News Kannada
Sunday, December 04 2022

ಕರಾವಳಿ

ಸುಳ್ಯ ನಗರ ಪಂಚಾಯಿತಿಗೆ 59 ಲಕ್ಷ ಮಿಗತೆ ಬಜೆಟ್

Photo Credit :

ಸುಳ್ಯ ನಗರ ಪಂಚಾಯಿತಿಗೆ 59 ಲಕ್ಷ ಮಿಗತೆ ಬಜೆಟ್

ಸುಳ್ಯ: 2018-19ನೇ ಸಾಲಿಗೆ ಸುಳ್ಯ ನಗರ ಪಂಚಾಯಿತಿಯ ಆಯವ್ಯಯ ಪಟ್ಟಿಯನ್ನು ಬುಧವಾರ ಮಂಡಿಸಲಾಯಿತು. 59.24 ಲಕ್ಷ ಮಿಗತೆ ಬಜೆಟನ್ನು ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಮಂಡಿಸಿದರು. ಪ್ರಸ್ತಿತ ವರ್ಷ 7.93 ಕೋಟಿ ಆದಾಯ ಮತ್ತು 9.48 ಕೋಟಿ ಖರ್ಚನ್ನು ನಿರೀಕ್ಷಿಸುವ ಬಜೆಟ್ 2.14 ಕೋಟಿ ಆರಂಭಿಕ ಶಿಲ್ಕು ಸೇರಿ 10.08 ಕೋಟಿ ಆದಾಯ ದೊರೆಯಲಿದ್ದು 59.24 ಲಕ್ಷ ಉಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಆದಾಯ: ಕಟ್ಟಡಗಳ ಬಾಡಿಗೆಯಿಂದ 2.48 ಕೋಟಿ, ವ್ಯಾಪಾರ ಪರವಾನಗಿ ಶುಲ್ಕ 8.49 ಲಕ್ಷ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ 10 ಲಕ್ಷ, ನೀರು ಸರಬರಾಜು ಶುಲ್ಕ 1.10 ಕೋಟಿ, ಮಾರುಕಟ್ಟೆ ಬಾಡಿಗೆ 27 ಲಕ್ಷ, ಆಸ್ತಿ ತೆರಿಗೆ ಆದಾಯ 1.23 ಕೋಟಿ, ಆಸ್ತಿ ತೆರಿಗೆ ಮೇಲಿನ ದಂಡ 7.50 ಲಕ್ಷ, ಉಪಕರ ಸಂಗ್ರಹ ಶುಲ್ಕ 3.21 ಲಕ್ಷ, ಆಸ್ತಿ ತೆರಿಗೆ ಬದಲಾಗಿ ಸೇವಾ ಶುಲ್ಕ 25.25 ಲಕ್ಷ, ಎಸ್ಎಫ್ಸಿ ವೇತನ ಅನುದಾನ 65 ಲಕ್ಷ, ವಿದ್ಯುತ್ಚ್ಛಕ್ತಿ ಅನುದಾನ 1.20 ಕೋಟಿ, ಎಸ್ಎಫ್ಸಿ ಮುಕ್ತ ನಿಧಿ ಅನುದಾನ 83 ಲಕ್ಷ, ನಲ್ಮ್ ಅನುದಾನ 10 ಲಕ್ಷ, 14ನೇ ಹಣಕಾಸು ಆಯೋಗದ ಅನುದಾನ 1.16 ಕೋಟಿ, ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಐದು ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನ ಐದು ಲಕ್ಷ, ಬರ ಪರಿಹಾರ ಅನುದಾನ 20 ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಐದು ಲಕ್ಷ ನಿರೀಕ್ಷಿಸಿತ ಪ್ರಮುಖ ಆದಾಯಗಳು.

ಖರ್ಚು: ಸಿಬ್ಬಂದಿಗಳ ವೇತನ ಮತ್ತು ಭತ್ಯೆ 65 ಲಕ್ಷ, ಪಿಂಚಣಿ ವಂತಿಗೆ ನಾಲ್ಕು ಲಕ್ಷ, ಕಚೇರಿ ವಿದ್ಯುತ್, ದೂರವಾಣಿ ಮತ್ತಿತರ ವೆಚ್ಚ, ಇತರ ಸಾಮಾನ್ಯ ವೆಚ್ಚಗಳು ಸೇರಿ ಒಟ್ಟು 8.50 ಲಕ್ಷ, ಕಟ್ಟಡ ಮತ್ತು ಇತರ ಸ್ಥಿರಾಸ್ತಿ ದುರಸ್ಥಿ ಮತ್ತು ನಿರ್ವಹಣಾ ವೆಚ್ಚ ಒಟ್ಟು 12.5 ಲಕ್ಷ, ದೇಣಿಗೆ ಮತ್ತು ಅನುದಾನ 4.5 ಲಕ್ಷ, ಸಿಬ್ಬಂದಿ, ವಾಹನ ಬಾಡಿಗೆ ಹೊರ ಗುತ್ತಿಗೆ ವೆಚ್ಚ 15 ಲಕ್ಷ, ಕೌನ್ಸಿಲ್ ಸಂಬಂಧಿ ವೆಚ್ಚ ಐದು ಲಕ್ಷ, ರಸ್ತೆ ದುರಸ್ಥಿ 27 ಲಕ್ಷ, ಚರಂಡಿ ದುರಸ್ಥಿ 18 ಲಕ್ಷ, ದಾರಿದೀಪಗಳ ವಿದ್ಯುತ್ ಬಿಲ್ಲು 40 ಲಕ್ಷ, ದಾರಿ ದೀಪಗಳ ರಿಪೇರಿ ಹೊರಗುತ್ತಿಗೆ ವೆಚ್ಚ, ಉಪಕರಣ ಖರೀದಿ ಸೇರಿ 45 ಲಕ್ಷ, ದಾರಿದೀಪಗಳ ವಿಸ್ತರಣೆಗೆ 35 ಲಕ್ಷ, ಇತರೆ ಸಾಮಾನ್ಯ ವೆಚ್ಚ- ತುರ್ತು ಕಾಮಗಾರಿ, ಫಾಗಿಂಗ್, ಔಷಧಿ ಸಿಂಪಡಣೆ ಸೇರಿ 5.5 ಲಕ್ಷ, ಅನಾಥ ಶವ ದಫನಕ್ಕೆ ಎರಡು ಲಕ್ಷ, ಘನ ತ್ಯಾಜ್ಯ ವಿಲೇವಾರಿ ಹೊರ ಗುತ್ತಿಗೆ 60 ಲಕ್ಷ, ನೀರು ಸರಬರಾಜು ವಿದ್ಯುತ್ ಬಿಲ್ 80 ಲಕ್ಷ, ನೀರು ಸರಬರಾಜು ದುರಸ್ಥಿ ಮತ್ತು ನಿರ್ವಹಣೆಗೆ 60 ಲಕ್ಷ, ನೀರು ಸರಬರಾಜು ಹೊರ ಗುತ್ತಿಗೆ 20 ಲಕ್ಷ, ಒಳಚರಂಡಿ ದುರಸ್ಥಿ ಮತ್ತು ನಿರ್ವಹಣೆಗೆ 10 ಲಕ್ಷ ಮತ್ತು ಹೊರ ಗುತ್ತಿಗೆ ವೆಚ್ಚ ಎರಡು ಲಕ್ಷ, ಪ.ಜಾ.ಪ.ಪಂ.ಅಭಿವೃದ್ಧಿ ನಿಧಿಗೆ 31.35 ಲಕ್ಷ, ಇತರೆ ಹಿಂದುಳಿದ ವರ್ಗದ ಅಭಿವೃದ್ಧಿಗೆ 9.42 ಲಕ್ಷ, ವಿಶೇಷ ಚೇತನರ ನಿಧಿಗೆ 3.90 ಲಕ್ಷ, ನಲ್ಮ್ ಅನುದಾನ ದೇಣಿಗೆ 10 ಲಕ್ಷ, ಲಘು ವಾಹನ ಖರೀದಿಗೆ 10, ಕಚೇರಿ ಉಪಕರಣಕ್ಕೆ ಐದು ಲಕ್ಷ, ರಸ್ತೆಗಳ ಕಾಂಕ್ರೀಟೀಕರಣ ಮತ್ತು ಡಾಮರೀಕರಣಕಕೆ 1.45 ಕೋಟಿ, ರಸ್ತೆ ಬದಿಯ ಚರಂಡಿ ನಿರ್ಮಾಣಕ್ಕೆ 67 ಲಕ್ಷ, ನೇರ್ಮಲ್ಯ ಮತ್ತು ಘನ ತ್ಯಾಜ್ಯ ನಿರ್ವಹಣೆಯ ಯಂತ್ರೋಪಕರಣಕ್ಕೆ 13.40 ಲಕ್ಷ, ನೀರು ಸರಬರಾಜು ಮೂಲಗಳು ಮತ್ತು ವಿತರಣಾ ವ್ಯವಸ್ಥೆ ಯಂತ್ರೋಪಕರಣಗಳಿಗೆ 70 ಲಕ್ಷ, ಒಳಚರಂಡಿ ಯಂತ್ರೋಪಕರಣಕ್ಕೆ 12 ಲಕ್ಷ, ಉದ್ಯಾನವನಗಳ ನಿರ್ಮಾಣಕ್ಕೆ ಆರು ಲಕ್ಷ ಮತ್ತು ನಿರ್ವಹಣೆಗೆ ಒಂದು ಲಕ್ಷ ಮೀಸಲಿರಿಸಲಾಗಿದೆ.

See also  ಮದ್ರಸ ಅಧ್ಯಾಪಕನಿಂದ ವಿದ್ಯಾರ್ಥಿ ಮೇಲೆ ದೌರ್ಜನ್ಯ

ಯೋಜನೆಗಳಿಲ್ಲದ ಬಜೆಟ್- ಸದಸ್ಯರು ಟೀಕೆ: ಯೋಜನೆ ಮತ್ತು ಯೋಚನೆಗಳಿಲ್ಲದ ಜನ ವಿರೋಧಿ ಬಜೆಟ್ ಎಂದು ವಿಪಕ್ಷ ಸದಸ್ಯರು ಟೀಕಿಸಿದ್ದಾರೆ. ಬಜೆಟ್ ನಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ. ಕೇವಲ ಖರ್ಚು ವೆಚ್ಚಗಳನ್ನು ತೋರಿಸಿದೆಯೇ ಹೊರತು ಅಭಿವೃದ್ಧಿಗೆ ಅನುದಾನ ಇಲ್ಲ. ಆದುದರಿಂದ ಎಲ್ಲಾ ವಾರ್ಡ್ ಗಳೀಗೂ 10 ಲಕ್ಷ ರೂ ಅಭಿವೃದ್ಧಿ ಅನುದಾನ ನೀಡಬೇಕು ಎಂದು ಸದಸ್ಯ ಕೆ.ಎಸ್.ಉಮ್ಮರ್ ಹೇಳಿದರು.

ಈ ಕುರಿತು ಚರ್ಚ್ ನಡೆದು ಪ್ರತಿ ವಾರ್ಡ್ ಗೆ ಆರು ಲಕ್ಷ ದಂತೆ ಅಭಿವೃದ್ಧಿ ಅನುದಾನ ನೀಡಲಾಗುವುದು ಎಂದು ಅಧ್ಯಕ್ಷೆ ಘೋಷಿಸಿದರು.

ಈ ಅನುದಾನಕ್ಕೆ ಫೆ.ಅಂತ್ಯದೊಳಗೆ ಕ್ರಿಯಾ ಯೋಜನೆ ರೂಪಿಸಲು ನಿರ್ಧರಿಸಲಾಯಿತು. ಹೆಚ್ಚು ಅನುದಾನ ನೀಡಲು ಆದಾಯ ಕ್ರೂಡೀಕರಿಸಬೇಕಾಗಿದೆ ಎಂದು ಸದಸ್ಯ ಎನ್.ಎ.ರಾಮಚಂದ್ರ ಹೇಳಿದರು. ಕಟ್ಟಡಗಳ ಮರು ಸರ್ಗವೇ ಮಾಡಿ ತೆರಿಗೆ ವಿಧಿಸಿ ಆದಾಯ ಕ್ರೂಢೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ತಿಳಿಸಿದರು. ಹಲವು ಕಡೆಗಳಲ್ಲಿ ನೀರಿನ ಮೀಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯರಾದ ಕೆ.ಗೋಕುಲ್ದಾಸ್ ಮತ್ತು ನಝೀರ್ ಶಾಂತಿನಗರ ಹೇಳಿದರು. ಇದರ ಪರಿಶೀಲನೆಗೆ ನಿರ್ಧರಿಸಲಾಯಿತು.

ಶಾಸಕರು ನಗರದ ಅಭಿವೃದ್ಧಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಸದಸ್ಯ ಕೆ.ಗೋಕುಲ್ ದಾಸ್ ಟೀಕಿಸಿದರು. ಎಲ್ಲಾ ನಗರ, ಪಟ್ಟಣಗಳಿಗೆ ಸರ್ಕಾರದಿಂದ ಐದು, 10 ಕೋಟಿ ಅನುದಾನ ಬರುತ್ತಿದ್ದರೆ, ಶಾಸಕರು ಮತ್ತು ನ.ಪಂ.ಆಡಳಿತ ಪ್ರಯತ್ನಿಸದ ಕಾರಣ ಸುಳ್ಯಕ್ಕೆ ಮಾತ್ರ ಸರ್ಕಾರದಿಂದ ವಿಶೇಷ ಅನುದಾನ ಬರುತ್ತಿಲ್ಲ. ಇದರಿಂದ ಸುಳ್ಯ ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಹೇಳಿದರು.

ನಗರ ಪಂಚಾಯಿತಿ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಮುಖ್ಯಾಧಿಕಾರಿ ಗೋಪಾಲ ನಾಕ್ ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು