News Kannada
Friday, December 02 2022

ಕರಾವಳಿ

ಕಾರುಗಳ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು, ನಾಲ್ವರಿಗೆ ಗಾಯ

Photo Credit :

ಕಾರುಗಳ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು, ನಾಲ್ವರಿಗೆ ಗಾಯ

ಕಾರವಾರ: ಎರಡು ಕಾರುಗಳ ನಡುವೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ನಾಲ್ವರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿಯಲ್ಲಿ ನಡೆದಿದೆ.

ಹೊನ್ನಾವರದ ನಿವಾಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀಧರ್ ಭಟ್(೬೦) ಹಾಗೂ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪಗ್ರಾಮದ ಜ್ಯೋತಿ ಕಿರಣ ಮರಾಠಿ(೩೦) ಮೃತ ಪಟ್ಟವರು.

ಶ್ರೀಧರ ಇವರು ಹೊನ್ನಾವರದಿಂದ ದಾಂಡೇಲಿಗೆ ತೆರಳುತ್ತಿದ್ದ ವೇಳೆ ಜ್ಯೋತಿ ಅವರು ಯಲ್ಲಾಪುರದಿಂದ ಮಲ್ಲಾಪುರಕ್ಕೆ ಕ್ರೂಸರ್ ತೂಪಾನ್ ವಾಹನದಲ್ಲಿ ತೆರಳುತ್ತಿದ್ದಾಗ ಅಂಕೋಲಾ ತಾಲ್ಲೂಕಿನ ಮೂಲೆಮನೆ ಬಸ್ ನಿಲ್ದಾಣದ ಹತ್ತಿರ ಈ ದುರ್ಘಟನೆ ಸಂಬವಿಸಿದೆ.

ಜ್ಯೋತಿಯ ಪತಿ ಕಿರಣ ಟಿಕ್ಕಾ ಮರಾಠಿ(೪೨) ಹಾಗೂ ಅವರ ಪುತ್ರಿ ದಿಯಾ(೮) ಮತ್ತು ಪುತ್ರ ದಿವೇಷ (೬)ಹಾಗೂ ಕಾರು ಚಾಲಕ ಸಂತೋಷ ಕೇಸರಕರ(೩೦) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಲ್ಲಾಪುರದ ತಾಲೂಕ ಆರೋಗ್ಯ ಕೇಂದ್ರದಲ್ಲಿಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

See also  ಉಡುಪಿ ಬಿಜೆಪಿ ಟಿಕೆಟಿಗೆ ಶಿರೂರು ಶ್ರೀ ಆಕಾಂಕ್ಷಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು