News Kannada
Friday, December 02 2022

ಕರಾವಳಿ

ಸುಳ್ಯ ಕ್ಷೇತ್ರದಲ್ಲಿ 18,755 ಮತದಾರರ ಹೆಚ್ಚಳ

Photo Credit :

ಸುಳ್ಯ ಕ್ಷೇತ್ರದಲ್ಲಿ 18,755 ಮತದಾರರ ಹೆಚ್ಚಳ

ಸುಳ್ಯ: ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 18,755 ಮತದಾರರ ಹೆಚ್ಚಳವಾಗಿದೆ. ಕ್ಷೇತ್ರದಲ್ಲಿ 97,492 ಗಂಡು ಮತ್ತು 97802 ಸೇರಿ ಒಟ್ಟು 195,294 ಮತದಾರರಿದ್ದಾರೆ. 2013ರಲ್ಲಿ 1,76,539 ಮತದಾರರಿದ್ದರು. ಸುಳ್ಯ ತಾಲೂಕಿನ 41 ಗ್ರಾಮಗಳು, ಕಡಬ ತಾಲೂಕಿನ 26 ಗ್ರಾಮಗಳು ಹಾಗೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹೋಬಳಿಯ 9 ಗ್ರಾಮಗಳು ಸೇರಿ ಒಟ್ಟು 76 ಗ್ರಾಮಗಳು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದೆ. ಹಿಂದೆ ಕ್ಷೇತ್ರ ಇಷ್ಟು ವಿಸ್ತಾರವಾಗಿರಲಿಲ್ಲ. ಸುಳ್ಯ ತಾಲೂಕಿನ 41 ಗ್ರಾಮಗಳು ಮತ್ತು ಕಡಬದ 26 ಗ್ರಾಮಗಳು ಮಾತ್ರವಿದ್ದವು. 10 ವರ್ಷಗಳ ಹಿಂದೆ ಕ್ಷೇತ್ರ ಪುನರ್ವಿಂಗಡಣೆಯಾದಾಗ ಉಪ್ಪಿನಂಗಡಿ ಹೋಬಳಿಯ 9 ಗ್ರಾಮಗಳನ್ನು ಸುಳ್ಯ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿತ್ತು. ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮಗಳು ಮತ್ತು ಪುತ್ತೂರಿನ ಒಂಭತ್ತು ಗ್ರಾಮ ಸೇರಿ ಸಂಪಾಜೆಯಿಂದ ಶಿರಾಡಿಯವರೆಗೆ ವಿಶಾಲವಾಗಿ ಹರಡಿದೆ ಸುಳ್ಯ ಕ್ಷೇತ್ರ.

ಎ. 8ರಂದು `ಮಿಂಚಿನ ನೋಂದಣಿ’
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ನೋಂದಣಿಯನ್ನು ಎ.14ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎ.8ರಂದು `ಮಿಂಚಿನ ನೋಂದಣಿ ದಿನ ಎಂದು ಘೋಷಿಸಲಾಗಿದ್ದು, ಮತದಾರರ ಪಟ್ಟಿಗೆ ಸೇರ್ಪಡೆ ಅಭಿಯಾನವನ್ನು ನಡೆಸಲಾಗುವುದು. ಮತದಾರರ ಸೇರ್ಪಡೆಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತಿದೆ. ಅಂದು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ನೋಂದಣಿ ಅರ್ಜಿ ಸ್ವೀಕರಿಸಲಾಗುವುದು. ಮತದಾರರ ಪಟ್ಟಿಗೆ ಸೇರ್ಪಡೆಗೆ ಬಾಕಿ ಇರುವವರು ಜನನ ದಾಖಲೆ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಗಾತ್ರದ ಪೋಟೋ, ಮತದಾರರ ಪಟ್ಟಿಯಲ್ಲಿ ಹೆಸರಿರುವ ತಮ್ಮ ಕುಟುಂಬದ ಸದಸ್ಯರ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐದು ಕಡೆಗಳಲ್ಲಿ ಚುನಾವಣಾ ಚೆಕ್ ಪೋಸ್ಟ್-ಮೂರು ಫ್ಲೈಯಿಂಗ್ ಸ್ಕ್ವಾಡ್
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಚಟುವಟಿಕೆ, ಹಣ ಮತ್ತಿತರ ವಸ್ತುಗಳ ಸಾಗಾಟ ತಡೆಯುವ ಉದ್ದೇಶದಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ ಐದು ಕಡೆಗಳಲ್ಲಿ ಚುನಾವಣಾ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು 24 ಗಂಟೆಯೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಚುನಾವಣೆ ಮುಗಿಯುವ ತನಕ ಚೆಕ್ ಪೋಸ್ಟ್ ಗಳು ಕಾರ್ಯಾಚರಿಸಲಿದೆ. ಕ್ಷೇತ್ರದ ಗಡಿ ಪ್ರದೇಶವಾದ ಜಾಲ್ಸೂರು, ಮಂಡೆಕೋಲು, ನಾಕರ್ಡು, ಕಲ್ಲುಗುಂಡಿ ಮತ್ತು ಗುಂಡ್ಯಗಳಲ್ಲಿ ಚೆಕ್ ಪೋಸ್ಟ್ ಕಾರ್ಯಾಚರಿಸುತ್ತಿದೆ. ಅಲ್ಲದೆ ನೀತಿ ಸಂಹಿತೆ ಉಲ್ಲಂಘನೆ ತಡೆಯುವ ದೃಷ್ಠಿಯಿಂದ ಅಧಿಕಾರಿಗಳ ಮೂರು ಫ್ಲೈಯಿಂಗ್ ಸ್ಕ್ವಾಡ್ ಗಳನ್ನು(ಸಂಚಾರಿ ತಂಡ) ರಚಿಸಲಾಗಿದೆ. ಇವರಿಗೆ ಕ್ಯಾಮರಾ ಮತ್ತು ವಾಹನವನ್ನು ಒದಗಿಸಲಾಗಿದ್ದು ಕ್ಷೇತ್ರದಾದ್ಯಂತ ಸಂಚರಿಸಿ ಪರಿಶೀಲನೆ ನಡೆಸಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತಿದೆ ಎಂದು ಸುಳ್ಯ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗು ತಹಶೀಲ್ದಾರ್ ಬಿ.ಎಂ.ಕುಞಮ್ಮ ತಿಳಿಸಿದ್ದಾರೆ.

See also  ತಳಂಗರೆ ಬಶೀರ್ ಕೊಲೆ ಆರೋಪಿಗಳಿಗೆ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು