News Kannada
Tuesday, December 06 2022

ಕರಾವಳಿ

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಹರೀಶ್ ಕುಮಾರ್

Photo Credit :

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಹರೀಶ್ ಕುಮಾರ್

ಬೆಳ್ತಂಗಡಿ : ರಾಜ್ಯದ ಕಾಂಗ್ರೇಸ್ ಸರಕಾರವು ರೈತರ ಸಾಲಮನ್ನಾ, ಅನ್ನಭಾಗ್ಯ ಯೋಜನೆ, ವಿವಿಧ ನಿಗಮಗಳ ಸಾಲಮನ್ನ, ಬಿಪಿಎಲ್ ಕಾರ್ಡ್ ವಿತರಣೆ, ಉಚಿತ ವಿದ್ಯುತ್ ಸಂಪರ್ಕ, ಅನಿಲಭಾಗ್ಯ ಯೋಜನೆ, 94ಸಿ,94ಸಿಸಿ ಯಂತಹ ಬಡವರ ಪರ ಕಾರ್ಯಕ್ರಮವನ್ನು ಜಾರಿಗೊಳಿಸಿ ಪ್ರತೀ ಮನೆಗೂ ಸೌಲಭ್ಯ ಸಿಗುವಂತೆ ಮಾಡಿದೆ ಹೀಗಾಗಿ ಈ ಬಾರಿ ಕಾಂಗ್ರೇಸ್ ಪಕ್ಷದ ಗೆಲುವು ನಿಶ್ಚಿತ ಎಂದು ದ.ಕ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.

ಅವರು ಸೋಮವಾರ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಬಳಿ ಕಾಂಗ್ರೇಸ್ ಪಕ್ಷದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಂಗ್ರೇಸ್ ಪಕ್ಷವು ತಾಲೂಕಿನಲ್ಲಿಯೂ ಕಳೆದ 5 ವರ್ಷಗಳಲ್ಲಿ ದಾಖಲೆಯ ಅಭಿವೃದ್ದಿಯಾಗಿದೆ. ಆದ್ದರಿಂದ ತಾಲೂಕಿನ ಮತದಾರರು ಶಾಸಕ ಕೆ. ವಸಂತ ಬಂಗೇರರವರ ಅಭಿವೃದ್ದಿಯನ್ನು ಕೊಂಡಾಡುತ್ತಿದೆ. ರೈತ ವಿರೋಧಿ ಬಿಜೆಪಿ ಪಕ್ಷವನ್ನು ರೈತರಲ್ಲದೆ ಎಲ್ಲಾ ವರ್ಗದವರು ತಿರಸ್ಕಾರ ಮಾಡುತ್ತಾರೆ. ಭ್ರಷ್ಟಾಚಾರ ಮಾಡಿದ ಬಿಜೆಪಿ ಮಂತ್ರಿಗಳೆ ಜೈಲಿಗೆ ಹೋಗಿದ್ದಾರೆ ವಿನಃ ಕಾಂಗ್ರೇಸ್ ಪಕ್ಷದಲ್ಲಿ ಇದುವರೆಗೆ ಭ್ರಷ್ಟಾಚಾರ ನಡೆಯಲೂ ಇಲ್ಲ ಯಾವ ಮಂತ್ರಿಗಳೂ ಜೈಲಿಗೆ ಹೋಗಿಲ್ಲ. ಆದ್ದರಿಂದ ರಾಜ್ಯದ ಹಿತದೃಷ್ಠಿಯಿಂದ ತಾಲೂಕಿನ ಅಭಿವೃದ್ದಿಯ ದೃಷ್ಠಿಯಿಂದ ಕಾಂಗ್ರೇಸನ್ನು ಬೆಂಬಲಿಸಿ ಎಂದರು.

ಶಾಸಕ ಕೆ. ವಸಂತ ಬಂಗೇರ ಮಾತನಾಡಿ ದೇಶದ ಇತಿಹಾಸದಲ್ಲೇ ಮಾದರಿಯಾಗಿ ರಾಜ್ಯ ಕಾಂಗ್ರೇಸ್ ಸರಕಾರ ಅಭಿವೃದ್ದಿ ಕಾರ್ಯವನ್ನು ಮಾಡಿದ್ದು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಲ್ಲದೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಮಹಿಳೆಯರನ್ನು ಸ್ವಾವಲಂಬಿ ಬದುಕು ಮಾಡುವಂತೆ ಮಾಡಿದೆ. ತಾಲೂಕಿನಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಅನುದಾನ ವಿನಿಯೋಗವಾಗಿ ಬಹುತೇಕ ಅಭಿವೃದ್ದಿಯನ್ನು ಕಂಡಿದೆ. ತಾಲೂಕಿನಲ್ಲಿ ಇದುವರೆಗೆ ಬಡವರ ಕೈಯಿಂದ ಲಂಚ ಪಡೆದ ಅಧಿಕಾರಿಗಳಿಗೆ ತಕ್ಕ ಪಾಠವನ್ನು ಕಲಿಸಿದ್ದೇವೆ. ಇದುವರೆಗೆ ನನ್ನ ಅಧಿಕಾರದ ಅವಧಿಯಲ್ಲಿ 35ಸಾವಿರ ಅಕ್ರಮಸಕ್ರಮ ಮಂಜೂರುಗೊಳಿಸಿದ್ದೇವೆ. 20ಸಾವಿರಕ್ಕೂ ಅಧಿಕ 94ಸಿ, 94ಸಿಸಿಯಲ್ಲಿ ನಿವೇಶನವನ್ನು ಮಂಜೂರುಗೊಳಿಸಿ ಹಕ್ಕುಪತ್ರ ನೀಡಿದ್ದು ಅಲ್ಲದೆ ಸಾವಿರಾರು ನಿವೇಶನಗಳನ್ನು ಮಂಜೂರುಗೊಳಿಸಿದ್ದೇನೆ. ಮುಂದೆ ಸಮಗ್ರ ತಾಲೂಕಿನ ಅಭಿವೃದ್ದಿಗೆ ತಾಲೂಕಿನ ಜನತೆ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದರು.

ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಜಶೇಖರ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಪಿತಾಂಬರ ಹೇರಾಜೆ, ಅಭಿನಂದನ್ ಹರೀಶ್ ಕುಮಾರ್, ಶೇಖರ್ ಕುಕ್ಕೇಡಿ, ಇ.ಸುಂದರ ಗೌಡ, ಮೀನಾಕ್ಷಿ ಪಡಂಗಡಿ, ಮುಗುಳಿ ನಾರಾಯಣ ರಾವ್, ಹಮೀದ್, ಯೋಗೀಶ್ ಕುಮಾರ್ ನಡಕ್ಕರ, ಜಯರಾಮ ಶೆಟ್ಟಿ ಪಡಂಗಡಿ, ಶ್ರೀಧರ ಪೂಜಾರಿ, ಮ್ಯಾಕ್ಸಿಂ ಸಿಕ್ವೇರಾ, ಲಿಯೋ ಸಿಕ್ವೇರಾ, ಧರಣೇಂದ್ರ ಕುಮಾರ್, ಸೋಮಯ್ಯ ಕುಲಾಲ್, ಅಶ್ರಫ್ ನೆರಿಯ, ಜಗದೀಶ್ ಡಿ ಉಪಸ್ಥಿತರಿದ್ದರು. ಅಹಮ್ಮದ್ ಬಾವಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

See also  ಸಮಾಜಕ್ಕೆ ಹಿಂತಿರುಗಿಸುವ ಪ್ರಯತ್ನ ಅಗತ್ಯ: ಅಬ್ದುಲ್ ಘನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು