News Kannada
Saturday, December 03 2022

ಕರಾವಳಿ

ಬಂಟ್ವಾಳವನ್ನು ಬಿಜೆಪಿ ಗೆದ್ದರೆ ಕರ್ನಾಟಕವನ್ನು ಗೆದ್ದಂತೆ: ಕಟೀಲ್

Photo Credit :

ಬಂಟ್ವಾಳವನ್ನು ಬಿಜೆಪಿ ಗೆದ್ದರೆ ಕರ್ನಾಟಕವನ್ನು ಗೆದ್ದಂತೆ: ಕಟೀಲ್

ಬಂಟ್ವಾಳ: ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಬಂಟ್ವಾಳವನ್ನು ಬಿಜೆಪಿ ಗೆದ್ದರೆ ದ.ಕ ಜಿಲ್ಲೆ ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಗೆದ್ದಂತೆ, ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿ ಪಕ್ಷದ ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಚುನಾವಣಾ ನಾಮಪತ್ರ ಸಲ್ಲಿಕೆಯ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿಧಾನಸಭೆ ಪ್ರವೇಶಿಸಿದರೆ, ರಮಾನಾಥ ರೈ ಮನೆಯಲ್ಲಿ ಕುಳಿತುಕೊಳ್ಳುವ ಕಾಲ ಬಂದಿದೆ ಎಂದರು.

ನೀವು ಮತೀಯ ಭಾವನೆ ಕೆರಳಿಸಿದ್ದೀರಿ, ಹಿಂದು ಮುಸಲ್ಮಾನರ ನಡುವೆ ಒಡಕು ಮೂಡಿಸಿದಿರಿ ಎಂದು ರೈ ವಿರುದ್ದ ವಾಗ್ದಾಳಿ ನಡೆಸಿದ ಕಟೀಲ್, ತಮ್ಮ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿದ್ದಲ್ಲದೇ, ಜೈಲಿನಲ್ಲಿ ಪೊಲೀಸರ ಮೇಲೆಯೇ ದಾಳಿ ನಡೆದಿತ್ತು, ತಾವು ಆಡಳಿತದಲ್ಲಿ ಸಂಪೂರ್ಣ ವೈಫಲ್ಯರಾಗಿದ್ದೀರಿ ಎಂದು ಟೀಕಾಪ್ರಹಾರಗೈದರು.

ರಮಾನಾಥ ರೈ ಯಾವುದೇ ಅಭಿವೃದ್ಧಿ ಮಾಡಿಲ್ಲ, ಆಸ್ಪತ್ರೆ, ಪಾಲಿಟೆಕ್ನಿಕ್, ಅಗ್ನಿಶಾಮಕ ಇಲಾಖೆ, ಪದವಿ ಕಾಲೇಜು, ಏತ ನೀರಾವರಿ ನ್ಯಾಯಾಲಯ ಕಟ್ಟಡ, ಬಸ್ ನಿಲ್ದಾಣ ಎಲ್ಲವನ್ನು ಬಿಜೆಪಿಯವರು ಒದಗಿಸಿದ್ದು ಎಂದರು.

ಮಂತ್ರಿಯಾಗಿ, ಶಾಸಕರಾಗಿ ರಮಾನಾಥ ರೈ ಸಂಪೂರ್ಣ ವಿಫಲರಾಗಿದ್ದಾರೆ ಎಂದ ನಳಿನ್, ಈ ಬಾರಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಸರ್ಕಾರ ಬಂಟ್ವಾಳ ಕ್ಷೇತ್ರಕ್ಕೆ ನೀಡಿದ ಅನುದಾನ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನೀಡಿರುವ ಅನುದಾನದ ಕುರಿತ ಚರ್ಚೆಗೆ ನಾನು ಸಿದ್ದನಿದ್ದು, ಜಿಲ್ಲೆಯ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ನಾಲ್ಕೂವರೆ ಸಾವಿರ ಕೋಟಿ ಅನುದಾನ ನೀಡಿದೆ ಎಂದರು.

ಮೂವತ್ತು ವರ್ಷಗಳಲ್ಲಿ ರಮಾನಾಥ ರೈ ಅವರು ಹಿಂದೆ ಇತರರ ಕಿಸೆಯಿಂದ ಪಡೆದ ಹಣವನ್ನು ಈಗ ಸರ್ಕಾರದ ಹಣವನ್ನು ದಾನ ಮಾಡಿರಬಹುದು, ಆದರೆ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೆವರಿನ ಹಣವನ್ನು ದಾನಧರ್ಮಗಳಿಗೆ ಉಪಯೋಗಿಸಿದ್ದಾರೆ. ರಾಜೇಶ್ ನಾಯ್ಕ್ ಮನೆಯ ಹಣವನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಂಡರು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಜನಾರ್ದನ ಪೂಜಾರಿ ಮನೆಗೆ ತೆರಳಿ ಕಾಲು ಹಿಡಿದರೆ ಬಿಲ್ಲವ ಸಮಾಜವೇ ನಿಮ್ಮ ಬಳಿಗೆ ಬರುತ್ತದೆ ಎಂಬ ಭ್ರಮೆ ಬಿಡಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನ ಪ್ರಮುಖ ನಾಯಕರು ಇದೇ ಜನಾರ್ದನ ಪೂಜಾರಿ ಮನೆ ಬಳಿ ಐದೈದು ಬಾರಿ ಓಡಾಡಿದರೂ, ಕಾಂಗ್ರೆಸ್ ಸಮಾವೇಶ ನಡೆಸಿದಾಗಲೂ ಜನಾರ್ದನ ಪೂಜಾರಿ ನೆನಪಾಗಲಿಲ್ಲ. ಆದರೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಪೂಜಾರಿ ಮನೆ ಭೇಟಿಗಳು ನಡೆಯುತ್ತಿವೆ ಎಂದು ಲೇವಡಿ ಮಾಡಿದರು.

See also  ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬದಲಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್!

ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಂಟ್ವಾಳದಲ್ಲಿ ಜನತೆ ಪರಿವರ್ತನೆಯನ್ನು ಬಯಸಿದ್ದು ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ತನ್ನ ಗೆಲುವು ಖಚಿತ ಎಂದರು. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದ್ದು, ತಾನು ಗೆದ್ದರೆ ರಾಜಧರ್ಮ ಪಾಲಿಸುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ ಅನ್ಯಾಯ ಸರಿಪಡಿಸುತ್ತೇನೆ ಎಂದರು.

ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಸಿದ್ದರಾಮಯ್ಯ ದುರಹಂಕಾರ ಮತ್ತು ದರ್ಪದ ಆಡಳಿತ ನಡೆಸಿದ್ದಾರೆ. ಕಲ್ಲಡ್ಕ ಶಾಲೆ, ಪುಣಚ ಶಾಲೆಯ ಮಕ್ಕಳ ಅನ್ನ ಕಸಿದದ್ದು, ಹಿಂದೂ ಯುವಕರ ಹತ್ಯೆಗಳು ಇದಕ್ಕೆ ಉದಾಹರಣೆ ಎಂದರು. ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಕೃಷಿ ಸೇವೆ ರಾಜ್ಯಕ್ಕೆ ಮಾದರಿಯಾಗಿದ್ದು, ಯುವಕರಿಗೆ ಪ್ರೇರಣೆಯಾಗಿರುವ ಇವರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ, ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಜಿತೇಂದ್ರ ಕೊಟ್ಟಾರಿ, ಕಮಲಾಕ್ಷಿ ಪೂಜಾರಿ, ಸುಲೋಚನಾ ಭಟ್, ಸುಗುಣ ಕಿಣಿ, ತುಂಗಪ್ಪ ಬಂಗೇರ, ಕೇರಳ ಬಿಜೆಪಿ ಮುಖಂಡ ಕೆ.ಸುರೇಂದ್ರನ್, ಬೃಜೇಶ್ ಚೌಟ ಉಪಸ್ಥಿತರಿದ್ದರು. ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಇದಕ್ಕೂ ಮುನ್ನ ಪೊಳಲಿಯಿಂದ ಬಿ.ಸಿ.ರೋಡಿನವರೆಗೆ ಕಾಲ್ನಡಿಗೆಯಲ್ಲಿ ಅಪಾರ ಬೆಂಬಲಿಗರ ಜೊತೆ ರಾಜೇಶ್ ನಾಯ್ಕ್ ಆಗಮಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು