News Kannada
Sunday, December 04 2022

ಕರಾವಳಿ

ಫೆ.15ರಂದು ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬ

Photo Credit :

ಫೆ.15ರಂದು ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬ

ಮಂಗಳೂರು: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಫೆಬ್ರವರಿ 15ರಂದು ಸಂಭ್ರಮದಿಂದ ಆಚರಿಸಲಾಗುವುದು  ಎಂದು ಪತ್ರಿಕಾಗೋಷ್ಠಿಯಲ್ಲಿ ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ ತಿಳಿಸಿದರು.

ಹಬ್ಬಕ್ಕೆ ತಯಾರಿಯಾಗಿ ಫೆಬ್ರವರಿ 6 ರಂದು ಒಂಬತ್ತು ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಸಾಯಂಕಾಲ 4 ಗಂಟೆಗೆ ಅಲಂಕರಿಸಿದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್ ತನಕ ಕೊಂಡೊಯ್ಯಲಾಗುವುದು. ಶಿವಮೊಗ್ಗ ಧರ್ಮಪ್ರಾಂತ್ಯದ ವಂ. ಫಾ. ಫ್ರಾಂಕ್ಲಿನ್ ಡಿ’ಸೋಜರವರು ಪುಣ್ಯ ಕ್ಷೇತ್ರದ ಧ್ವಜ ಹಾರಿಸಿ ಮೊದಲ ದಿನದ ಬಲಿಪೂಜೆಯನ್ನು ಅರ್ಪಿಸುವರು ಎಂದು ಅವರು ವಿವರ ನೀಡಿದರು.

ಒಂಬತ್ತು ದಿನಗಳ ನವೇನ ಪ್ರಾರ್ಥನೆಯ ಸಮಯದಲ್ಲಿ ಒಂಬತ್ತು ವಿವಿಧ ವರ್ಗಗಳ (ಯುವ ಜನರು, ಮಕ್ಕಳು, ದಂಪತಿ, ವ್ಯಾಧಿಸ್ತರು, ಧಾರ್ಮಿಕರು, ಮುಖಂಡರು) ಜನರಿಗಾಗಿ ಪ್ರಾರ್ಥಿಸಲಾಗುವುದು. ಬಲಿ ಪೂಜೆ ಅರ್ಪಿಸಲು  ಮತ್ತು ಪ್ರವಚನ ನೀಡಲು ಪ್ರಖ್ಯಾತ ಧರ್ಮಗುರುಗಳನ್ನು ಆಹ್ವಾನಿಸಲಾಗಿದೆ. ಆಯಾಯ ದಿನದ ವರ್ಗಗಳ ಜನರಿಗೆ ಸಂಭದ ಪಟ್ಟಂತೆ ಪ್ರವಚನ ನೀಡಲಾಗುವುದು.

ಹಬ್ಬದ ಬಲಿಪೂಜೆಯನ್ನು ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಫೆಬ್ರವರಿ  15 ರಂದು ಸಾಯಂಕಾಲ 6 ಗಂಟೆಗೆ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಅರ್ಪಿಸುವರು. ಸಾಯಾಂಕಾಲ 4.30 ಗಂಟೆಗೆ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅ. ವಂ. ಡಾ. ವರ್ಗಿಸ್ ಚಕ್ಕಲಕಲ್ ಮಲಯಾಳಂ ಭಾಷೆಯಲ್ಲಿ ಅರ್ಪಿಸುವರು. ಬೆಳಗ್ಗೆ 8 ಗಂಟೆಗೆ ವ್ಯಾದಿಸ್ತರಿಗಾಗಿ ವಂ. ಡಾ. ಪಿಯುಸ್ ಡಿ’ಸೋಜ, ಎಪಿಸ್ಕೋಪಲ್ ವಿಕಾರ್ ಧಾರ್ಮಿಕರಿಗಾಗಿ, ಬಲಿಪೂಜೆಯನ್ನು ಅರ್ಪಿಸುವರು. 11 ಗಂಟೆಗೆ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳು ಆಶ್ರಮದ ನಿವಾಸಿ ಮತ್ತು ವಿಶೇಷ ಆಹ್ವಾನಿತರಿಗಾಗಿ ಅರ್ಪಿಸುವರು.

13ನೇ ಶತಮಾನದಲ್ಲಿ ಪೋರ್ಚುಗಲ್ ನಲ್ಲಿ ಜನಿಸಿದ ಸಂತ ಆಂತೋನಿಯವರ ನಾಲಗೆ ಮತ್ತು ಸ್ವರ ಗಂಟಲು ಇಂದಿಗೂ ಜೀವಂತವಾಗಿದ್ದು ಇಟಲಿಯ ಪಾದ್ವ ನಗರದಲ್ಲಿನ ಸಂತ ಆಂತೋನಿಯವರ ಮಹಾ ದೇವಲಯದಲ್ಲಿ ಇಡಲಾಗಿದೆ. ಈ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಫಾ. ಒನಿಲ್ ಡಿ’ಸೋಜ ತಿಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ, ಆಡಳಿತಧಿಕಾರಿ ಫಾ. ಫ್ರಾನ್ಸಿಸ್ ಡಿ’ಸೋಜ, ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ವಿನ್ಸೆಂಟ್ ಮಸ್ಕರೇನಸ್  ಉಪಸ್ಥಿತರಿದ್ದರು.

See also  ಕೊಡಪಾನ ತೆಗೆಯಲು ಬಾವಿಗೆ ಇಳಿದ ಯುವಕ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು