News Kannada
Friday, September 30 2022

ಕರಾವಳಿ

ತಳಂಗರೆ ಬಶೀರ್ ಕೊಲೆ ಆರೋಪಿಗಳಿಗೆ ಶಿಕ್ಷೆ - 1 min read

Photo Credit :

ತಳಂಗರೆ ಬಶೀರ್ ಕೊಲೆ ಆರೋಪಿಗಳಿಗೆ ಶಿಕ್ಷೆ

(ಚಿತ್ರದಲ್ಲಿ ಎಡದಿಂದ ಕೊಲೆಗೀಡಾದ ಬಶೀರ್ , ಆರೋಪಿಗಳಾದ ರಿಯಾಜ್, ಬಾದುಷಾ, ಜಾಶೀರ್)

ಕಾಸರಗೋಡು: ತಳಂಗರೆ ಖಾಸಿಲೈನ್ ನ ಕೆ.ಎ. ಬಶೀರ್(22)ರನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಈ ಪ್ರಕರಣದ ಒಂದನೇ ಆರೋಪಿಯಾಗಿರುವ ತಳಂಗರೆ ಖಾಸಿಲೇನ್ ನ ರಿಯಾಜ್ ಪಿ.ಎ.(28), ಮತ್ತು ಮೂರನೇ ಆರೋಪಿಯಾದ ತಳಂಗರೆ ಗ್ರಾಮ ಕಚೇರಿ ಹಿಂದುಗಡೆ ನಿವಾಸಿ ಜಾಸಿರ್(23) ಎಂಬವರಿಗೆ ಒಂದು ಸೆಕ್ಷನ್‌ನಲ್ಲಿ ಒಂದು ತಿಂಗಳು ಸಜೆ, ಇನ್ನೊಂದು ಸೆಕ್ಷನ್‌ನಲ್ಲಿ ನಾಲ್ಕು ವರ್ಷ ಕಠಿಣ ಸಜೆ ಮತ್ತು 50,000 ರೂ. ಜುಲ್ಮಾನೆ, ಮತ್ತೊಂದು ಸೆಕ್ಷನ್‌ನಲ್ಲಿ 7 ವರ್ಷ ಕಠಿಣ ಸಜೆ ಮತ್ತು 2 ಲಕ್ಷ ರೂ. ಸೇರಿದಂತೆ ಒಟ್ಟು 11 ವರ್ಷ ಕಠಿಣ ಸಜೆ ಮತ್ತು 2.5 ಲಕ್ಷ ರೂ. ಜುಲ್ಮಾನೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇದೇ ಪ್ರಕರಣದ ಎರಡನೇ ಆರೋಪಿಯಾಗಿರುವ ತಳಂಗರೆ ವೆಸ್ಟ್ ಉಬೈದ್ ಮಂಜಿಲ್‌ನ ಬಾದಿಶ ಪಿ.ಎ.(22)ನಿಗೆ ಒಂದು ಸೆಕ್ಷನ್‌ನಲ್ಲಿ ಒಂದು ತಿಂಗಳ ಸಜೆ, ಇನ್ನೊಂದು ಸೆಕ್ಷನ್‌ನಲ್ಲಿ ನಾಲ್ಕು ವರ್ಷ ಕಠಿಣ ಸಜೆ, 50,00 ರೂ. ಜುಲ್ಮಾನೆ, ಮತ್ತೊಂದು ಸೆಕ್ಷನ್‌ನಲ್ಲಿ ನಾಲ್ಕು ವರ್ಷ ಕಠಿಣ ಸಜೆ ಮತ್ತು 2 ಲಕ್ಷ ರೂ. ಜುಲ್ಮಾನೆ ಸೇರಿದಂತೆ ಒಟ್ಟು 7 ವರ್ಷ ಕಠಿಣ ಸಜೆ ಮತ್ತು 2.5 ಲಕ್ಷ ರೂ. ಜುಲ್ಮಾನೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗಳ ಪೈಕಿ ಒಂದನೇ ಮತ್ತು ಮೂರನೇ ಆರೋಪಿ ಶಿಕ್ಷೆಯನ್ನು ಏಳು ವರ್ಷವಾಗಿ ಒಟ್ಟಿಗೆ ಅನುಭವಿಸಿದರೆ ಸಾಕೆಂದೂ, ಎರಡನೇ ಆರೋಪಿ ಶಿಕ್ಷೆಯನ್ನು ನಾಲ್ಕು ವರ್ಷವಾಗಿ ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ತಲಾ ಒಂದೂವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

2012 ಫೆಬ್ರವರಿ 23ರಂದು ರಾತ್ರಿ ತಳಂಗರೆ ಮಾಲಿಕ್‌ದೀನಾರ್ ಮಸೀದಿ ಬಳಿಯ ಮೈದಾನದಲ್ಲಿ ಬಶೀರ್‌ರನ್ನು ಬಿಯರ್ ಬಾಟ್ಲಿಯಿಂದ ಮತ್ತು ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಲಾಗಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ 2012 ಎಪ್ರಿಲ್ 5ರಂದು ಬೆಳಿಗ್ಗೆ ಸಾವನ್ನಪ್ಪಿದ್ದರು. ಈ ಪ್ರಕರಣದ ಒಂದನೇ ಆರೋಪಿ ರಿಯಾಸ್, ಕೊಲೆಗೈಯ್ಯಲ್ಪಟ್ಟ ಬಶೀರ್‌ರಲ್ಲಿ ಬೈಕ್‌ನ ಕೀಲಿಕೈ ಕೇಳಿದ್ದರೆಂದೂ ಆಗ ಬಶೀರ್ ಅದನ್ನು ಒಂದನೇ ಆರೋಪಿಯ ಮುಖಕ್ಕೆ ಎಸೆದಿದ್ದನೆಂದೂ, ಆ ವಿಷಯದಲ್ಲಿ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿತ್ತೆಂದು ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಅಂದು ಕಾಸರಗೋಡು ಸಿ.ಐಯಾಗಿದ್ದ ಬಾಬು ಪೆರಿಂಙತ್ ಈ ಪ್ರಕರಣದ ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳಿದ್ದರು.

See also  ಸಚಿವ ದೇಶಪಾಂಡೆ ಸ್ಕೂಬಾ ಡೈವ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು