News Kannada
Tuesday, November 29 2022

ಕರಾವಳಿ

ಎಸ್.ಡಿ.ಎಮ್ ಕಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಹೆಗ್ಗಡೆ ದಂಪತಿ - 1 min read

Photo Credit :

ಎಸ್.ಡಿ.ಎಮ್ ಕಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಹೆಗ್ಗಡೆ ದಂಪತಿ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಕೇಂದ್ರಕ್ಕೆ ಹೇಮಾವತಿ ವಿ ಹೆಗ್ಗಡೆಯವರು ಭೇಟಿ ನೀಡಿ, ಯಕ್ಷಗಾನ ತರಬೇತಿ, ರಂಗ ತರಬೇತಿ ಹಾಗು ಎಸ್.ಡಿ.ಎಮ್ ಕಲಾ ವೈಭವದ ಬಗ್ಗೆ ನಡೆಯುತ್ತಿದ್ದ ತರಬೇತಿಯನ್ನು ವೀಕ್ಷಿಸಿ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶ ಒದಗಿಸಿಕೊಡಲಾಗಿದೆ. ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅಸಾಧಾರಣ ಸಾದನೆ ಮಾಡಿ. ಸತತ ಅಭ್ಯಾಸವೇ ಕಲಾವಿದರ ಯಶಸ್ಸಿಗೆ ಕಾರಣ, ಶ್ರದ್ದೆ ಮತ್ತು ಭದ್ದತೆಯಿಂದ ಮಹತ್ಕಾರ್ಯ ಕೈಗೂಡುತ್ತದೆ ಎಂದರು.

ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕಲಾ ಕೇಂದ್ರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಒದಗಿಸಿಕೊಡಲು ಮಾರ್ಗದರ್ಶನ ನೀಡಿದ್ದಾರೆ. ಈ ಸಂಧರ್ಭದಲ್ಲಿ ಕಲಾ ಕೇಂದ್ರಕ್ಕೆ ನೂತನವಾಗಿ ಖರೀದಿಸಿದ ವೇಷಭೂಷಣ, ಆಭರಣ ಹಾಗು ಪ್ರಸಾದನ ಸಾಮಗ್ರಿಗಳನ್ನು ಸಾಂಕೇತಿಕವಾಗಿ ಕೆಲ ವಿದ್ಯಾರ್ಥಿಗಳಿಗೆ ವಿತರಿಸಿ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮರವರು, ಕೇವಲ ಪಠ್ಯ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಜೀವನವನ್ನು ಸೀಮಿತಗೊಳಿಸದೆ ನಿಮಗಿಷ್ಟವಾದ ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ವಿಷಿಷ್ಟ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಯಕ್ಷಗಾನ, ಭರತನಾಟ್ಯ ಮುಂತಾದ ಕಲಾವಿದರು ಬಹುಬೇಡಿಕೆಯ ಕಲಾವಿದರಾಗಿ ತಮ್ಮ ಪ್ರತಿಭೆಯ ಮೂಲಕ ಸಾರ್ವತ್ರಿಕವಾದ ಗೌರವಕ್ಕೆ ಪಾತ್ರರಾಗುವುದನ್ನು ನಾ ಕಾಣಬಹುದು ಎಂದು ಹೇಳಿ ಸತತ ಪ್ರಯತ್ನವೇ ಯಶಸ್ಸಿನ ಕೀಲಿಕೈ ಎಂದರು.

ಎಸ್.ಡಿ.ಎಮ್ ಕಲಾ ವೈಭವದ ಕಾರ್ಯಕ್ರಮಗಳ ಸಂಯೋಜಕ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಸ್ವಾಗತಿಸಿ, ಸ್ನಾತಕೋತ್ತರ ಪದವಿ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ, ಕಲಾ ಕೇಂದ್ರದ ನಿರ್ವಾಹಕ ತೃಪ್ತಕುಮಾರ್ ಜೈನ್ ವಂದಿಸಿದರು.

ಕಾರ್ಯಕ್ರಮದಲ್ಲಿ ಯುವರಾಜ್ ಪೂವಣಿ, ರಂಗ ತರಬೇತುದಾರ ಯಶವಂತ್ ಹಾಗು ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ ಉಪಸ್ಥಿತರಿದ್ದರು.

See also  ಸುಳ್ಯದಲ್ಲಿ ಭೀಕರ ಅಪಘಾತ: ರಾಮನಗರ ಜಿಲ್ಲೆಯ ಮೂವರು ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು