ಕಾಸರಗೋಡು: ಕಾರ್ಮಿಕನೋರ್ವನ ಮೃತದೇಹ ವಾಸಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ನಾಯಮ್ಮರ ಮೂಲೆಯಲ್ಲಿ ನಡೆದಿದೆ.
ತ್ರಿಶೂರು ವಡಕ್ಕಂಚೇರಿಯ ಸಣ್ಣಿ ಥೋಮಸ್(48) ಮೃತಪಟ್ಟವರು.
ಕಳೆದ ಕೆಲ ವರ್ಷಗಳಿಂದ ನಾಯಮ್ಮರ ಮೂಲೆಯಲ್ಲಿ ವಾಸವಿದ್ದು, ಟೈಲ್ಸ್ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ದುರ್ವಾಸನೆ ಕಂಡು ಬಂದುದರಿಂದ ಸಮೀಪದ ಕ್ವಾಟರ್ಸ್ ನಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದರು.
ವಿದ್ಯಾನಗರ ಠಾಣಾ ಪೊಲೀಸರು ತಲುಪಿದ್ದು, ಒಳಗಿನಿಂದ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಕೊನೆಗೆ ಬಾಗಿಲು ಮುರಿದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.