News Kannada
Tuesday, September 27 2022

ಕರಾವಳಿ

ಸಂಪಾಜೆ ಯಕ್ಷೋತ್ಸವ: ಎಡನೀರು ಶ್ರೀಗಳಿಗೆ ಶೇಣಿ ಶತಾಬ್ದ ಗೌರವ - 1 min read

Photo Credit :

ಸಂಪಾಜೆ ಯಕ್ಷೋತ್ಸವ: ಎಡನೀರು ಶ್ರೀಗಳಿಗೆ ಶೇಣಿ ಶತಾಬ್ದ ಗೌರವ

ಸುಳ್ಯ: ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಸಂಪಾಜೆ ಯಕ್ಷೊತ್ಸವ ಶನಿವಾರ ಆರಂಭಗೊಂಡಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ದೀಪ ಬೆಳಗಿಸಿ ಯಕ್ಷೋತ್ಸವವನ್ನು ಉದ್ಘಾಟಿಸಿದರು.

ಬಳಿಕ ಆಶೀರ್ವಚನಗೈದ ಅವರು ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಂಪಾಜೆ ಯಕ್ಷೋತ್ಸವ ಬಲುದೊಡ್ಡ ಕೊಡುಗೆ ನೀಡಿದೆ ಎಂದು ನುಡಿದರು.

ಆಶೀರ್ವಚನ ನೀಡಿದ ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಸಂಪಾಜೆ ಯಕ್ಷೋತ್ಸವ ನಿರಂತರ ಪ್ರೋತ್ಸಾಹ ನೀಡಿದೆ ಎಂದರು. ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಅಂತರಂಗ ಬಹಿರಂಗ ಬೆಳೆಸುವ, ಬೆಳಗುವ ಕಲೆ ಯಕ್ಷೊತ್ಸವ. ವ್ಯಕ್ತಿತ್ವ ರೂಪಿಸುವ ಪರಿಕರ. ಸಂಪಾಜೆ ಯಕ್ಷೋತ್ಸವದ ಮೂಲಕ ಇದು ಮತ್ತಷ್ಟು ಬೆಳಗಿದೆ ಎಂದರು.

ಎಡನೀರು ಮಠದ ಕೇಶವಾನಂದ ಭಾರತೀ ಮಹಾಸ್ವಾಮಿಯವರಿಗೆ ಶೇಣಿ ಜನ್ಮ ಶತಾಬ್ದ ಗೌರವ ನೀಡಿ ಅಭಿನಂದಿಸಲಾಯಿತು. ಟಿ.ಶ್ಯಾಂ ಭಟ್ ಅಭಿನಂದನಾ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಶೇಣಿ ಒಡನಾಡಿ ಕಲಾವಿದರಿಗೆ ಶೇಣಿ ಜನ್ಮಶತಾಬ್ದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇ.ಮೂ.ಕೇಕಣಾಜೆ ಶಂಭಟ್ಟ ಅವರನ್ನು ಅಭಿನಂದಿಸಲಾಯಿತು, ಪ್ರಸಿದ್ಧ ಯಕ್ಷಗಾನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಸ್.ಭಟ್ ಡಾ.ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣೆ ಮಾಡಿದರು. ವಿಮರ್ಶಕ ಎ.ಈಶ್ವರಯ್ಯ ಶೇಣಿ ಸಂಸ್ಮರಣಾ ಭಾಷಣ ಮಾಡಿದರು. ವೈದಿಕ ವಿದ್ವಾಂಸ ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಗೈದರು.

ವೇದಿಕೆಯಲ್ಲಿ ಕೀಲಾರು ಪ್ರತಿಷ್ಠಾನದ ಅಧ್ಯಕ್ಷೆ ವಿಜಯಲಕ್ಷ್ಮೀ ಕೀಲಾರು, ಉಪಾಧ್ಯಕ್ಷ ಕೆ.ಜಿ.ರಾಜಾರಾಮ, ಕಾರ್ಯದರ್ಶಿ ಸುಮನಾ ಶ್ಯಾಂಭಟ್, ಕೋಶಾಧಿಕಾರಿ ಮುರಳೀಧರ ಉಪಸ್ಥಿತರಿದ್ದರು. ಹಿರಣ್ಯ ವೆಂಕಟೇಶ್ವರ ಭಟ್, ವಾಸುದೇವ ರಂಗಾಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮ ಮುಗಿದ ಬಳಿಕ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ವೀರಮಣಿಕಾಳಗ, ಕನಕಾಂಗಿ ಕಲ್ಯಾಣ(ಬಡಗು), ಯಶೋಮತಿ-ಏಕಾವಳಿ ವಿವಾಹ ಮತ್ತು ಧೀರ ದುಂದುಭಿ ಪ್ರಸಂಗ ಪ್ರದರ್ಶನಗೊಂಡಿತು.

See also  ಪತ್ನಿ ಕತ್ತಿಯೇಟಿಗೆ ಪತಿ ಸಾವು: ಕೊಲೆ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು