News Kannada
Saturday, November 26 2022

ಕರಾವಳಿ

ಟಾರ್ಗೆಟ್ ಇಲ್ಯಾಸ್ ಟಾರ್ಗೆಟ್ ಆಗಿದ್ದು ಯಾಕೆ ಗೊತ್ತಾ? - 1 min read

Photo Credit :

ಟಾರ್ಗೆಟ್ ಇಲ್ಯಾಸ್ ಟಾರ್ಗೆಟ್ ಆಗಿದ್ದು ಯಾಕೆ ಗೊತ್ತಾ?

ಮಂಗಳೂರು: 18ರ ಹರೆಯದಲ್ಲೇ ಅಪರಾಧ ಲೋಕಕ್ಕೆ ಎಂಟ್ರಿ ಪಡೆದಿದ್ದ ಉಳ್ಳಾಲದ ಸುಂದರಿಭಾಗ್ ನಿವಾಸಿ ಇಲ್ಯಾಸ್ ಕೋಮುಗಲಭೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ. 2010ರಲ್ಲಿ ಉಳ್ಳಾಲ ನಿವಾಸಿ ರಿಕ್ಷಾ ಚಾಲಕ ಕಮಲಾಕ್ಷ ಅನ್ನುವವರಿಗೆ ಚೂರಿ ಇರಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ. ಪ್ರಕರಣ ಸಂಬಂಧಿಸಿ ಜೈಲಿನಿಂದ ಬಿಡುಗಡೆಗೊಂಡ ನಂತರ 2013ರಲ್ಲಿ ತೊಕ್ಕೊಟ್ಟುವಿನಲ್ಲಿ 20 ಕಾರುಗಳನ್ನಿಟ್ಟುಕೊಂಡು ಬಾಡಿಗೆಗೆ ನೀಡುತ್ತಿದ್ದ ವ್ಯಕ್ತಿಯೋರ್ವನ ಜತೆಗೆ ಸೇರಿಕೊಂಡಿದ್ದ. ಈತನ ಜತೆಗೆ ಸೇರಿಕೊಂಡು ಕಾರು ಬಾಡಿಗೆಯ ವ್ಯವಹಾರವನ್ನು ಇಲ್ಯಾಸ್ ಆರಂಭಿಸಿದ್ದ. ಇದರಿಂದ ಗಳಿಸಿದ ಹಣದಲ್ಲಿ 2013ರಲ್ಲಿ ಉಳ್ಳಾಲದ ಮಾಸ್ತಿಕಟ್ಟೆ ಸಮೀಪ `ಟಾರ್ಗೆಟ್’ ಅನ್ನುವ ಹೆಸರಿನಲ್ಲಿ ಕಾರುಗಳನ್ನು, ಬೈಕ್ ಗಳನ್ನು ಬಾಡಿಗೆ ನೀಡುವ ಕಚೇರಿಯನ್ನು ತೆರೆದುಕೊಂಡಿದ್ದಾನೆ. ಈತನ ಜತೆಗೆ 35 ಮಂದಿ ಯುವಕರ ತಂಡವೂ ಕಾರ್ಯಾಚರಿಸುತ್ತಿತ್ತು. ಕಚೇರಿಯಿಟ್ಟುಕೊಂಡೇ ಉದ್ಯಮಿಗಳನ್ನು, ಬಿಲ್ಡರ್ ಗಳನ್ನು, ಶ್ರೀಮಂತರುಗಳನ್ನು ಟಾರ್ಗೆಟ್ ನಡೆಸಲು ಮುಂದಾದ ಇಲ್ಯಾಸ್ ಮುಂದಾಳತ್ವದ ತಂಡ ಉಳ್ಳಾಲ ಭಾಗದಲ್ಲಿ ಮೀನಿನ ರಫ್ತು ವ್ಯಾಪಾರ ನಡೆಸುವ ಬಹುದೊಡ್ಡ ಉದ್ಯಮಿಯ ವೀಕ್ನೆಸ್ ಪಡೆದುಕೊಂಡ ತಂಡ, ಆತನ ಬಳಿ ಸಲಿಂಗರತಿಗೆ ಬಾಲಕನೋರ್ವನನ್ನು ಆಮಿಷವೊಡ್ಡಿ ಕಳುಹಿಸಿದ್ದರು. ಉದ್ಯಮಿಯ ಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಿಕೊಂಡ ತಂಡ ಬಳಿಕ ರೂ.35 ಲಕ್ಷ ಹಣದ ಬೇಡಿಕೆ ಮುಂದಿಟ್ಟಿತ್ತು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣ ಅಲ್ಲದೆ ಮಾಧ್ಯಮಗಳಿಗೆ ವೀಡಿಯೋ ನೀಡುವುದಾಗಿ ಬೆದರಿಸಿ ಹಣದ ಬೇಡಿಕೆ ಮುಂದಿಟ್ಟಿದ್ದ.

ಅದರಲ್ಲಿ ಸ್ಥಳೀಯ ಪ್ರಭಾವಿ ನಾಯಕರೊಬ್ಬರ ಸಮ್ಮುಖದಲ್ಲಿ ರೂ. 30 ಲಕ್ಷ ಹಣವನ್ನು ಇಲ್ಯಾಸ್ ಪಡೆಯುವುದರ ಮೂಲಕ ಕ್ಷಣ ಮಾತ್ರದಲ್ಲೇ, ಇಳಿಹರೆಯದಲ್ಲೇ ಲಕ್ಷಾಧಿಪತಿಯಾಗಿದ್ದ. ಮರ್ಯಾದೆಗೆ ಹೆದರಿದ ಉದ್ಯಮಿ ಘಟನೆ ಕುರಿತು ಮೊದಲಿಗೆ ಯಾವುದೇ ಪ್ರಕರಣವನ್ನು ನೀಡಿರಲಿಲ್ಲ. ಮತ್ತೆ ಇಲ್ಯಾಸ್ ನೇತೃತ್ವದ ಟಾರ್ಗೆಟ್ ತಂಡ ಕುಕೃತ್ಯವನ್ನು ಮುಂದುವರಿಸಿಕೊಂಡು, ಬೀರಿ ವ್ಯಾಪ್ತಿಯ ಇಬ್ಬರು ಯುವತಿಯರನ್ನು ಇಟ್ಟುಕೊಂಡು ಹನಿಟ್ರ್ಯಾಪ್ ನಡೆಸಲು ಆರಂಭಿಸಿತ್ತು. ಈ ನಡುವೆ ಕೆ.ಸಿ.ರೋಡಿನ ಬೇಕರಿ ಮಾಲೀಕರ ಪುತ್ರನಾದ ತಾಹೀರ್ ಎಂಬಾತನನ್ನು ಅಪಹರಿಸಿದ ತಂಡ ಕೊಣಾಜೆಯ ಇರಾ ಭಾಗದ ಮನೆಯೊಂದರಲ್ಲಿ ಕೂಡಿ ಹಾಕಿ, ಯುವತಿಯನ್ನು ನಗ್ನವಾಗಿ ಒತ್ತಾಯಪೂರ್ವಕವಾಗಿ ಕಳುಹಿಸಿ ಅದನ್ನು ಚಿತ್ರೀಕರಿಸಿ ಮತ್ತೆ ರೂ. 20 ಲಕ್ಷ ಬೇಡಿಕೆ ಮುಂದಿಟ್ಟಿದ್ದರು. ಅಲ್ಲಿಂದ ವಾಪಸ್ಸು ಉಳ್ಳಾಲ ಕಡೆಗೆ ಅಪಹೃತನನ್ನು ಕರೆತರುವಾಗ ಇವರ ಕೈಯಿಂದ ತಪ್ಪಿಸಿಕೊಂಡಿದ್ದ ತಾಹೀರ್, ಉಳ್ಳಾಲ ಪೊಲೀಸರಲ್ಲಿ ದೂರು ನೀಡಿದ್ದನು. ಇದರಿಂದ ಟಾರ್ಗೆಟ್ ಗ್ರೂಪ್ ನ ಕಾರ್ಯಾಚರಣೆ ಹೊರಜಗತ್ತಿಗೆ ತಿಳಿದಿತ್ತು.

ಅದಾಗಲೇ ದೂರು ನೀಡಲು ಮುಂದಾಗದ ಉದ್ಯಮಿಗಳಿಂದ ಕೋಟ್ಯಂತರ ಸಂಪಾದಿಸಿದ್ದ ಟಾರ್ಗೆಟ್ ತಂಡ, ಮಂಗಳೂರಿನ ಫೈಸಲ್ ನಗರ, ಹರೇಕಳ, ಸುರತ್ಕಲ್ ವ್ಯಾಪ್ತಿಯಿಂದಲೂ ಯುವಕರನ್ನು ಕುಕೃತ್ಯದಲ್ಲಿ ಸೇರಿಸಿಕೊಳ್ಳುತ್ತಿತ್ತು. ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಇಲ್ಯಾಸ್ ಮತ್ತೆ ಉಳ್ಳಾಲ ವ್ಯಾಪ್ತಿಯಲ್ಲಿ ಬೇರೆ ಧರ್ಮದವರಲ್ಲದೆ, ಸ್ವಧರ್ಮದವರ ಜತೆಗೂ ವೈರತ್ವ ಕಟ್ಟಿಕೊಂಡು 3ರಷ್ಟು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆರೋಪ ಎದುರಿಸುತ್ತಿದ್ದ ಸಂದರ್ಭವೇ ಯುವ ಕಾಂಗ್ರೆಸ್ ಚುನಾವಣೆಗೆ ನಿಂತು, ಅದರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿಯೂ ಆಯ್ಕೆಯಾಗಿದ್ದ. ವಾರೆಂಟ್ ಇದ್ದರೂ ರಾಜಕೀಯ ಪ್ರಭಾವದಿಂದ ಟಾರ್ಗೆಟ್ ಇಲ್ಯಾಸ್ ನನ್ನು ಪೊಲೀಸರು ಬಂಧಿಸಲು ಮುಂದಾಗಿರಲಿಲ್ಲ.

See also  ಕೆರೆ ಇದ್ದರೂ ಕೇಳುವವರು ಇಲ್ಲ ; 5 ಕೋಟಿ ಅನುದಾನ ಕಥೆ ಗುಳುಂ..!

ಈ ನಡುವೆ ಗಾಂಜಾ ವಿರುದ್ಧ ಹೋರಾಡಿದ ಮುಕ್ಕಚ್ಚೇರಿ ನಿವಾಸಿ ಜುಬೈರ್ ಅನ್ನುವವರ ಹತ್ಯೆ ನಡೆಯುತ್ತದೆ. ಗಾಂಜಾ ಸೇವನೆ ಮತ್ತು ಸಾಗಾಟಕ್ಕೆ ಸಂಬಂಧಿಸಿ ಉಳ್ಳಾಲ ವ್ಯಾಪ್ತಿಯಲ್ಲಿ ಜುಬೈರ್ ಅವರು ಇಲ್ಯಾಸ್ ಮತ್ತು ಆತನ ತಂಡದ ಜತೆಗೆ ವೈರತ್ವ ಕಟ್ಟಿಕೊಂಡಿದ್ದರು. ಇದೇ ದ್ವೇಷ ಮುಂದುವರಿದು ಟಾರ್ಗೆಟ್ ತಂಡದಲ್ಲಿದ್ದ ಅಲ್ತಾಫ್, ಸುಹೈಲ್, ತಾಜು, ಮಂದ ಆಸೀಫ್ ಅನ್ನುವವರು ಸೇರಿಕೊಂಡು ನಮಾಜ್ ಮುಗಿಸಿ ಹೊರಬರುತ್ತಿದ್ದ ಜುಬೈರ್ ಅವರನ್ನು ಹತ್ಯೆ ನಡೆಸಿತ್ತು. ಇದರಲ್ಲಿ ಇಲ್ಯಾಸ್ ಕಾಂಗ್ರೆಸ್ ನಲ್ಲಿದ್ದುದರಿಂದ ಸಚಿವ ಖಾದರ್ ಅವರು ಮುಕ್ಕಚ್ಚೇರಿ ಜನರ ವಿರೋಧ ಕಟ್ಟಿಕೊಂಡಿದ್ದರು. ಆದರೆ ವಾರೆಂಟ್ ಆಗಿದ್ದ ಪ್ರಕರಣದಲ್ಲಿ ಟಾರ್ಗೆಟ್ ಮುಖ್ಯಸ್ಥ ಇಲ್ಯಾಸ್ ನನ್ನು ಬಂಧಿಸುವ ಮೂಲಕ ಜುಬೈರ್ ಪ್ರಕರಣದಲ್ಲಿ ಸಚಿವರು ಪಾರಾಗಿದ್ದರು.

ಜುಬೈರ್ ಹತ್ಯೆ ವೇಳೆ ಸ್ಥಳದಲ್ಲಿದ್ದ ಓಮ್ನಿ ಕಾರಿನಲ್ಲಿ ಸುರತ್ಕಲ್ ಮೂಲದ ತಂಡ ಇದ್ದು, ಅವರ ಜತೆಗೆ ಇಲ್ಯಾಸ್ ಕೂಡಾ ಇದ್ದನು ಅನ್ನುವ ಆರೋಪವಿದ್ದರೂ ಈವರೆಗೆ ಪೊಲೀಸರು ಓಮ್ನಿ ಕಾರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿಲ್ಲ. ಇದೀಗ ಸುರತ್ಕಲ್ ನಲ್ಲಿ ದೀಪಕ್ ರಾವ್ ಹತ್ಯೆಯಲ್ಲಿ ಭಾಗಿಯಾದ ನೌಷಾದ್ ಕೂಡಾ ಟಾರ್ಗೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದ. 3 ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಹಿಂದು ಯುವಕನಿಗೆ ಚೂರಿ ಇರಿತದಲ್ಲಿ ಭಾಗಿಯಾಗಿದ್ದ ನೌಷಾದ್ ನಿಗೆ ಇಲ್ಯಾಸ್ ಉಳ್ಳಾಲದಲ್ಲಿ ಆಶ್ರಯ ಕೊಟ್ಟಿದ್ದನೆನ್ನಲಾಗಿದೆ. ಇದರಿಂದ ನೌಷಾದ್ ಕೂಡಾ ಟಾರ್ಗೆಟ್ ತಂಡದಲ್ಲೇ ಹೆಚ್ಚಾಗಿ ಇದ್ದನು. ಇಲ್ಯಾಸ್ ವಿರುದ್ಧ ಗೂಂಡಾಕಾಯ್ದೆ ದಾಖಲಾದ ನಂತರ ಉಳ್ಳಾಲವನ್ನು ಬಿಟ್ಟಿದ್ದ ಈತ ಸುರತ್ಕಲ್ ಕೃಷ್ಣಾಪುರದಲ್ಲಿ ನೆಲೆಸಿ ಅಲ್ಲಿನ ಯುವಕರ ತಂಡವನ್ನು ಕಟ್ಟಿದ್ದು, ಇದೀಗ ಜೆಪ್ಪುವಿನ ವಸತಿ ಸಂಕೀರ್ಣದಲ್ಲಿ ವಾಸವಿದ್ದ.

ಯುವ ಕಾಂಗ್ರೆಸ್ ಮುಖಂಡ (ಮಿಥುನ್ ರೈ) ಜತೆಗೆ ಹೆಚ್ಚಿನ ಒಡನಾಟವಿರುವ ಟಾರ್ಗೆಟ್ ಇಲ್ಯಾಸ್ ರಮಾನಾಥ ರೈ ಮತ್ತು ತುಂಬೆ ಪ್ರಕಾಶ್ ಶೆಟ್ಟಿ ಅವರ ಜತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದನು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

184

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು