News Kannada
Sunday, September 25 2022

ಕರಾವಳಿ

ಅಕ್ಷತಾ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ವಿಎಚ್ ಪಿ ಆಗ್ರಹ - 1 min read

Photo Credit :

ಅಕ್ಷತಾ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ವಿಎಚ್ ಪಿ ಆಗ್ರಹ

ಸುಳ್ಯ: ಸಹಪಾಠಿಯಿಂದಲೇ ಹತ್ಯೆಯಾದ ಸುಳ್ಯದ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಕುಟುಂಬಕ್ಕೆ ಕರ್ನಾಟಕ ಸರ್ಕಾರ 10 ಲಕ್ಷ ರೂ ಪರಿಹಾರ ಧನ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಡಕುಟುಂಬಕ್ಕೆ ಸರ್ಕಾರ ನೆರವು ನೀಡುವುದರ ಜೊತೆಗೆ ಸಮಾಜವೂ ನೆರವಿನ ಹಸ್ತವನ್ನು ಚಾಚಬೇಕು ಎಂದು ಅಗ್ರಹಿಸಿದರು.
ಅವರ ಕುಟುಂಬಕ್ಕೆ ನೆರವಾಗುವ ಬಗ್ಗೆ ವಿಎಚ್ ಪಿ ವತಿಯಿಂದಲೂ ಯೋಜನೆ ರೂಪಿಸಲಾಗುವುದು. ಈ ರೀತಿಯ ಕೃತ್ಯವನ್ನು ಯಾರೇ ಮಾಡಿದರೂ ಅದು ಖಂಡನೀಯ. ಪ್ರಕರಣದಲ್ಲಿ ಬಂಧಿತನಾದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಗಳಾಗುತ್ತಿದ್ದಲ್ಲಿ ಅದನ್ನು ಪೋಷಕರು ಕೂಡಲೇ ಸಂಬಂಧಪಟ್ಟವರ ಅಥವಾ ಸಂಘಟನೆಯ ಪ್ರಮುಖರ ಗಮನಕ್ಕೆ ತರಬೇಕು. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ವಿಎಚ್ ಪಿ ವತಿಯಿಂದ ನಡೆಸಲಾಗುತಿದೆ. ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಯಾವುದೇ ಸಮಸ್ಯೆಗಳು ಉಂಟಾದರೂ ಅದಕ್ಕೆ ಸ್ಪಂದಿಸಲು ವಿಎಚ್ ಪಿ ಮತ್ತು ಬಜರಂಗದಳ ಸದಾ ಸಿದ್ಧವಿದೆ ಎಂದು ಅವರು ಹೇಳಿದರು.

ಕರಾವಳಿ ಭಾಗದಲ್ಲಿ ಡ್ರಗ್ಸ್ ಜಾಲ ವ್ಯಾಪಿಸುತ್ತಿದ್ದು, ಜಿಲ್ಲೆಯ ಯುವ ಜನಾಂಗವನ್ನು ಆಫೋಷನ ತೆಗೆದುಕೊಳ್ಳುತ್ತಿದೆ. ಈ ಕುರಿತು ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಮಾದಕ ಜಾಲ, ಅಕ್ರಮ ಗೋಸಾಗಾಟ ಮತ್ತಿತರ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇದನ್ನು ತಡೆಯಲು ಪೊಲೀಸ್ ಇಲಾಖೆಯು ಹಿಂದೇಟು ಹಾಕಿದರೆ ಇದರ ತಡೆಗೆ ಸಂಘಟನೆಯ ಕಾರ್ಯಕರ್ತರೇ ಇಳಿಯಬೇಕಾಗುತ್ತದೆ. ಈ ರೀತಿಯ ಅಕ್ರಮಗಳನ್ನು ತಡೆಯಲು ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸಲು ಮತ್ತು ಎಲ್ಲಾ ಸಹಾಯ ನೀಡಲು ವಿಎಚ್ ಪಿ ಮತ್ತು ಬಜರಂಗದಳ ಕಾರ್ಯಕರ್ತರು ಸದಾ ಸಿದ್ಧವಿದೆ ಎಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ವಿಎಚ್ ಪಿ ಸುಳ್ಯ ಪ್ರಖಂಡ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ಕಾರ್ಯದರ್ಶಿ ಮದುಸೂಧನ, ಬಜರಂಗದಳ ಸಂಚಾಲಕ ಪ್ರಕಾಶ್ ಯಾದವ್, ದುರ್ಗಾವಾಹಿನಿಯ ಸಂಚಾಲಕಿ ಅನಿತಾ, ರಂಜಿತ್ ಪೂಜಾರಿ ಉಪಸ್ಥಿತರಿದ್ದರು.

See also  ಚುನಾವಣಾ ಪ್ರಚಾರಕ್ಕೆ ಮೂರು ತಿಂಗಳ ಹಿಂದೆಯೇ ಪೂರ್ವತಯಾರಿ: ನಳಿನ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು