ಬಂಟ್ವಾಳ; ಇಲ್ಲಿನ ಪೊಲೀಸ್ ಉಪವಿಭಾಗಕ್ಕೆ ಮತ್ತೆ ಐಪಿಎಸ್ ಖದರ್ ಬಂದಿದೆ. ಬಂಟ್ವಾಳ ಉಪವಿಭಾಗದ ನೂತನ ಎಎಸ್ಪಿಯಾಗಿ ಡಾ.ಅರುಣ್ ಐಪಿಎಸ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬಂಟ್ವಾಳಕ್ಕೆ ನೂತನ ಎಎಸ್ಪಿ ಕಛೇರಿ ಬಂದ ಬಳಿಕ ಐಪಿಎಸ್ ರಾಹುಲ್ ಕುಮಾರ್ ಎಎಸ್ಪಿಯಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಅವರು ಹಾಸನಕ್ಕೆ ಎಸ್ಪಿಯಾಗಿ ವರ್ಗಾವಣೆಗೊಂಡ ಬಳಿಕ ಬಂಟ್ವಾಳಕ್ಕೆ ಡಿವೈಎಸ್ಪಿಯಾಗಿ ರವೀಶ್ ಸಿ.ಆರ್ ಕಾರ್ಯನಿರ್ವಹಿಸುತ್ತಿದ್ದರು.
ಇದೀಗ ಇತ್ತೀಚೆಗಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಎಸ್ಪಿ, ಎಡಿಷನಲ್ ಎಸ್ಪಿಯವರ ವಾರ್ಗವಣೆ ನಡೆದಿದ್ದು. ಇವರ ಬೆನ್ನಲ್ಲೇ ಬಂಟ್ವಾಳ ಡಿವೈಎಸ್ಪಿ ರವೀಶ್ ವರ್ಗಾವಣೆ ನಡೆದಿತ್ತು. ಇದೀಗ ಅವರ ಸ್ಥಾನಕ್ಕೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಎಎಸ್ಪಿಯಾಗಿದ್ದ ಡಾ.ಅರುಣ್ ಅಧಿಕಾರ ಸ್ವೀಕರಿಸಿದ್ದಾರೆ.