News Kannada
Tuesday, November 29 2022

ಕರಾವಳಿ

ಉಚ್ಛಾಟಿಸಲ್ಪಟ್ಟಿರುವ ಕಲಾವಿದರ ಮರಳಿ ಸೇರ್ಪಡೆಗೆ ಬಿರ್ವೆರ್ ಕುಡ್ಲ ಒತ್ತಾಯ - 1 min read

Photo Credit :

ಉಚ್ಛಾಟಿಸಲ್ಪಟ್ಟಿರುವ ಕಲಾವಿದರ ಮರಳಿ ಸೇರ್ಪಡೆಗೆ ಬಿರ್ವೆರ್ ಕುಡ್ಲ ಒತ್ತಾಯ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಮೇಳದಿಂದ ಉಚ್ಛಾಟಿಸಲ್ಪಟ್ಟಿರುವ 8 ಮಂದಿ ಕಲಾವಿದವರನ್ನು ಮರಳಿ ಮೇಳಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿರ್ವೆರ್ ಕುಡ್ಲ ಒತ್ತಾಯಿಸಿದೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿರ್ವೆರ್ ಕುಡ್ಲ, ಭಾಗವತರಾದ ಸತೀಶ್ ಪಟ್ಲ ಅವರ ಸಹಿತ ಕೆಲವು ಕಲಾವಿದರನ್ನು ಐದನೇ ಮೇಳದಿಂದ ಬೇರೆ ಮೇಳಗಳಿಗೆ ವರ್ಗಾಯಿಸಿರುವುದರ ವಿರುದ್ಧ ಈ ಎಂಟು ಕಲಾವಿದರು ಮನವಿ ಮಾಡಲು ಮೇಳಗಳ ಯಜಮಾನರಲ್ಲಿಗೆ ಹೋಗಿದ್ದರು. ಆದರೆ ಅವರು ಸಿಗದೆ ಇದ್ದಾಗ ಮೇಳಕ್ಕೆ ಸಂಬಂಧಪಟ್ಟ ಯಕ್ಷಭೋದಿನಿ ಟ್ರಸ್ಟ್ ಗೆ ಮನವಿ ಸಲ್ಲಿಸಿದ್ದರು. ಇದರ ಬಳಿಕ ಏಕಾಏಕಿ ಕಲಾವಿದರನ್ನು ಮೇಳದಿಂದ ಉಚ್ಛಾಟಿಸಲಾಗಿದೆ. ಮತ್ತೆ ಮೇಳಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರೂ ಅದನ್ನು ಸ್ವೀಕರಿಸಿಲ್ಲ. ಸ್ವಲ್ಪ ದಿನದ ನಂತರ ಸೇರಿಸಿಕೊಳ್ಳುತ್ತೇವೆ ಎಂದು ಮುಂದೆ ಸಾಗಹಾಕಿದ್ದಾರೆ ಎಂದು ಬಿರ್ವೆರ್ ಕುಡ್ಲ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದೆ.

ಉಚ್ಛಾಟಿಸಲ್ಪಟ್ಟಿರುವ ಯಕ್ಷಗಾನ ಕಲಾವಿದರನ್ನು ಮುಂದಿನ ತಿರುಗಾಟದೊಳಗಡೆ ಮೇಳಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿರ್ವೆರ್ ಕುಡ್ಲ ಎಚ್ಚರಿಸಿದೆ.

See also  ಮಂಗಳೂರು ಚಲೋ: ಬಂಧನದ ವೇಳೆ ಬಸ್ಸಿನ ಕಿಟಕಿಯಿಂದ ಹೊರ ಹಾರಿದ ಕಾರ್ಯಕರ್ತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು