ಮಂಗಳೂರು: ಮಂಗಳೂರಿನ ಮೇಯರ್ ಕವಿತಾ ಸನಿಲ್ ಹಾಟ್ ಸೀಟ್‌ನಲ್ಲಿ ಕೂತಿದ್ದರೂ ತಮ್ಮ ಅಭಿರುಚಿಯನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ದಿನವಿಡೀ ಕರೆಗಳ ಸುರಿಮಳೆ, ನಾನಾ ಕಾರ್ಯಕ್ರಮಗಳು, ವಿಪಕ್ಷ, ಪಕ್ಷದ ಟೀಕೆಗಳು, ನಗರದ ಹಲವು ಸಮಸ್ಯೆಗಳತ್ತ ಗಮನಹರಿಸುವುದು ಸೇರಿದಂತೆ ನೂರೆಂಟು ಹೊಣೆಗಾರಿಕೆಯ ಮಧ್ಯೆಯೂ ಮೇಯರ್ ಕವಿತಾ ಸನಿಲ್ ಕರಾಟೆ ಸ್ಪರ್ಧೆ ಗೆ ಸಿದ್ಧತೆ ನಡೆಸುತ್ತಿದ್ದಾರೆ.
ಹಿಂದೆ ಕರಾಟೆಯಲ್ಲಿ ಬರೋಬ್ಬರಿ 58 ಪದಕಗಳನ್ನು ಕೊರಳಿಗೇರಿಸಿಕೊಂಡವರು ಕವಿತಾ. ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮಹಿಳಾ ಪ್ರತಿನಿಧಿಯಾಗಿ ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಅಭ್ಯಾಸದಲ್ಲಿ ತೊಡಗಿದ್ದಾರೆ.
ಇಷ್ಟೊಂದು ಕಾರ್ಯದೊತ್ತಡದ ಮಧ್ಯೆಯೂ ಇವರ ಉತ್ಸಾಹಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು.