News Kannada
Friday, December 02 2022

ಕರಾವಳಿ

ಸಜಿಪನಡುವಿನ ರುದ್ರಭೂಮಿಯಲ್ಲಿ ಮೊಳಗಿದ ಶಿವಧ್ಯಾನ

Photo Credit :

ಸಜಿಪನಡುವಿನ ರುದ್ರಭೂಮಿಯಲ್ಲಿ ಮೊಳಗಿದ ಶಿವಧ್ಯಾನ

ಬಂಟ್ವಾಳ: ಆ ಸ್ಮಶಾನದಲ್ಲಿ ಮಧ್ಯರಾತ್ರಿ ವರೆಗೂ ಜನ ಸೇರಿದ್ದರು, ಅವರ ಮೊಗದಲ್ಲಿ ಸ್ಮಶಾನ ವೆಂಬ ಯಾವ ಭಾವವೂ ಇರಲಿಲ್ಲ.. ಭಯವೂ ಇರಲಿಲ್ಲ. ಪುರುಷ-ಮಹಿಳೆ ಎಂಬ ಬೇಧಭಾವ ವಿಲ್ಲದೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲರೂ ಶಿವಧ್ಯಾನದಲ್ಲಿ ತೊಡಗಿದ್ದ ಅಪೂರ್ವ ಸನ್ನಿವೇಶವದು.

ಹೌದು ಇದು ಸಜಿಪನಡು ಕಂಚಿನಡ್ಕ ಪದವಿನಲ್ಲಿ ಶಿವರಾತ್ರಿಯ ದಿನವಾದ ಮಂಗಳವಾರ ರಾತ್ರಿ ಕಂಡು ಬಂದ ಸಂಭ್ರಮ… ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ . ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ ನಡೆಯುವುದೇ ಅದು ವಿಶೇಷ. ಅದರಲ್ಲೂ ರುದ್ರಭೂಮಿಗೆ ಜನರು ಬರುವುದೆ ವಿರಳ .ಅಂತಹ ಜಾಗದಲ್ಲಿ ಅದು ಮಂಗಳವಾರ ರಾತ್ರಿ ಹೊತ್ತಿನಲ್ಲಿ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಅಭೂತಪೂರ್ವ ಕ್ಷಣ ಅದು ಎಲ್ಲೂ ಕಾಣಸಿಗದ ಸನ್ನಿವೇಶ.

ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಭಜನಾ ಸಂಕೀರ್ತನೆ ದೇವಭೂಮಿ ಎಂಬ ನಾಮವನ್ನು ಸಾಕ್ಷೀಕರಿಸಿತು.

ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ,ಇಂತಹಾ ಪವಿತ್ರ ಸ್ಥಳ ಶಿವನ ಸಾನಿಧ್ಯವೂ ಇದೆ. ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದ್ದಾರೆ.

ಭಜನಾ ಸಂಕೀರ್ತನೆಯಲ್ಲಿ ಶ್ರೀ ಮಹಾಗಣಪತಿ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿ ಸಜೀಪ ನಡು , ಶ್ರೀ ರಾಮ ಭಜನಾ ಮಂಡಳಿ ಶ್ರೀ ರಾಮನಗರ ಕೋಟೆಕಣಿ , ಶ್ರೀಸೋಮನಾಥೇಶ್ವರ ಭಜನಾಮಂಡಳಿ ಇರಾ .ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲೆಮೊಗರು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಾರಾಜೆ , ಶ್ರೀ ಶಾರದಾ ಭಜನಾ ಮಂಡಳಿ ನಗ್ರಿ ,ಬ್ರಹ್ಮಶ್ರೀ ಗುರು ಭಜನಾ ಮಂಡಳಿ ಬೋಳಿಯಾರ್ , ಬ್ರಹ್ಮಶ್ರೀ ಗುರು ಮಂದಿರ ಭಜನಾ ಮಂಡಳಿ ಸುಭಾಷ್ ನಗರ ಮೊದಲಾದ ಭಜನಾ ತಂಡಗಳು ಶಿವರಾತ್ರಿಯನ್ನು ಅರ್ಥಪೂರ್ಣವಾಗಿಸಿತು.

ಒಟ್ಟಿನಲ್ಲಿ ಸ್ಮಶಾನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಮಹಾಶಿವರಾತ್ರಿ ಯ ಸಂಭ್ರಮ ಯಶಸ್ವಿಯಾಯಿತು.

See also  ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ.ಆರ್. ಸುರೇಶ್ ಮತ್ತೆ ಅಧಿಕಾರ ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು