News Kannada
Friday, September 30 2022

ಕರಾವಳಿ

ಬೀದಿ ನಾಯಿ ದಾಳಿಗೊಳಗಾದ ಮಹಿಳೆ ಗಂಭೀರ - 1 min read

Photo Credit :

ಬೀದಿ ನಾಯಿ ದಾಳಿಗೊಳಗಾದ ಮಹಿಳೆ ಗಂಭೀರ

ಬಂಟ್ವಾಳ: ಬೀದಿ ನಾಯಿ ದಾಳಿಗೆ ಸಿಲುಕಿದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಬಂಟ್ವಾಳ ಪುರಸಭೆ ವ್ಯಾಪ್ತಿಯ ಭಂಡಾರಿಬೆಟ್ಟುವಿನಲ್ಲಿ ನಡೆದಿದೆ.

ಇಲ್ಲಿನ ಹೇಮಾವತಿ (50) ಎಂಬವರೇ ಬೀದಿ ನಾಯಿ ಕಚ್ಚಿ ಗಾಯಗೊಂಡವರಾಗಿದ್ದಾರೆ. ಸ್ಥಳೀಯರು ಗಾಯಾಳು ಹೇಮಾವತಿ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾರೆ.

ಇವರು ಸಂಜೆಯ ವೇಳೆಗೆ ಮನೆಯಿಂದ ಬೀಡಿ ಬ್ರಾಂಚ್ ಗೆಂದು ತೆರಳುತ್ತಿದ್ದಾಗ ಭಂಡಾರಿಬೆಟ್ಟು ಬಳಿರುವ ಕೃಷ್ಣ ಭಜನಾ ಮಂದಿರ ಸಮೀಪ ತಿರುಗಾಡುತ್ತಿದ್ದ ಬೀದಿ ನಾಯಿಗಳು ಇವರನ್ನು ಅಟ್ಟಾಡಿಸಿ ಇವರ ಕೈ ಹಾಗೂ ಕಾಲಿನ ಭಾಗಕ್ಕೆ ಕಡಿದಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಪರಿಸರದಲ್ಲಿ ಬೀದಿ ನಾಯಿಗಳ ಕಾಟದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಪುರಸಭೆ ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಯ ಸಂತಾನಹರಣ  ನಡೆಸಿತ್ತು. ಆದರೆ ಬೀದಿ ನಾಯಿ ಕಾಟ ತಡೆಯುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸ್ಥಳೀಯರ ಆರೋಪ.

See also  ಬೈಕ್ ಚಕ್ರಕ್ಕೆ ಚೂಡಿದಾರ್ ಶಾಲು ಸಿಲುಕಿ ರಸ್ತೆಗೆಸೆಯಲ್ಪಟ್ಟು ಬಾಲಕಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು