ಬೆಳ್ತಂಗಡಿ: ಬಾಲಕನೋರ್ವ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.
ವೇಣೂರು ಗ್ರಾಮದ ನೀರಪಲ್ಕೆ ಎಂಬಲ್ಲಿನ ನಿವಾಸಿ ಶ್ಯಾಮ ದೇವಾಡಿಗ ಎಂಬುವರ ಪುತ್ರ ಶ್ರೀಕಾಂತ್ (11) ಎಂಬ ಬಾಲಕನೇ ಮೃತಪಟ್ಟ ದುರ್ದೈವಿ. ಈತ ಆಟ ಆಡುತ್ತಿದ್ದ ವೇಳೆ ಪಕ್ಕದ ಮನೆಯ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ.
ಮನೆಯಲ್ಲಿ ತಂದೆ-ತಾಯಿ ಇಲ್ಲದ ವೇಳೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಬಾಲಕ ಹಾಗು ಆತನ ತಂಗಿ ಮಾತ್ರ ಇದ್ದರು. ಶ್ರೀಕಾಂತ್ ಬಾವಿಗೆ ಬಿದ್ದಿದ್ದನ್ನು ನೋಡಿದ ಈತನ ತಂಗಿ ಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಪಕ್ಕದ ಮನೆಯವರು ಕೂಡಲೇ ಸನಿಹದವರಿಗೆ ತಿಳಿಸಿದ್ದಾರೆ. ಮೃತದೇಹವನ್ನು ಬಾವಿಯಿಂದ ತೆಗೆಸಿದ್ದಾರೆ. ಬಾಲಕ ವೇಣೂರು ವಿದ್ಯೋದಯ ಶಾಲೆಯಲ್ಲಿ ಐದನೇ ತರಗತಿ ವಿದ್ಯಾಥರ್ಿ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.