News Kannada
Wednesday, December 07 2022

ಕರಾವಳಿ

`ಅಮ್ಮನೆಡೆಗೆ ನಮ್ಮ ನಡೆ’ಗೆ ಹರಿದು ಬಂದ ಭಕ್ತಸಾಗರ

Photo Credit :

`ಅಮ್ಮನೆಡೆಗೆ ನಮ್ಮ ನಡೆ'ಗೆ ಹರಿದು ಬಂದ ಭಕ್ತಸಾಗರ

ಮಂಗಳೂರು: ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಭಕ್ತರು ಇಂದು(ಭಾನುವಾರ) ಮರವೂರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತನಕದ `ಅಮ್ಮನಡೆಗೆ ನಮ್ಮ ನಡಿಗೆ’ ಪಾದಯಾತ್ರೆಯಲ್ಲಿ ಭಾಗಿಯಾದರು.

ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಾವಿರಾರು ಮಂದಿ ಸೇರಿದ ಬಳಿಕ ಕದ್ರಿ ಯೋಗೇಶ್ವರ ಮಠದ ರಾಜಯೋಗಿ ಶ್ರೀ ನಿರ್ಮಲನಾಥ್ ಜೀ ಮಹಾರಾಜ್ ಅವರು ದೀಪ ಬೆಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಅನುವಂಶಿಕ ಅರ್ಚಕರಾದ ಕೆ. ವಾಸುದೇವ ಅಸ್ರಣ್ಣ, ಪಾದಯಾತ್ರೆ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಏಳು ಗಂಟೆಗೆ ಮೊದಲೇ ಸೇರಿದ್ದ ಸಾವಿರಾರು ಸಂಖ್ಯೆಯ ಭಕ್ತರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಮತ್ತು ದಾರಿಯುದ್ಧಕ್ಕೂ ಅಲ್ಲಲ್ಲಿ ಪಾನೀಯದ ವ್ಯವಸ್ಥೆಯನ್ನು ವಿವಿಧ ಸಂಸ್ಥೆಗಳು ಮಾಡಿದವು. ಪಾದಯಾತ್ರೆ ಹಾದು ಹೋಗುವಂತಹ ಮಾರ್ಗದಲ್ಲಿದ್ದ ಮರವೂರು, ಬಜ್ಪೆ, ಭಟ್ರಕೆರೆ ಮಸೀದಿಗಳಿಗೆ ಸಮೀಪ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪಾದಯಾತ್ರೆಯುದ್ದಕ್ಕೂ ಪೊಲೀಸರು ಹಾಗೂ ಸಮಿತಿಯ ಸದಸ್ಯರು ಸಂಚಾರ ವ್ಯವಸ್ಥೆ ನೋಡಿಕೊಂಡರು.

ಪಾದಯಾತ್ರೆಯಲ್ಲಿ ಹಲವಾರು ಭಜನಾ ಮಂಡಳಿಗಳು ಭಾಗಿಯಾಗಿ ಭಜನೆ ಮಾಡುತ್ತಾ ಸಾಗುವುದು ಕಂಡುಬಂತು. ಮರವೂರಿನಿಂದ ಕಟೀಲಿಗೆ ಸಾಗಿದ ಭಕ್ತರಿಗೆ ಕಟೀಲು ದೇವಾಲಯದಲ್ಲಿ ಊಟ ವ್ಯವಸ್ಥೆ ಕೂಡ ಮಾಡಲಾಗಿತ್ತು. ಮರವೂರಿನಿಂದ ಕಟೀಲಿನ ತನಕ ಪಾದಯಾತ್ರೆಯಲ್ಲಿ ಸಾಗಿದ ಭಕ್ತರು ದುರ್ಗಾಪರಮೇಶ್ವರಿ ಮಾತೆಯ ದರ್ಶನ ಪಡೆದು ಕೃತಾರ್ಥರಾದರು.

See also  ಪೆಂಗೋಲಿನ್ ಪ್ರಾಣಿ ರಕ್ಷಣೆ ಮಾಡಿದ ಅರಣ್ಯಾಧಿಕಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು