News Kannada
Wednesday, October 05 2022

ಕರಾವಳಿ

ಹುಲಿಯೋಜನೆ, ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲ್ಲ: ರಮಾನಾಥ ರೈ - 1 min read

Photo Credit :

ಹುಲಿಯೋಜನೆ, ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲ್ಲ: ರಮಾನಾಥ ರೈ

ಕಾರ್ಕಳ: ಜನರ ಭಾವನೆಯನ್ನು ಗೌರವಿಸಿರುವ ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಹುಲಿಯೋಜನೆ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತರಲು ಬಿಡದೆಂದು ಅರಣ್ಯ ಸಚಿವ ಬಿ.ರಮಾನಾಥ ರೈ ಘಂಟಾಘೋಷವಾಗಿ ಸಾರಿದರು.

ನಗರದ ಗ್ಯಾಲಕ್ಸಿ ವಿವಿದ್ದೋದ್ದೇಶ ಸಭಾಭವನದಲ್ಲಿ ಆಯೋಜಿಸಲಾಗಿದ್ದ 63ನೇ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಹುಲಿ ಯೋಜನೆ ಜಾರಿಗೊಳಿಸುವಂತೆ ಹಿಂದಿನ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು. ಬದಲಾದ ಆಡಳಿತದಲ್ಲಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಇದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದು, ಜನರ ನಿರ್ಧಾರವೇ ಅಂತಿಮ. ಅದನ್ನು ಹೊರತು ಪಡಿಸಿ ಹುಲಿ ಯೋಜನೆಯಾಗಲಿ, ಕಸ್ತೂರಿ ರಂಗನ್ ವರದಿಯಾಗಲಿ ಅಥವಾ ಇತರ ಯಾವುದೇ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿತ್ತು. ರಾಜ್ಯ ಸರಕಾರದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರಕಾರವು ಹುಲಿಯೋಜನೆ ಜಾರಿಗೊಳಿಸಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಅಂತಿಮ ಘೋಷಣೆ ಮಾತ್ರ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದರು.

ಜನರ ಭಾವನೆಗೆ ವಿರುದ್ಧವಾಗಿ ಕೇಂದ್ರ ಸರಕಾರ ಯಾವುದೇ ಯೋಜನೆ ಜಾರಿಗೊಳಿಸಲು ಮುಂದಾದರೆ ತಕ್ಕ ಉತ್ತರವನ್ನು ಹೋರಾಟದ ಮೂಲಕ ನೀಡಲಿದ್ದೇವೆ ಎಂಬ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ನೀಡಿದರು.

ವನ್ಯಜೀವಿಯಲ್ಲಿ ಕರ್ನಾಟಕ ನಂಬ್ರ 1
ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಕರ್ನಾಟಕವೊಂದರಲ್ಲಿ 406 ಸಂಖ್ಯೆಯಲ್ಲಿ ಕಾಣಿಸುವ ಮೂಲಕ ರಾಷ್ಟ್ರದಲ್ಲಿಯೇ ಕರ್ನಾಟಕ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 6000 ಮಿಕ್ಕಿ ಆನೆಗಳು, ಚಿರತೆಗಳು, ಸಿಂಗಾಳಿಕ ಮುಂತಾದ ಪ್ರಾಣಿಗಳು ಅತೀ ಹೆಚ್ಚು ಇರುವುದೇ ಕರ್ನಾಟಕದಲ್ಲಿ. ವನ್ಯ ಸಂರಕ್ಷಣಾ ಬಗ್ಗೆ ಅತೀ ಹೆಚ್ಚಿನ ರೀತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ರಾಜ್ಯ ಕರ್ನಾಟಕವಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಅಂಕಿಅಂಶ ನೀಡಿದರು.

See also  ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು