News Kannada
Tuesday, December 06 2022

ಕರಾವಳಿ

‘ಸಾಲಮೇಳದ ಸಂಗ್ರಾಮ’ ಪೂಜಾರಿ ಆತ್ಮಕಥೆ ಪುಸ್ತಕ ಬಿಡುಗಡೆ: ಪುಸ್ತಕದಲ್ಲಿ ಏನೇನಿದೆ?

Photo Credit :

‘ಸಾಲಮೇಳದ ಸಂಗ್ರಾಮ’ ಪೂಜಾರಿ ಆತ್ಮಕಥೆ ಪುಸ್ತಕ ಬಿಡುಗಡೆ: ಪುಸ್ತಕದಲ್ಲಿ ಏನೇನಿದೆ?

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರ ‘ಸಾಲಮೇಳದ ಸಂಗ್ರಾಮ’ ಆತ್ಮಕಥೆಯನ್ನು ಇಂದು ಅವರು ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಿದರು.

ಕುದ್ರೋಳಿ ಗೋಕಾರ್ಣನಾಥೇಶ್ವರ ದೇವರ ಬಳಿ ಪುಸ್ತಕಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿ.ಜನಾರ್ದನ ಪೂಜಾರಿ ಅವರೇ ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕ 214 ಪುಟಗಳನ್ನು ಒಳಗೊಂಡಿದ್ದು, ದರ 300 ರೂಪಾಯಿ ನಿಗಧಿಯಾಗಿದೆ.

ನನ್ನ ಮಾತು: ಮೊದಲ ಪುಟದಲ್ಲಿನ ‘ನನ್ನ ಮಾತು’ ಶೀರ್ಷಿಕೆಯಲ್ಲಿ ಪೂಜಾರಿ ಅವರು ತನ್ನ ಬಾಲ್ಯದ ಹಾಗೂ ಬೆಳವಣಿಗೆಯ ಕುರಿತು ಕೆಲವು ಪದಗಳಲ್ಲಿ ಬೆಳಕು ಚೆಲ್ಲಿದ್ದಾರೆ.

ಒಳ ಪುಟಗಳಲ್ಲಿ ಏನೇನಿದೆ?
ಕರೆ ಬಂತು ದೇಶಸೇವೆಗೆ: 1977ರಲ್ಲಿ ಪೂಜಾರಿ ಅವರಿಗೆ ಇಂದಿರಾ ಗಾಂಧಿ ಅವರು ರಾಜಕೀಯ ಪ್ರವೇಶಿಸುವಂತೆ ಕರೆ ಮಾಡಿದ ವಿಚಾರ ಹಾಗೂ ರಾಜಕೀಯ ಪ್ರವೇಶ ನಿರ್ಧಾರದ ಕುರಿತು ಅವರಿಗಾದ ಅನುಭವದ ಕುರಿತು ಇಲ್ಲಿ ಹಂಚಿಕೊಂಡಿದ್ದಾರೆ.

ಕಡು ಬಡತನದ ಬಾಲ್ಯ: ಪೂಜಾರಿ ಅವರು ಹುಟ್ಟು, ಶಾಲೆ, ಕಾಲೇಜು, ಕೃಷಿಕ ಕುಟುಂಬ, ಸಾಲದಿಂದ ಶಾಲೆ ಕಲಿತು, ಹೊಟೇಲ್ ಕೆಲಸಕ್ಕೆ ರೆಡಿ, ಸೇಮಿತ ಕೊಲೆ ಪ್ರಕರಣ ಹಾಗೂ ಒಂದು ಮಾನವೀಯ ಸಂದರ್ಭ ಎಂಬ ಜೀವನದ ಪ್ರತಿಯೊಂದು ಹಂತದ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ರಾಜಕೀಯ ಗರಡಿಯಲ್ಲಿ: ಐತಿಹಾಸಿಕ ಮೇಡನ್ ಸ್ಫೀಚ್, ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ, ಇಂದಿರಾ ಅರಸು ವಿರಸ, ಹೂ ಈಸ್ ದ್ಯಾಟ್ ಬಂಗಾರಪ್ಪ?. ಬೆಂಚು ಹೊತ್ತು ತಂದ ಆಸ್ಕರ್ ಎಂಪಿ ಆದದ್ದು, ಈ ಹುಡುಗ ನನಗೆ ಮೋಸ ಮಾಡಲ್ಲ, ಇಂದಿರಾ ತೋರಿದ ಮಮತೆ, ಅರ್ಥಖಾತೆಗೆ ಮಂತ್ರಿಯಾದೆ, ದೇಶಕ್ಕೆ ಆಘಾತ- ಇಂಧಿರಾ ಗಾಂಧಿ ಕೊಲೆ, ಜಯಲಲಿತಾ ನೀಡಿದ ಖಾರ ಊಟ, ಕೇಸರಿಕರಣ ಹೊಡೆತಕ್ಕೆ ಮೊದಲ ಸೋಲು, ನರಸಿಂಹರಾವ್ ಕಾಲ- ವಿರೋಧಿಗೆ ಆತ್ಮೀಯತೆಯ ಪಟ್ಟ, ಮನಮೋಹನಸಿಂಗ್ ಗೆ ತರಾಟೆ, ಹಗೆ ಸಾಧಿಸಿದ ಶರದ್ ಪವಾರ್, ಶಾಸ್ತ್ರಿ ಪುತ್ರ, ನನ್ನ ಮಾತಿಗೆ ಹೈಕಮಾಂಡ್ ಮನ್ನಣೆ, ಎಂಬ ಅನೇಕ ವಿಚಾರಗಳ ಕುರಿತು ಬಿಚ್ಚಿಟ್ಟಿದ್ದಾರೆ.

ಬದಲಾವಣೆಯ ಕ್ರಾಂತಿ; ಸಾಲ ಮೇಳ: ಗೊ ಬ್ಯಾಕ್ ಪೂಜಾರಿ, ಚೂರಿಯಿಂದ ಇರಿದರು, ಪೂಜಾರಿ ಸಾಹೇಬ್ರಿಗೆ ಹೇಳ್ತೇನೆ!, ರಾಜೀವ್ ಕನಸಿನ ಪಂಚಾಯತ್ ರಾಜ್ ಮಸೂದೆಯ ಕುರಿತು ಇಲ್ಲಿ ವಿವರಿಸಿದ್ದಾರೆ.

ನಾಲ್ಕು ಬಾರಿ ಒಲಿದು ಬಂದ ಮುಖ್ಯಮಂತ್ರಿ ಪದವಿ: ರಾಜಕೀಯದಲ್ಲಿ ಅವರಿಗೆ ಬಂದ ಪದವಿಯ ಕುರಿತು ಹೇಳಿದ್ದಾರೆ.

ದೇವಾಲಯದಿಂದ ಪರಿವರ್ತನೆ:  ಮಂಗಳೂರಿನ ಕುದ್ರೊಳಿಯಲ್ಲಿ ಗೋಕರ್ಣನಾಥನನ್ನು ಪ್ರತಿಷ್ಠಾಪನೆಯ ಕುರಿತು ಹೇಳಿದ್ದಾರೆ.

ಸಂಸಾರ ಸಾಗರದೊಳಗೆ:  1968 ಜನವರಿ 21ರಂದು ಮಾಲತಿಯವರ ಹತೆ ವಿವಾಹ, ಅಕಾಲದಲ್ಲಿ ಕಣ್ಮರೆಯಾಧ ಮಗ ಹಾಗೂ ಮಕ್ಕಳು ಬದುಕು ಕಟ್ಟಿಕೊಂಡ ವಿಚಾರಗಳ ಕುರಿತು ವಿವರಿಸಿದ್ದಾರೆ.

 

See also  ಪಯಸ್ವಿನಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು