News Kannada
Friday, September 30 2022

ಕರಾವಳಿ

ಈ ದೇವನಿಗೆ ಮದ್ಯವೇ ಅಭಿಷೇಕ, ಸಿಗರೇಟ್ ನ ಹೊಗೆಯೇ ಆರತಿ   - 1 min read

Photo Credit :

ಈ ದೇವನಿಗೆ ಮದ್ಯವೇ ಅಭಿಷೇಕ, ಸಿಗರೇಟ್ ನ ಹೊಗೆಯೇ ಆರತಿ  

ಕಾರವಾರ: ಇದೊಂದು ವಿಶಿಷ್ಟ ಜಾತ್ರೆ. ಯಾವುದೇ ಜಾತ್ರಾ ಉತ್ಸವದಲ್ಲಿ ದೇವರಿಗೆ ಹಾಲು, ನೈವೇದ್ಯ, ಅಭಿಷೇಕ ಮಾಡುವುದು ಸಾಮಾನ್ಯ. ಅದರಲ್ಲೂ ಉಗ್ರ ಸ್ವರೂಪದ ದೇವರಾದರೆ ಕುರಿ, ಕೋಳಿ ಬಲಿ ನೀಡುತ್ತಾರೆ. ಆದರೆ ಇಲ್ಲಿಯ ದೇವರಿಗೆ ಸಾರಾಯಿ ಅಭಿಷೇಕ, ಸಿಗರೇಟಿನಿಂದ ಪೂಜಿಸುವ ಅಪರೂಪದ ಜಾತ್ರೆ ಒಂದು ಶತಮಾನಗಳಿಂದ ನಡೆದುಕೊಂಡು ಬಂದಿದೆ.   ಇಂಥ ವಿಶಿಷ್ಟ ಆಚರಣೆಗಳನ್ನು ಹೊಂದಿರುವ ದೇವಾಲಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿದೆ. ಆ ದೇವನೆ ಖಾಫ್ರಿ ದೇವ. ಇಲ್ಲಿನ ಆಚರಣೆಗಳು ವಿಚಿತ್ರವಾಗಿದ್ದರೂ ಸತ್ಯ.

 
ದೇವನಿಗೆ ಸಾರಾಯಿ, ಸಿಗರೇಟುಗಳನ್ನು ಭಕ್ತರು ಅಷ್ಟೇ ಭಕ್ತಿಯಿಂದ ಅರ್ಪಿಸುತ್ತಾರೆ. ಈ ದೇವನಿಗೆ ಸಾರಾಯಿ ಮತ್ತು ಸಿಗರೇಟು ಎಂದರೆ ಪಂಚಪ್ರಾಣ. ಕಾಳಿ ನದಿಯ ತಟಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಫ್ರಿ ದೇವರ ಜಾತ್ರೆ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಹಣ್ಣು-ಕಾಯಿಗಳ ಜೊತೆಗೆ ಮದ್ಯದ ಬಾಟಲಿ, ಸಿಗರೇಟುಗಳನ್ನು ತರುತ್ತಾರೆ. ರವಿವಾರ ನಡೆದ ಖಾಪ್ರಿ ಜಾತ್ರೆ ಅತಿ ಅದ್ಧೂರಿಯಾಗಿ ನಡೆಯಿತು. 
 
 
ದೇವನ ಇತಿಹಾಸ : ಸುಮಾರು ಒಂದು ಶತಮಾನಗಳ ಹಿಂದೆ ದಕ್ಷಿಣ ಆಫ್ರಿಕಾ ದೇಶದ ಖಾಫ್ರಿ ಹೆಸರಿನ ಪ್ರಜೆ ಇಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದನಂತೆ. ಆತ ಪರೋಪಕಾರಿ ವ್ಯಕ್ತಿಯಾಗಿದ್ದ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದನಂತೆ. ಹಾಗಾಗಿ ಅವನಿಗೆ ಬಡವರ ರಕ್ಷಕ ಎಂದು ಕರೆಯಲಾಗುತ್ತಿತ್ತು. ಕೆಲವರ ಪಾಲಿಗೆ ಆತನೆ ದೇವಮಾನವ. ಹೀಗಿರುವಾಗ ಆತ ಇದ್ದಕ್ಕಿದ್ದಂತೆ ಕಣ್ಮರೆಯಾದ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಆದರೂ ಜನಗಳಿಗೆ ಆತನ ಮೇಲೆ ಅಪಾರವಾದ ಭಯ -ಭಕ್ತಿ ಹೊಂದಿದ್ದರು. ಒಂದು ದಿನ ಗ್ರಾಮದ ಪರಸಪ್ಪ ಎಂಬಾತನಿಗೆ ಕಣ್ಮರೆಯಾದ ಖಾಫ್ರಿ ಕನಸಿನಲ್ಲಿ ಬಂದು ತನಗೊಂದು ಗುಡಿಯನ್ನು ಕಟ್ಟುವಂತೆ ಹಾಗೂ ತನಗೆ ಇಷ್ಟವಾದ ಸಾರಾಯಿ, ಸಿಗರೇಟು ಮಾಂಸದ ಭಕ್ಷಾದಿಗಳನ್ನು ನೀಡುವಂತೆ ಸೂಚಿಸಿದನಂತೆ ಎನ್ನಲಾಗುತ್ತದೆ.  ಇದರಿಂದ ಪರಸಪ್ಪ ಖಾಫ್ರಿಯ ಒಂದು ಕಲ್ಲಿನ ಮೂರ್ತಿಯನ್ನು ತಂದು ಪ್ರತಿಷ್ಟಾಪಿಸಿ ಪೂಜಿಸಲು ಪ್ರಾರಂಭಿಸಿದ.
 
ಖಾಫ್ರಿಯ ಮೇಲೆ ಭಯ-ಭಕ್ತಿಯಿದ್ದವರು ಆಗಾಗ ಬಂದು ಆತನ ಕಲ್ಲಿನ ಮೂರ್ತಿಗೆ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು.  ಅಂದಿನಿಂದ ಇಂದಿನವರೆಗೂ ಖಾಫ್ರಿ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವಾಗ ಇದನ್ನು ಕಡ್ಡಾಯವಾಗಿ ಸಾರಾಯಿ, ಸಿಗರೇಟು ತಂದು ದೇವರಿಗೆ ಸಲ್ಲಿಸುತ್ತಾರೆ.   ಸ್ಥಳೀಯರ ಪ್ರಕಾರ ಖಾಪ್ರಿ ಎನ್ನುವ ಸಂತ ಇಂದು ನಮಗೆ ನಮ್ಮ ಕಷ್ಟ -ಕಾರ್ಪಣ್ಯಗಳನ್ನು ನಿವಾರಿಸುವ, ಇಷ್ಟಾರ್ಥ ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ ದೇವನಾಗಿ ಇಲ್ಲಿಯ ನೆಲೆ ನಿಂತಿದ್ದಾನೆ. ಭಕ್ತಾದಿಗಳು ಅವನ ಮೇಲೆ ಭಕ್ತಿ ಇರಿಸಿಕೊಂಡು ಬಂದು ತಮ್ಮ ಯತಾರ್ಥವಾದ ಸೇವೆಯನ್ನು ಸಲ್ಲಿಸುತ್ತೇವೆ ಎನ್ನುತ್ತಾರೆ. 
 
 ವಿವಿಧ ಕೈಂಕರ್ಯಗಳು: ಖಾಫ್ರಿ ದೇವರಿಗೆ ದೀಪದೆಣ್ಣೆ. ಹೂ-ಹಣ್ಣು ಕಾಯಿಯನ್ನು ಸಲ್ಲಿಸುವುದು. ಕೋಳಿಯನ್ನು ಬಲಿಕೊಡುವದು, ಖಾಯಿಪಲ್ಲೆ ತರಕಾರಿಯ ತುಲಾಭಾರ ನಡೆಸುವದು ಮಾಮೂಲು ಸಂಪ್ರದಾಯದ ಭಾಗವಾಗಿದೆ. ಜೊತೆಗೆ ಭಕ್ತಾದಿಗಳು ವೈವಿಧ್ಯಮಯವಾದ ಮದ್ಯಗಳನ್ನು ತಂದು ದೇವನಿಗೆ ಸಲ್ಲಿಸುತ್ತಾರೆ.
 
ಅಲ್ಲದೇ ಅದನ್ನೆ ದೇವರ ಪ್ರಸಾದ ಎಂದು ಸ್ವೀಕರಿಸುವವರು ಇದ್ದಾರೆ. ಸಿಗರೇಟನ್ನು ತಂದು, ಅಗರಬತ್ತಿಯ ರೂಪದಲ್ಲಿ ಆರತಿಯನ್ನು ಮಾಡುತ್ತಾರೆ.  ಜಾತ್ರೆಯ ಸಂದರ್ಭದಲ್ಲಿ ಕಾರವಾರವಷ್ಟೇ ಹಾಗೂ ಗೋವಾ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಹರಕೆ ಈಡೇರಿದ ನಂತರದಲ್ಲಿ ತಮ್ಮ ಮನಸ್ಸಿಗೆ ತೋಚಿದಂತೆ ಹಣದ ರೂಪದಲ್ಲಿ ವಸ್ತುರೂಪದಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ.  ಒಟ್ಟಾರೆಯಾಗಿ ರಾಜ್ಯದ ಹಲವು ದೇವ ದೇವತೆಗಳ ಜಾತ್ರೆಗಳಿಗಿಂತ ಖಾಫ್ರಿ ದೇವರ ಜಾತ್ರೆ ಅತ್ಯಂತ ವಿಶಿಷ್ಟವಾದ ಆಚರಣೆಯಾಗಿದೆ. ಆಶ್ಚರ್ಯಗಳನ್ನು ತರುವ ವಿವಿಧ ಆಚರಣೆಗಳು ಈ ಖಾಫ್ರಿ ದೇವ ಹೊಂದಿದ್ದಾನೆ.
 
See also  ಗ್ರಾಂ.ಪಂ ವತಿಯಿಂದ ಪರಿಶಿಷ್ಟ ಜಾತಿ-ಪಂಗಡಗಳಿಗೆ ನೀರಿನ ಟ್ಯಾಂಕ್ ವಿತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು