News Kannada
Thursday, December 08 2022

ಕರಾವಳಿ

ಉಜಿರೆಯ ವ್ಯಕ್ತಿ ಓಮನ್ ನಲ್ಲಿ ನಾಪತ್ತೆ

Photo Credit :

ಉಜಿರೆಯ ವ್ಯಕ್ತಿ ಓಮನ್ ನಲ್ಲಿ ನಾಪತ್ತೆ

ಬೆಳ್ತಂಗಡಿ: ವಿದೇಶದಲ್ಲಿ ದಶಕದಿಂದ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಉಜಿರೆಯ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಅವರ ಪತ್ತೆಗಾಗಿ ಮನೆಮಂದಿ ಸರಕಾರದ ಮೊರೆ ಹೋಗಿದ್ದಾರೆ.

ಉಜಿರೆ ಸಮೀಪದ ಲಾಲ ಗ್ರಾಮದ ಕಾಶಿಬೆಟ್ಟು ನಿವಾಸಿ ಹಸೈನ್(53) ಎಂಬವರು ಕಳೆದು ಹತ್ತು ವರ್ಷಗಳಿಂದ ಒಮನ್ ನಲ್ಲಿ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಜ. 26ರ ಸಂಜೆ 6 ಗಂಟೆಯಿಂದ ಅವರು ಏಕಾಏಕಿ ನಾಪತ್ತೆಯಾಗಿದ್ದಾರೆ. ಪ್ರತಿದಿನ ಮಧ್ಯಾಹ್ನ ಮನೆಯವರೊಂದಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಜ. 26ರಂದು ಮನೆಯವರಿಗೆ ಮಧ್ಯಾಹ್ನ ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಯಾವುದೇ ಕರೆಗಳು ಅವರಿಂದ ಬಂದಿಲ್ಲ. ಅವರಲ್ಲಿದ್ದ ಮೊಬೈಲ್ ಸ್ವೀಚ್ ಆಫ್ ಆಗಿದೆ.

ಇದರಿಂದ ಕಂಗೆಟ್ಟ ಮನೆಯವರು ಅವರ ಗೆಳೆಯರಿಗೆ ಕರೆ ಮಾಡಿದಾಗ ಜ. 26ರ ಬಳಿಕ ರೂಂನಿಂದ ನಾಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಅವರು ಹೋಟೆಲ್ ಗೆ ವಿರಾಮದ ಸಮಯದಲ್ಲಿ ರೂಂಗೆ ಬಂದು ಮಲಗಿದ್ದರು. ಬಳಿಕ ಹೊರಗೆ ಹೋಗಿದ್ದಾರೆ. ಅವರು ರೂಂಗೂ ಬಾರದೆ, ಹೋಟೆಲ್ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಅವರ ಸಹವರ್ತಿ ಗೆಳೆಯರು ಮನೆಯವರಿಗೆ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಓಮನ್ ನಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಮೈಗ್ರೇನ್ ಸಮಸ್ಯೆ ಇತ್ತು. ಒಂದು ವರ್ಷದ ಹಿಂದೆ ಊರಿಗೆ ಬಂದಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಇನ್ನೊಂದು ವರ್ಷದ ಮಟ್ಟಿಗೆ ಕೆಲಸ ಮಾಡುವುದಾಗಿ ಹೇಳು ಪುನಃ ಓಮನ್ ಗೆ ತೆರಳಿದ್ದರು. ಮನೆಯವರು ಆರು ತಿಂಗಳ ಔಷಧಿಯನ್ನು ಕೊಟ್ಟು ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಹುಸೈನ್ ಅವರು ನಾಪತ್ತೆಯಾದ ಬಗ್ಗೆ ಮನೆಯವರು ಓಮನ್ ನಲ್ಲಿರುವ ಓಮನ್ ಸೋಶಿಯಲ್ ಫೋರಂ ಹಾಗೂ ಕೆ.ಸಿ.ಎಫ್ ಸಂಘಟನೆಯವರಿಗೆ ತಿಳಿಸಿದ್ದು, ಅವರು ಜ. 29ರಂದು ಭಾರತೀಯ ದೂತವಾಸಕ್ಕೆ ದೂರು ನೀಡಿದ್ದಾರೆ.

ಹುಸೈನ್ ಅವರು ನಾಪತ್ತೆಯಾಗಿರುವ ಬಗ್ಗೆ ತಿಳಿದ ಮನೆಯವರು ಕೇಂದ್ರ ಸರಕಾರದ ಗಮನಕ್ಕೆ ತರುವಂತೆ ಸಂಸದ ನಳಿನ್ ಕುಮಾರ್ ಭೇಟಿಯಾಗಿ ಆದಷ್ಟು ಬೇಗ ಹುಡುಕಿ ವಾಪಸ್ ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಓಮನ್ ಅನಿವಾಸಿ ಭಾರತೀಯ ಸಂಘದ ಅಧ್ಯಕ್ಷರಿಗೆ, ಇತರ ಅಧಿಕಾರಿಗಳಿಗೂ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಿದೇಶಾಂಗ ಸಚಿವೆ ಅವರಿಗೆ ಟ್ವೀಟ್ ಮಾಡಿ ಸಮಸ್ಯೆಯನ್ನು ವಿವರಿಸಿದ್ದಾರೆ. ಹುಸೈನ್ ಅವರು ವಿವಾಹಿತರಾಗಿದ್ದು, ಪತ್ನಿ, ಇಬ್ಬರು ಗಂಡುಮಕ್ಕಳಿದ್ದಾರೆ.

See also  ಗಾಂಜಾ ಸಹಿತ ಯುವತಿಯ ವಶ: ಜೊತೆಗಿದ್ದ ಯುವಕ ಪರಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು