News Kannada
Tuesday, October 04 2022

ಕರಾವಳಿ

ಐಕ್ಯತೆ, ಸಾಮಾಜಿಕ ಹೋರಾಟದ ಕಿಚ್ಚು ಬಂಟ್ವಾಳದಿಂದಲೇ ಆರಂಭವಾಗಲಿ: ಎಸ್ಬಿ ದಾರಿಮಿ - 1 min read

Photo Credit :

ಐಕ್ಯತೆ, ಸಾಮಾಜಿಕ ಹೋರಾಟದ ಕಿಚ್ಚು ಬಂಟ್ವಾಳದಿಂದಲೇ ಆರಂಭವಾಗಲಿ: ಎಸ್ಬಿ ದಾರಿಮಿ

ಬಂಟ್ವಾಳ: ಮುಸ್ಲಿಂ ಸಮಾಜ ಬಂಟ್ವಾಳ (ಎಂಎಸ್ಬಿ) ಸಂಘಟನೆಯ ವತಿಯಿಂದ `ಪ್ರಜಾಪ್ರಭುತ್ವದ ಉಳಿವಿಗಾಗಿ ಐಕ್ಯರಾಗೋಣ’ ಎಂಬ ಘೋಷಣೆಯೊಂದಿಗೆ `ಬೃಹತ್ ಸಹೋದರತ್ವ ಸಮಾವೇಶ’ ಶುಕ್ರವಾರ ರಾತ್ರಿ ಬಿ.ಸಿ.ರೋಡ್ ನ ಕೈಕಂಬ ಬಳಿಯ ಎ.ಕೆ.ಮೈದಾನದ ಮಿತ್ತಬೈಲ್ ಅಬ್ದುಲ್ಲಾ ಹಾಜಿ ವೇದಿಕೆಯಲ್ಲಿ ನಡೆಯಿತು.

ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಉಳಿವಿಗಾಗಿ ಐಕ್ಯರಾಗೋಣ. ಇದು ಈ ಕಾಲದ ಬೇಡಿಕೆಯೂ ಆಗಿದೆ. ಐಕ್ಯತೆ ಹಾಗೂ ಸಾಮಾಜಿಕ ಹೋರಾಟದ ಕಿಚ್ಚು ಬಂಟ್ವಾಳದಿಂದಲೇ ಆರಂಭವಾಗಲಿ ಎಂದು ಹೇಳಿದರು.

ಎಸ್ಸೆಸ್ಸೆಫ್ ನ ಮಾಜಿ ಜಿಲ್ಲಾಧ್ಯಕ್ಷ ಯಾಕೂಬ್ ಸಅದಿ, ಸರಕಾರದ ವಿವಿಧ ಇಲಾಖೆಗಳಲ್ಲಿ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆಯಿದೆ. ಇದು ಸಮುದಾಯದ ಏಳಿಗೆಗೆ ತೊಡಕಾಗುವ ಮೂಲಕ ಮುಸ್ಲಿಮರು ಮತ್ತಷ್ಟು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಸಹಿತ ಸರಕಾರದ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಿಗೆ ಸೇರುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು, ಈ ಸಂಘಟನೆ ಸಮುದಾಯದ ಬಡವರ ಕಣ್ಣೀರು ಒರೆಸುವ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ನಾಂದಿಯಾಗಲಿ. ಈ ಹೋರಾಟ ಬಂಟ್ವಾಳಕ್ಕೆ ಸೀಮಿತವಾಗದೇ ರಾಜ್ಯದಾದ್ಯಂತ ಪಸರಿಸಲಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್, ಎಂಎಸ್ಬಿ ಗೌರವಾಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್ ಸಮಯೋಚಿತವಾಗಿ ಮಾತನಾಡಿದರು. ಎಂಎಸ್ಬಿ ಅಧ್ಯಕ್ಷ ಇಬುನ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಗೌರವಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಬೆಳ್ಮ ಕೇಂದ್ರ ಜುಮಾ ಮಸೀದಿಯ ಖತೀಬ್ ಆದಂ ಫೈಝಿ, ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ಪಿ.ಎ.ರಹೀಂ, ಎಸ್.ಎಂ. ಮುಹಮ್ಮದ್ ಅಲಿ, ಹಿದಾಯ ಫೌಂಡೇಶನ್ ನ ಅಧ್ಯಕ್ಷ ಹನೀಫ್ ಗೋಳ್ತಮಜಲು, ಪುರಸಭೆ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಮುನೀಶ್ ಅಲಿ, ಇಕ್ಬಾಲ್ ನಂದರಬೆಟ್ಟು, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ರಝಾಕ್ ಮುಸ್ಲಿಯಾರ್ ಸಜೀಪ, ಅಬ್ಬಾಸ್ ಸಜೀಪ, ಶಾಹುಲ್ ಹಮೀದ್, ಎಸ್.ಎಂ ಫಾರೂಕ್, ಶಾಹುಲ್ ಎಸ್.ಎಚ್. ಶಾಹುಲ್ ಎಸ್.ಪಿ., ರಶೀದ್ ವಗ್ಗ, ಇಜಾಝ್ ಅಹ್ಮದ್, ಮುಹಮ್ಮದ್ ವಳವೂರು, ಸಜೀಪನಡು ಗ್ರಾಪಂ ಅಧ್ಯಕ್ಷ ನಾಸಿರ್ ಸಜೀಪ, ರಿಯಾಝ್ ಫರಂಗಿಪೇಟೆ, ಮುಹಮ್ಮದ್ ಶಫಿ, ಎಂ.ಎಚ್. ಹಸನಬ್ಬ, ಮುಹಮ್ಮದ್ ಕಲ್ಲಡ್ಕ, ಎ.ಮುಹಮ್ಮದ್, ಜಿ. ಮುಹಮ್ಮದ್, ಇದಿನಬ್ಬ ಕೆ., ಪತ್ರಕರ್ತ ಫಾರೂಕ್ ಗೂಡಿನಬಳಿ, ಸುಲೈಮಾನ್ ನಾರ್ಶ ಮತ್ತಿತರರು ಉಪಸ್ಥಿತರಿದ್ದರು.

ಎಂಎಸ್ಬಿ ಸದಸ್ಯ ಹನೀಫ್ ಖಾನ್ ಕೊಡಾಜೆ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಲುಕ್ಮಾನ್ ಸ್ವಾಗತಿಸಿ, ಪುರಸಭಾ ಸದಸ್ಯ ಮುನೀಶ್ ಅಲಿ ವಂದಿಸಿ, ಅಕ್ಬರ್ ಅಲಿ ಹಾಗೂ ಅಶ್ರಫ್ ಅರಭಿ ಕಲ್ಲಡ್ಕ ನಿರೂಪಿಸಿದರು. ಎಂಎಸ್ಬಿ ಉಪಾಧ್ಯಕ್ಷ ಕೆ.ಎಚ್.ಅಬೂಬಕರ್ ನಿರ್ಣಯ ಮಂಡಿಸಿದರು.

ಇದಕ್ಕೂ ಮೊದಲು ಸಾಹಿತಿ ಮುಹಮ್ಮದ್ ಬಡ್ಡೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಸತ್ತಾರ್ ಗೂಡಿನಬಳಿ, ಎ.ಕೆ.ಕುಕ್ಕಿಲ. ಅಶ್ರಫ್ ಅಪೋಲೊ, ಸಲೀಂ ಬೋಳಂಗಡಿ, ಬಶೀರ್ ಎಂಪಿ., ಜಲೀಲ್ಮುಕ್ರಿ, ರಶೀದ್ ನಂದಾವರ, ಮುಸ್ತಫಾ ಗೂಡಿನಬಳಿ ಉಪಸ್ಥಿತರಿದ್ದರು.

See also  ನಾಳೆಯಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು