News Kannada
Friday, December 09 2022

ಕರಾವಳಿ

ಕಾನೂನಿನ ಚೌಕಟ್ಟಿನಲ್ಲಿ ಕೊಲ್ಲಿ- ಬಂಗಾಡಿ ಕಂಬಳ ಈ ವರ್ಷ ನಡೆಯಲಿದೆ: ಡಾ| ಯಂ. ಯಂ. ದಯಾಕರ

Photo Credit :

ಕಾನೂನಿನ ಚೌಕಟ್ಟಿನಲ್ಲಿ ಕೊಲ್ಲಿ- ಬಂಗಾಡಿ ಕಂಬಳ ಈ ವರ್ಷ ನಡೆಯಲಿದೆ: ಡಾ| ಯಂ. ಯಂ. ದಯಾಕರ

ಬೆಳ್ತಂಗಡಿ: ಕಂಬಳ ಜನಪದ ಕ್ರೀಡೆ. ಇದನ್ನು ಉಳಿಸುವಲ್ಲಿ ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ. ಕಾನೂನಿನ ಚೌಕಟ್ಟಿನಲ್ಲಿ ಕೊಲ್ಲಿ- ಬಂಗಾಡಿ ಕಂಬಳ ಈ ವರ್ಷ ನಡೆಯಲಿದೆ ಎಂದು ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ಡಾ| ಯಂ. ಯಂ. ದಯಾಕರ ಹೇಳಿದರು.

ಅವರು ಭಾನುವಾರ ಓಡಿಲ್ನಾಳ ಸೇಡಿ ತೋಮಸ್ ಪಿರೇರಾ ಇವರ ಗದ್ದೆಯಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಇತರ ಸಂಘಸಂಸ್ಥೆಗಳ ಸಹಕಾರದೊಂದೊಂದಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆ ಹಾಗೂ ಕೆಸರುಗದ್ದೆ ಆಟೋಟ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪಳಗಿದ ಕೃಷಿಕರಿದ್ದು ಅವರಿಗೆ ಕೃಷಿಯ ಬಗ್ಗೆ ಹೆಚ್ಚಿನ ಜ್ಞಾನವಿದೆ. ತಂತ್ರಜ್ಞಾನವನ್ನು ಬಳಸಿ ಹೊಸ ಅವಿಷ್ಕಾರದೊಂದಿಗೆ ಕೃಷಿಯನ್ನು ಉಳಿಸಬೇಕು. ತುಳುನಾಡಿನಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳು, ಆಚರಣೆಗಳು ಇಂದಿಗೂ ಉಳಿದಿದೆ. ಇಲ್ಲಿನ ಮಣ್ಣಿನ ಸೊಗಡನ್ನು ಕೃಷಿಯ ಮೂಲಕ ರೈತರು ತೋರಿಸುತ್ತಿದ್ದಾರೆ. ಕೃಷಿ ವಿವಿಗಳಲ್ಲಿ ಪದವಿ ಪಡೆದವರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಉದ್ಯೋಗ ಮಾಡುವವರೇ ಅಧಿಕ ಮಂದಿ. ಯುವ ಜನಾಂಗದ ಕೃಷಿಕರಿಗೆ ಒಂದು ದಿನ ತರಬೇತಿ ಮಾಡಿದರೆ ಸಾಲದು, ಅವರಿಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದ ಅವರು ಕಂಬಳ ತುಳುನಾಡಿನ ಜನಪದ ಕ್ರೀಡೆ. ಇದನ್ನು ಉಳಿಸುವಲ್ಲಿ ಹೋರಾಟಗಳು ನಡೆದಿದೆ. ಕಾನೂನಿನ ಚೌಕಟ್ಟಿನಲ್ಲಿ ಕೊಲ್ಲಿ-ಬಂಗಾಡಿ ಕಂಬಳ ಈ ವರ್ಷ ನಡೆಯಲಿದೆ ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಸಂತ ಮಜಲು ಅವರು, ಭತ್ತದ ಕೃಷಿಯನ್ನು ಹಾಗೂ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶತಮಾನೋತ್ಸವವನ್ನು ಆಚರಿಸಿದ ಕಳಿಯ ಸೊಸೈಟಿ ರೈತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದೆ. ಕೃಷಿ ಭುಮಿಯನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತನೆ ಆಗಬಾರದು, ಕೃಷಿಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಎಲ್ಲರ ಸಹಕಾರದೊಂದಿಗೆ ಆಯೋಜಿಸಲಾಗಿದೆ ಎಂದರು. ಓಡಿಲ್ನಾಳ ನಡುಮನೆ ನಾರಾಯಣ ಭಟ್ ಎನ್.ಕೆ. ಭತ್ತದ ನಾಟಿ ಉದ್ಘಾಟಿಸಿ, ಶುಭಹಾರೈಸಿದರು. ಓಡೀಲು ದೇವಳದ ಪ್ರಧಾನ ಅರ್ಚಕ ರಘುರಾಮ್ ಭಟ್ ಮಠ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಜಯಕರ ಶೆಟ್ಟಿ, ಮಂಗಳೂರು ಕೆವಿಕೆ ಕೃಷಿ ವಿಜ್ಞಾನಿ ಹರೀಶ್ ಶೆಣೈ, ಜಿಪಂ ಸದಸ್ಯೆ ಮಮತಾ ಶೆಟ್ಟಿ, ತಾಪಂ ಸದಸ್ಯರಾದ ಪ್ರವೀಣ್ ಗೌಡ, ಗೋಪಿನಾಥ್ ನಾಯಕ್, ಎಪಿಎಂಸಿ ಸದಸ್ಯೆ ಸೆಲೆಸ್ಟಿನ್ ಡಿಸೋಜ, ಕಳಿಯ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕುವೆಟ್ಟು ಗ್ರಾಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಬೆಳ್ತಂಗಡಿ ಸೊಸೈಟಿ ಅಧ್ಯಕ್ಷ ಮುನಿರಾಜ ಅಜ್ರಿ, ವೇಣೂರು ಸೊಸೈಟಿ ಅಧ್ಯಕ್ಷ ಬಿ. ಸುಂದರ ಹೆಗ್ಡೆ, ಪದ್ಮುಂಜ ಸೊಸೈಟಿ ಅಧ್ಯಕ್ಷ ರಾಜೀವ ರೈ, ಬೆಳ್ತಂಗಡಿ ರೈತ ಕೇಂದ್ರ ಕೃಷಿ ಅಧಿಕಾರಿ ನಾರಾಯಣ ಪೂಜಾರಿ, ಪ್ರಗತಿಪರ ಕೃಷಿಕ ಜೆರಾಲ್ಡ್ ಪಿರೇರಾ, ಸಂಘದ ಉಪಾಧ್ಯಕ್ಷ ರಾಜೀವ ಗೌಡ, ಸಂಘದ ಮಾಜಿ ಅಧ್ಯಕ್ಷರುಗಳಾದ ಜನಾರ್ಧನ ಎಂ., ಬಿ. ಜಗನ್ನಾಥ, ಹರಿದಾಸ್ ಪಡಂತ್ತಾಯ, ಸಂಜೀವ ಬಂಗೇರ, ಮದ್ದಡ್ಕ ಎಂಪಿಸಿಎಸ್ ಅಧ್ಯಕ್ಷ ಗೋಪಾಲ ಶೆಟ್ಟಿ, ಓಡಿಲ್ನಾಳ ಎಂಪಿಸಿಎಸ್ ಅಧ್ಯಕ್ಷ ಚಿನ್ನಯ್ಯ ಮೂಲ್ಯ, ಸ್ನೇಹ ಅಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷ ಪದ್ಮನಾಭ ಪೂಜಾರಿ, ಭದ್ರಕಜೆ ಯುವಶಕ್ತಿಯ ಅಧ್ಯಕ್ಷ ಅರುಣ್ ಸುಮಿತ್, ನವೋದಯ ಸ್ವಸಹಾಯ ಒಕ್ಕೂಟ ಅಧ್ಯಕ್ಷ ಶ್ಯಾಮಣ್ಣ ನಾಯಕ್ ಉಪಸ್ಥಿತರಿದ್ದರು.

See also  ಧರ್ಮಸ್ಥಳ ಲಕ್ಷದೀಪೋತ್ಸವದಲ್ಲೊಂದು ಮಾದರಿ ಮನೆ

ಪುರುಷರಿಗೆ ಮತ್ತು ಮಹಿಳೆಯರಿಗೆ ತಾಲೂಕು ಮಟ್ಟದ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ, ಸ್ಥಳೀಯ ಮಕ್ಕಳಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ಹಗ್ಗದ್ದು, ಅಡ್ಡ ಹಲಗೆ ಸೇರಿದಂತೆ 5 ಜತೆ ಕಂಬಳದ ಕೋಣಗಳು ಬಂದಿದ್ದು ಪ್ರದರ್ಶನ ನಡೆಯಿತು. ಗದ್ದೆಯಲ್ಲಿ ನೇಜಿ ನೆಡುವ ಮೂಲಕ ನಾಟಿ ಮಾಡಲಾಯಿತು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಲಯನ್ಸ್ ಕ್ಲಬ್, ಶ್ರೀ ಕ್ಷೇ. ಧ. ಗ್ರಾ. ಯೋಜನೆ, ನವೋದಯ ಸ್ವ ಸಹಾಯ ಗುಂಪುಗಳ ಒಕ್ಕೂಟ, ಸ್ನೇಹ ಸಂಗಮ ಅಟೋ ಚಾಲಕ-ಮಾಲಕರು, ಕಳಿಯ ಗ್ರಾ.ಪಂ., ಕುವೆಟ್ಟು ಗ್ರಾ.ಪಂ., ಗೇರುಕಟ್ಟೆ, ನಾಳ, ಓಡಿಲ್ನಾಳ, ಮದ್ದಡ್ಕ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಯುವ ಶಕ್ತಿ ಭದ್ರಕಜೆ ಶಕ್ತಿ ಯುವಕ ಮಂಡಲ ರೇಷ್ಮೆರೋಡ್ ಸಹಕರಿಸಿದ್ದರು.

ಕಾರ್ಯಕ್ರಮದ ಸಂಚಾಲಕ ಶೇಖರ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಕಾರಿ ಕೆ. ಯಸ್. ಹರಿಪ್ರಸಾದ್ ವಂದಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಪೊಟೊ 30 ಡಿಎಲ್ ಕಳಿಯ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು