News Kannada
Sunday, November 27 2022

ಕರಾವಳಿ

ವಿದ್ಯಾರ್ಥಿನಿಗಳ ಹತ್ಯೆ ಖಂಡಿಸಿ ಡಿವೈಎಫ್ ಐ ಪ್ರತಿಭಟನೆ - 1 min read

Photo Credit :

ವಿದ್ಯಾರ್ಥಿನಿಗಳ ಹತ್ಯೆ ಖಂಡಿಸಿ ಡಿವೈಎಫ್ ಐ ಪ್ರತಿಭಟನೆ

ಬೆಳ್ತಂಗಡಿ: ಕೆ. ಆರ್. ಪೇಟೆ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಝೈಬುನ್ನೀಸಾ ಸಾವಿನ ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕು ಹಾಗೂ ಧನ್ಯಶ್ರೀ, ದಾನಮ್ಮ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐನ ತಾಲೂಕು ಸಮಿತಿಯವರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಝೈಬುನ್ನಿಸಾ ವಿದ್ಯಾರ್ಥಿನಿಯರ ಸಾವು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಶಿಕ್ಷಕನೇ ಆಕೆಯ ಸಾವಿಗೆ ಕಾರಣ ಎಂಬಂತಾಗಿದೆ. ಆಕೆಯ ಹೆತ್ತವರ ಹೇಳಿಕೆಯಂತೆ ಇನ್ನೂ ಕೆಲವು ಶಿಕ್ಷಕರು ಈ ಪ್ರಕರಣದಲ್ಲಿ ಭಾಗಿಯಾದ ಸಂಶಯಗಳಿವೆ. ಆಕೆಯ ಸಾವಿನ ಬಗ್ಗೆ ಸಿಓಡಿ ತನಿಖೆ ಆಗಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅದೇ ರೀತಿ ಬೀದರ್ ನ ಪೂಜಾ ಎಂಬ ವಿದ್ಯಾರ್ಥಿನಿಯನ್ನು ಸಂಶುದ್ಧೀನ್ ಎಂಬ ಕಾಮುಕ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ದಾನಮ್ಮ ಹಾಗು ಧನ್ಯಶ್ರೀ ಪ್ರಕರಣಗಳೂ ಸಮಾಜಘಾತುಕರ, ಅತ್ಯಾಚಾರಿ ಕಾಮುಕರ, ಕೋಮುವಾದಿಗಳ ದೌರ್ಜನ್ಯಕ್ಕೆ ಬಲಿಯಾದ ಪ್ರಕರಣಗಳಾಗಿವೆ. ಇದಕ್ಕೂ ಮೊದಲು ಹಲವು ಪ್ರಕರಣಗಳು ನಡೆದರೂ ಅವೆಲ್ಲ ಹಳ್ಳ ಹಿಡಿದಿವೆ. ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ನೀಡಿ ಭಯದ ವಾತಾವರಣವನ್ನು ಹೋಗಲಾಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿಪಿಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ. ಎಮ್. ಭಟ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಕಾರ್ಯದರ್ಶಿ ವಿಠಲ ಮಲೆಕುಡಿಯ, ಸದಸ್ಯರಾದ ಶ್ಯಾಮರಾಜ್, ನೆಬಿಸಾ, ಲೋಕೇಶ್ ಕುದ್ಯಾಡಿ, ಸಂಜೀವ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಕಿರಣ ಪ್ರಭಾ ಮತ್ತಿತರರು ಇದ್ದರು.

See also  ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕ, ಸೋಂಕು ಲಕ್ಷಣ ಇರುವವರಿಗೆ ಆದ್ಯತೆ ಕೋವಿಡ್​ ಟೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು