News Kannada
Friday, September 30 2022

ಕರಾವಳಿ

ಅನ್ಯ ಧರ್ಮದ ಮಹಿಳೆಯ ಮನೆಯ ಅಟ್ಟದಲ್ಲಿ ಬಡಗಿ ನಿಗೂಢ ಸಾವು - 1 min read

Photo Credit :

ಅನ್ಯ ಧರ್ಮದ ಮಹಿಳೆಯ ಮನೆಯ ಅಟ್ಟದಲ್ಲಿ ಬಡಗಿ ನಿಗೂಢ ಸಾವು

ಪುತ್ತೂರು: ಬಡಗಿಯೊಬ್ಬನ ಮೃತದೇಹ ಮುಸ್ಲಿಂ ಮಹಿಳೆಯ ಮನೆಯ ಅಟ್ಟದಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಗಿ ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದು ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೃದಯಾಘಾತಕ್ಕೀಡಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಘಟನೆಗೆ ಸಂಬಂಧಿಸಿ ನಾನಾ ಊಹಾಪೋಹಗಳು ಹರಡಿ ಸ್ಥಳದಲ್ಲಿ ಜನಜಮಾಯಿಸಿ ತುಸು ಉದ್ವಿಗ್ನಸ್ಥಿತಿ ನಿರ್ಮಾಣಗೊಂಡಿದ್ದ ಘಟನೆ ಪಾಣಾಜೆ ಸಮೀಪದ ಆರ್ಲಪದವು ಕಲ್ಲಪದವು ಎಂಬಲ್ಲಿಂದ ವರದಿಯಾಗಿದೆ.

ಕಲ್ಲಪದವು ಅವ್ವಮ್ಮ ಎಂಬವರ ಮನೆಯಲ್ಲಿ ಡಿ. 13ರಂದು ಈ ಘಟನೆ ನಡೆದಿದ್ದು ಕಾಟುಕುಕ್ಕೆ ಸಮೀಪದ ಪ್ರಭಾಕರ ಆಚಾರ್ಯ(48ವ.) ಮೃತಪಟ್ಟವರು. ಅವ್ವಮ್ಮ ಅವರ ಮನೆಯ ಅಟ್ಟದಲ್ಲಿ ಮೃತದೇಹ ಪತ್ತೆಯಾಗಿದ್ದರಿಂದ ಆರಂಭದಲ್ಲಿ ನಾನಾ ವದಂತಿಗಳು ಹರಿದಾಡಿದ್ದವು.

ಪರಿಚಯಸ್ಥ: ಪ್ರಭಾಕರ ಆಚಾರ್ಯರವರು ಈ ಹಿಂದೆ ಕಲ್ಲಪದವು ಅವ್ವಮ್ಮರವರ ಮನೆಯ ಮರದ ಕೆಲಸ ನಿರ್ವಹಿಸಿದ್ದರು.ಕಳೆದ 8 ವರ್ಷಗಳಿಂದ ಪರಿಚಯಸ್ಥರಾಗಿದ್ದರಿಂದ ಅವರು ಆಗಾಗ ಅವ್ವಮ್ಮ ಅವರ ಮನೆಗೆ ಬಂದು ಹೋಗುತ್ತಿದ್ದರು. ಅವ್ವಮ್ಮ ಅವರ ಪತಿ ಕಾಸರಗೋಡಿನಲ್ಲಿ ವಾಸವಿದ್ದು ಅವ್ವಮ್ಮರ ಇಬ್ಬರು ಪುತ್ರಿಯರಲ್ಲಿ ಓರ್ವಳನ್ನು ಮದುವೆ ಮಾಡಿಕೊಡಲಾಗಿದೆ. ಉಳಿದಂತೆ ಪ್ರೌಢಶಾಲೆಗೆ ಹೋಗುತ್ತಿರುವ ಓರ್ವ ಪುತ್ರಿ ಹಾಗೂ ಪುತ್ರನೊಂದಿಗೆ ಅವ್ವಮ್ಮ ಕಲ್ಲಪದವು ಮನೆಯಲ್ಲಿ ವಾಸವಿದ್ದಾರೆ.ಡಿ.13ರಂದು ಬೆಳಿಗ್ಗೆ ಬೊಳ್ಳಿಂಬಳ ಎಂಬಲ್ಲಿಗೆ ಮರದ ಕೆಲಸಕ್ಕಾಗಿ ಬಂದಿದ್ದ ಪ್ರಭಾಕರ ಆಚಾರ್ಯರವರು ಸಂಜೆ ಕೆಲಸ ಮುಗಿಸಿ ಕಲ್ಲಪದವು ಅವ್ವಮ್ಮರವರ ಮನೆಗೆ ಬಂದಿದ್ದರು.

ಈಟಿನ ದಂಡ ಕೇಳಿದ್ದರು: ಈ ಹಿಂದೆ ಬರುತ್ತಿದ್ದಂತೆ ಡಿ.13ರಂದು ಸಂಜೆ ಅವ್ವಮ್ಮರ ಮನೆಗೆ ಬಂದಿದ್ದ ಪ್ರಭಾಕರ ಆಚಾರ್ಯ ಅವರು ತನಗೆ ಈಟಿನ ಎರಡು ಕೋಲು(ದಂಡ)ಬೇಕೆಂದು ಅವ್ವಮ್ಮರವರಲ್ಲಿ ಕೇಳಿಕೊಂಡಿದ್ದರು.ಇದೇ ವೇಳೆ ಮನೆಯಲ್ಲಿದ್ದ ಅವ್ವಮ್ಮರ ಪುತ್ರಿ, ನನಗೆ ಮನೆಯ ಅಟ್ಟದಲ್ಲಿರುವ ರಟ್ಟಿನ ಪೆಟ್ಟಿಗೆಯನ್ನು ತೆಗೆದುಕೊಡಿ ಎಂದು ಪ್ರಭಾಕರ ಅವರಲ್ಲಿ ಕೇಳಿಕೊಂಡಿದ್ದರಿಂದ ಪ್ರಭಾಕರ ಅವರು ಬಿದಿರಿನ ಮಾಡಿನ ಮನೆಯ ಅಟ್ಟವನ್ನು ಹತ್ತಿದ್ದರು.ಇತ್ತ ಅವ್ವಮ್ಮ ಅವರು ಸ್ಥಳೀಯರೇ ಆಗಿರುವ ಅಂಗನವಾಡಿ ಕಾರ್ಯಕರ್ತೆಯೋರ್ವರಲ್ಲಿ ಮಾತನಾಡುತ್ತಿದ್ದರು. ಆಕೆಯ ಪುತ್ರಿ ಮನೆಯ ಜಗಲಿಯಲ್ಲಿದ್ದರು.ಅಟ್ಟಕ್ಕೆ ಹೋಗಿದ್ದ ಪ್ರಭಾಕರ ಅವರು ಅಲ್ಲಿಂದ ಒಂದು ರಟ್ಟಿನ ಪೆಟ್ಟಿಗೆಯನ್ನು ಕೆಳಕ್ಕೆ ಹಾಕಿ ತುಂಬಾ ಹೊತ್ತಾಗಿದ್ದರೂ ಸುದ್ದಿಯಿಲ್ಲದೆ ಇದ್ದುದರಿಂದ ಅವ್ವಮ್ಮ ಮತ್ತವರ ಮಗಳು ಅಟ್ಟವನ್ನು ಹತ್ತಿ ನೋಡಿದಾಗ ಪ್ರಭಾಕರ ಅವರು ಅಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಅಟ್ಟದಲ್ಲಿ ಕುಳಿತು ರಟ್ಟಿನ ಪೆಟ್ಟಿಗೆ ಹುಡುಕಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಕುಳಿತಲ್ಲಿಂದಲೇ ಕುಸಿದು ಕವಚಿ ಬಿದ್ದು ಅವರು ಸಾವಿಗೀಡಾಗಿರಬಹುದು ಎಂದು ಹೇಳಲಾಗುತ್ತಿದೆ.

ಬೊಬ್ಬೆ ಹೊಡೆದರು: ಪ್ರಭಾಕರ ಆಚಾರ್ಯ ಅವರು ತಮ್ಮ ಮನೆಯ ಅಟ್ಟದಲ್ಲಿ ಬಿದ್ದು ಮೃತಪಟ್ಟಿರುವ ವಿಚಾರ ತಿಳಿಯುತ್ತಲೇ ಅವ್ವಮ್ಮ ಅವರು ಅಲ್ಲೇ ಸಮೀಪದಲ್ಲಿ ಅಂಗಡಿ ಹೊಂದಿರುವ ಸಿದ್ದೀಕ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದರಲ್ಲದೆ, ಬೊಬ್ಬೆ ಹೊಡೆದರು.ನೆರೆಕರೆಯವರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು.ಆದರೆ ಆ ವೇಳೆಗಾಗಲೇ ಪ್ರಭಾಕರ ಅವರು ಕೊನೆಯುಸಿರೆಳೆದಿದ್ದರು.

ಕೊಲೆ ವದಂತಿ-ಜನ ಜಮಾವಣೆ: ಘಟನೆ ನಡೆಯುತ್ತಲೇ ಇತ್ತ ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಬಡಗಿಯ ಕೊಲೆ ಎಂಬರ್ಥದಲ್ಲಿ ವದಂತಿಗಳು ಹರಡಲಾರಂಭಿಸಿದ್ದರಿಂದ ಅವ್ವಮ್ಮ ಅವರ ಮನೆ ಪರಿಸರದಲ್ಲಿ ನೂರಾರು ಮಂದಿ ಜಮಾಯಿಸಿ ಒಂದು ಹಂತದಲ್ಲಿ ತುಸು ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ವಾಸ್ತವ ವಿಚಾರ ತಿಳಿಯಲಾರಂಭಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

See also  ಸುದರ್ಶನ್ ಜೈನ್ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಎಸ್ಪಿ, ಎ.ಸಿ. ಆಗಮನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಉಪವಿಭಾಗದ ಸಹಾಯಕ ಆಯುಕ್ತ ರಘುನಂದನ್ ಮೂರ್ತಿ, ಡಿವೈಎಸ್ಪಿ ಶ್ರೀನಿವಾಸ್,ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲ ನಾಯ್ಕ್, ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಂಪ್ಯ ಎಸ್.ಐ.ಅಬ್ದುಲ್ ಖಾದರ್, ಪುತ್ತೂರು ನಗರ ಠಾಣೆಯ ಎಸ್.ಐ.ಒಮನ ಅಲ್ಲದೆ ಕೇರಳದ ಪೊಲೀಸರೂ ಸ್ಥಳಕ್ಕೆ ಬಂದರು.

ಮೃತದೇಹ ಮಂಗಳೂರಿಗೆ: ಮೃತ ಪ್ರಭಾಕರ ಅವರ ಸಹೋದರರು, ಸಂಬಂಧಿಕರೂ ಆಗಮಿಸಿ ಮಾಹಿತಿ ಪಡೆದುಕೊಂಡರು.ಬಳಿಕ ಮೃತದೇಹವನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.ಮರಣೋತ್ತರ ಶವ ಪರೀಕ್ಷಾ ವರದಿಗಳು ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ.ಮೃತ ಪ್ರಭಾಕರ ಆಚಾರ್ಯ ಅವರು ಪತ್ನಿ, ಸಂಬಂಧಿಕರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

185
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು