News Kannada
Thursday, October 06 2022

ಕರಾವಳಿ

ಅಕ್ರಮ ಗೋಮಾಂಸ ಸಾಗಾಟ: ಹಿಂದೂ ಸಂಘಟನೆಗಳ ಪ್ರತಿಭಟನೆ - 1 min read

Photo Credit :

ಅಕ್ರಮ ಗೋಮಾಂಸ ಸಾಗಾಟ: ಹಿಂದೂ ಸಂಘಟನೆಗಳ ಪ್ರತಿಭಟನೆ

ಬೆಳ್ತಂಗಡಿ: ಅಕ್ರಮ ಗೋಮಾಂಸ ಸಾಗಾಟದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆ ಸಿಬ್ಬಂದಿಗಳು ಆರೋಪಿಗಳ ಜತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಬೆಳ್ತಂಗಡಿ ಠಾಣೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ನೀಡಿದರು.

ನಾವೂರು ಗ್ರಾಮದಲ್ಲಿ ಅಕ್ರಮ ಗೋಮಾಂಸ ಮಾರಾಟ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಆರಕ್ಷಕ ಠಾಣೆಗೆ ಮಾಹಿತಿ ನೀಡಿದ್ದರು. ಇದರಿಂದ ಇಬ್ಬರನ್ನು ಬಂಧಿಸಿ, ಗೋಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿ ಮೂರನೇ ಒಂದು ಅಂಶವನ್ನು ನಾಶ ಪಡಿಸಿ, ಉಳಿಕೆಯನ್ನು ಆರೋಪಿಗಳಿಗೆ ಹಿಂದಿರುಗಿಸಿದ್ದಾರೆ.

ಆರೋಪಿಗಳ ಜತೆ ಶಾಮೀಲಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾನೂನು ರಕ್ಷಣೆ ಮಾಡುವವರೇ ಅಕ್ರಮ ಕೃತ್ಯ ಮಾಡುತ್ತಿರುವವರ ಜತೆ ಕೈಜೋಡಿಸಿರುವುದು ಸರಿಯಲ್ಲ. ಈ ರೀತಿಯಾಗಿ ಮುಂದುವರಿದರೆ ಸಂಘಟನೆಯಿಂದ ಅಕ್ರಮ ಗೋಸಾಗಾಟ ಮಾಡುವವರ ವಿರುದ್ಧ ಹಾಗೂ ಇಲಾಖೆಯಿಂದ ಉತ್ತೇಜನ ನೀಡುವವವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘಟನೆಯಿಂದ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರಿಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಬೆಳ್ತಂಗಡಿ ಕಾರ್ಯದರ್ಶಿ ನವೀನ್ ನೆರಿಯ, ನಗರ ಅಧ್ಯಕ್ಷ ಮೋಹನ್, ಬಜರಂಗದಳ ತಾಲೂಕು ಸಹ ಸಂಚಾಲಕರಾದ ರಾಮ್ ಪ್ರಸಾದ್ ಮರೋಡಿ, ರಮೇಶ್ ಧರ್ಮಸ್ಥಳ, ದಿನೇಶ್ ಚಾರ್ಮಾಡಿ, ಬಿಜೆಪಿ ತಾಲೂಕು ಕಾರ್ಯದರ್ಶಿ ಸೀತಾರಾಮ ಬೆಳಾಲು, ಮುಖಂಡರಾದ ಹರೀಶ್ ಸಾಲಿಯಾನ್, ಮಹಾಬಲ ಗೌಡ ಮೊದಲಾದವರು ಇದ್ದರು.

See also  ಫೆ.10 ರಂದು ಸ್ನೇಹ ಶಾಲೆಗೆ 'ಭಾರತರತ್ನ' ಸಿ.ಎನ್.ಆರ್. ರಾವ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು