News Kannada
Saturday, October 01 2022

ಕರಾವಳಿ

ವೈದ್ಯರ ಮುಷ್ಕರದಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಂಟ್ವಾಳದ ಯುವಕ ಸಾವು - 1 min read

Photo Credit :

ವೈದ್ಯರ ಮುಷ್ಕರದಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಂಟ್ವಾಳದ ಯುವಕ ಸಾವು

ಬಂಟ್ವಾಳ : ವಿಟ್ಲ ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನೋರ್ವ ವೈದ್ಯರ ಮುಷ್ಕರದ ಪರಿಣಾಮ ಸಕಾಲಕ್ಕೆ ಚಿಕಿತ್ಸೆ ಸಿಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ರಾಯರಬೆಟ್ಟು ರುಕ್ಮ ಪೂಜಾರಿ ಅವರ ಪುತ್ರ ರಜತ್ ರಾಜ್(27) ಅವರು ಮೃತಪಟ್ಟ ಯುವಕ. ಈತ ಕಳೆದ ಒಂದೂವರೆ ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಗುರುವಾರ ಮತ್ತೆ ಅನಾರೋಗ್ಯ ಕಾಡಿದೆ.

ವೈದ್ಯರ ಮುಷ್ಕರವಿದ್ದುದರಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ 108ರಲ್ಲಿ ಒಯ್ದು ದಾಖಲಿಸಲಾಗಿತ್ತು. ಆದರೆ ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆ ವ್ಯವಸ್ಥೆ ಇಲ್ಲವೆಂದು ಅಲ್ಲಿನ ವೈದ್ಯರು ತಿಳಿಸಿದ್ದರು.

ರಾತ್ರಿ ತೀವ್ರ ಅನಾರೋಗ್ಯ ಕಾಡಿದಾಗ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ನೀಡಿದರೂ ಶುಕ್ರವಾರ ರಜತ್ರಾಜ್ ಮೃತಪಟ್ಟರು ಎಂದು ತಿಳಿದುಬಂದಿದೆ.

ರಜತ್ ರಾಜ್ ಅವಿವಾಹಿತನಾಗಿದ್ದು, ತಂದೆ, ತಾಯಿ ಮತ್ತು ಹಿರಿಯ ಸಹೋದರನನ್ನು ಅಗಲಿದ್ದಾರೆ.

See also  ಮರವೂರು ನದಿಗೆ ಬಿದ್ದ ಕಾರು: ಇಬ್ಬರು ಯುವತಿಯರು ಅದೃಷ್ಟವಶಾತ್ ಪಾರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು