕಟ್ಟಿ ಹಾಕಿ, ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿ ಬಂದ ಗ್ರಾಮಾಂತರ ಪೊಲೀಸರು ಆರೋಪಿಯಾಗಿರುವ ಮಾನಸಿಕ ಅಸ್ಪಸ್ಥ ವ್ಯಕ್ತಿಯನ್ನು ವಶಕ್ಕೆ ತೆಗೆದು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಮಾನ್ವಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರನಿಗಾ ವಿಭಾಗಕ್ಕೆ ದಾಖಲಿಸಲಾಗಿದೆ.

ಯಾರೀತ ಆರೋಪಿ?
ಕೊಡಗು ಜಿಲ್ಲೆಯ ಕುಶಾಲ ನಗರ ಸೋಮವಾರ ಪೇಟೆಯ ಭದ್ರೇಗೌಡ ಹಾಗೂ ಶಿವಮ್ಮ ದಂಪತಿಗಳ ಒಂಭತ್ತು ಮಂದಿ ಮಕ್ಕಳಲ್ಲಿ 4ನೇಯವನಾದ ನೀಲಾಧರ ಅಲಿಯಾಸ್ ಉಮೇಶ್ (35) ಎಂಬಾತ ಪ್ರಕರಣದ ಆರೋಪಿ.
ಎಸ್ಎಸ್ಎಲ್ ಸಿ ವರೆಗೆ ಕಲಿತು ಬೈಕ್ ಮೆಕಾನಿಕ್ ಆಗಿದ್ದ ಉಮೇಶ್ ಕಳೆದ 10 ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕಾಗಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿತ್ತಿದ್ದಂತೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆ ಸಂದರ್ಭದಲ್ಲಿ ಮಾನಸಿಕ ಆಸ್ವಸ್ಥಗೊಂಡು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹಲವು ಭಾರೀ ಚಿಕಿತ್ಸೆ ಪಡೆದಿದ್ದನು.
ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ ಆಸ್ತಿ ಹಂಚಿಕೆಯಾದ ಬಳಿಕ ಸಹೋದರ ಹಾಸಕನ ರುಕ್ಮಣಿ ಎಂಬವರ ಮನೆಯಲ್ಲಿ ನೆಲೆಸಿದ್ದ ಆತ ಕಳೆದ ಎರಡು ತಿಂಗಳ ಹಿಂದೆ ಮನೆಗೆ ಹೋಗಿ ಬರುತ್ತೇನೆಂದು ಹೊರಟು ಹೋದವನು ನಿಗೂಢ ರೀತಿಯಲ್ಲಿ ನಾಪತ್ತೆಯಾದವನು ಕೆದಿಂಜೆಯಲ್ಲಿ ನಡೆದಿರುವ ಘಟನಾವಳಿಯಿಂದ ಆತ ಬೆಳಕಿಗೆ ಬರಲು ಸಾಧ್ಯವಾಯಿತು.

ಮೊಬೈಲ್ ನಂಬ್ರ ನೀಡಿದ
ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಸ್ಥಳದಲ್ಲಿ ಇದ್ದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮನೆ ವಿಳಾಸ ಹಾಗೂ ಸಹೋದರ ಚಂದ್ರಶೇಖರ್ ನ ಮೊಬೈಲ್ ನಂಬ್ರ: 9449660400 ನೀಡಿದ್ದನು. ಅದರನ್ವಯ ನೀಲಾಧರನ ಜಾತಕ ಬಯಲಾಯಿತು. ಆಸ್ತಿ ಹಂಚಿಕೆಯ ಸಂದರ್ಭದಲ್ಲಿ ಜೋತಿಷ್ಯರೊಬ್ಬರ ಸೂಚನೆಯಂತೆ ಆತನ ಸ್ವಭಾವ ಬದಲಾಗಬೇಕೆಂಬ ಕಾರಣಕ್ಕಾಗಿ ನೀಲಾಧರನ ಹೆಸರನ್ನು ಉಮೇಶ ಎಂದು ಬದಲಾಯಿಸಿತ್ತಂತೆ.

See also  ವಿವಿಧ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನಿಂದ ಪ್ರತಿಭಟನೆ

ಆರೋಪಿ ಉಮೇಶನ್ನು ಮಂಗಳೂರು ವೆನ್ಲಾಕ್ ಗೆ
ಆರೋಪಿ ಉಮೇಶ ಮಾನಸಿಕ ಅಸ್ಪಸ್ಥನಾಗಿದ್ದಾನೆ ಎಂಬ ವೈದ್ಯರ ಸಲಹೆಯಂತೆ ಆತನನ್ನು ಮಂಗಳೂರಿನ ವೆನ್ಲಾಕ್ ಗೆ ದಾಖಲಿಸಾಲಗಿದೆ. ಆತನ ಮೈಪೂರ್ತಿ ಗಾಯದ ಗುರುತುಗಳು ಕಂಡುಬಂದಿದೆ. ಉಮೇಶ್ ನ ಮನೆ ಮಂದಿ ಕಾರ್ಕಳ ಕಡೆಗೆ ಪ್ರಯಾಣ ಬೆಳೆಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.   

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು