ವರ್ಕಾಡಿ: ಕೇರಳ ಸರಕಾರದ ಸಂಪೂರ್ಣ ಶುಚೀಕರಣ ಯಜ್ಞದ ಅಂಗವಾಗಿ ವರ್ಕಾಡಿ ಗ್ರಾಮ ಪಂಚಾಯತಿನ ಪಾವೂರು, ಕೆದುಂಬಾಡಿ, ಸುಣ್ಣಂಗಳ, ಪಾವಳ, ಪೊಯ್ಯತ್ತಬೈಲ್, ಸುಳ್ಯಮೆ, ಪಾತೂರು, ತಲಕ್ಕಿ, ಆನೆಕಲ್ಲು, ಉರ್ಣಿ, ಧರ್ಮನಗರ, ಬೇಕರಿ ಜಂಕ್ಷನ್, ಮೊರತ್ತಣೆ ಮುಂತಾದ ಕಡೆಗಳಲ್ಲಿ ಶುಚೀಕರಣವು ನಡೆಯಿತು.
ಶುಚೀಕರಣಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ, ಉಪಾಧ್ಯಕ್ಷ ಸುನೀತ ಡಿಸೋಜ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಹಮತ್ ರಝಾಕ್, ತುಳಸಿ ಕುಮಾರಿ, ಜೆಸಿಂತಾ ಡಿಸೋಜ ಹಾಗೂ ಜನಪ್ರತಿನಿಧಿಗಳು, ಕುಟುಂಬಶ್ರೀ ಸದಸ್ಯರು, ಆಶಾ ವರ್ಕರ್ಸ್, ಅಂಗನವಾಡಿ ಕಾರ್ಯಕರ್ತರು, ವಿವಿಧ ಕ್ಲಬ್ಗಳ ಸದಸ್ಯರು, ಉದ್ಯೋಗ ಖಾತರಿ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಮೆಡಿಕಲ್ ಆಫೀಸರ್ ಪ್ರವೀಣ್, ಹೆಲ್ತ್ ಇನ್ಸ್ಪೆಕ್ಟರ್ ಮುರಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಸ್ಥರು ವಿವಿಧ ಕಡೆಗಳಲ್ಲಾಗಿ ಭಾಗವಹಿಸಿದರು.
ನಾಳೆ ವರ್ಕಾಡಿ ಗ್ರಾಮ ಪಂಚಾಯತಿನ ಘಟಕ ಸ್ಥಾಪನೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿಭವನ, ವೆಟರ್ನರಿ ಡಿಸ್ಪೆನ್ಸರಿ, ಆಯುರ್ವೇದಿಕ್ ಡಿಸ್ಪೆನ್ಸರಿ, ಹೋಮಿಯೋ ಡಿಸ್ಪೆನ್ಸರಿ ಹಾಗೂ ಎಲ್ಲಾ ಅಂಗನವಾಡಿ ಪರಿಸರದಲ್ಲಿಯೂ ಶುಚೀಕರಣ ಪ್ರವೃತ್ತಿಯು ನಡೆಯಲಿರುವುದು.