News Kannada
Thursday, December 01 2022

ಕರಾವಳಿ

ಮತ ಯಾಚಿಸಲು ಬರುವವರಿಗೆ ಹತ್ತು ಷರತ್ತುಗಳನ್ನು ಹಾಕಿದ ವೈದ್ಯರು! - 1 min read

Photo Credit :

ಮತ ಯಾಚಿಸಲು ಬರುವವರಿಗೆ ಹತ್ತು ಷರತ್ತುಗಳನ್ನು ಹಾಕಿದ ವೈದ್ಯರು!

ಸುಳ್ಯ: ಇಲ್ಲಿ ಹೇಳಲಾದ 10 ವಿಷಯಗಳಿಗೆ ಬದ್ಧನಾದರೆ ಮಾತ್ರ ಮತ ಯಾಚಿಸಲು ಬನ್ನಿ ಎಂದು ವೈದ್ಯರೊಬ್ಬರು ತನ್ನ ಮನೆಯ ಗೇಟ್ ನಲ್ಲಿ ಹಾಕಿದ ಬ್ಯಾನರ್ ಚುನಾವಣಾ ಸಂದರ್ಭದಲ್ಲಿ ಗಮನ ಸೆಳೆಯುತ್ತಿದೆ. ಸುಳ್ಯದ ಮಕ್ಕಳ ತಜ್ಞ ಡಾ.ಬಿ.ಎನ್.ಶ್ರೀಕೃಷ್ಣ ಅವರು ತನ್ನ ಮನೆಯ ಗೇಟಿನಲ್ಲಿ ಈ ರೀತಿ ಬ್ಯಾನರನ್ನು ಅಳವಡಿಸಿದ್ದಾರೆ.

ಮತ ಯಾಚಿಸುವವರು ದಯವಿಟ್ಟು ಓದಿ ಎಂಬ ತಲೆ ಬರಹದೊಂದಿಗೆ ಆರಂಭವಾಗುವ ಬ್ಯಾನರ್ ನಲ್ಲಿ ಗೋ ಹತ್ಯೆ ನಿಷೇಧ ಮಾಡುತ್ತೇನೆ, ಗೋ ರಕ್ಷಣೆ ಮಾಡುತ್ತೇನೆ, ಭ್ರಷ್ಟಾಚಾರ ಮಾಡಲಾರೆ, ದುಷ್ಟದ್ರವ್ಯ ಮುಟ್ಟಲಾರೆ, ಸಮಸ್ತ ಪ್ರಜೆಗಳನ್ನೂ ಒಂದೇ ದೃಷ್ಠಿಯಿಂದ ನೋಡುವೆ, ಪಕ್ಷಪಾತಿ ಧೋರಣೆ ಮಾಡಲಾರೆ, ಮಹಿಳೆಯರ, ಮಕ್ಕಳ ರಕ್ಷಣೆಗೆ ಆದ್ಯತೆ ಕೊಡುವೆ, ಕ್ರಿಮಿನಲ್ಸ್, ಭಯೋತ್ಪಾದಕರು, ಭ್ರಷ್ಟಾಚಾರಿಗಳನ್ನು ಬೆಂಬಲಿಸಲಾರೆ, ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವೆ, ಕನ್ನಡ ಭಾಷೆ, ಸಂಸ್ಕೃತಿಗೆ ಬದ್ಧನಾಗಿದ್ದು ದ್ವಂದ್ವ ನೀತಿ ಅನುಸರಿಸಲಾರೆ, ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮಾಡಿಸುತ್ತೇನೆ. ಜನ ಸೇವೆಯ ಸೋಗಿನಲ್ಲಿ ದ್ವಂದ್ವ ನೀತಿ ಮಾಡಲಾರೆ ಎಂದು ಬದ್ಧನಾಗಿದ್ದೇನೆ ಎಂದಾದರೆ ಮಾತ್ರ ಮತ ಕೇಳಲು ಒಳಗೆ ಬನ್ನಿ ಎಂದು ಬ್ಯಾನರ್ ನಲ್ಲಿ ಮುದ್ರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಬ್ಯಾನರ್ ವೈರಲ್ ಆಗಿದ್ದು ವಾಟ್ಸಾಪ್, ಫೇಸ್ಬುಕ್ ಗಳಲ್ಲಿಯೂ ವ್ಯಾಪಕವಾಗಿ ಹರಿದಾಡುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಜನರ ಮತ್ತು ಸಮಾಜದ ಬಗ್ಗೆ ಬದ್ಧತೆ ಬರಲಿ ಮತ್ತು ಮೇಲೆ ಹೇಳಿದ ವಿಷಯಗಳ ಬಗ್ಗೆ ಗಮನ ಹರಿಸಲಿ ಎಂಬ ಉದ್ದೇಶದಿಂದ ಮನೆಯ ಗೇಟ್ ನಲ್ಲಿ ಈ ಬ್ಯಾನರನ್ನು ಅಳವಡಿಸಿದ್ದೇನೆ ಜೊತೆಗೆ ಸಮಾಜಕ್ಕೂ ಒಂದು ಉತ್ತಮ ಸಂದೇಶ ಹರಿಯಲಿ ಎಂಬುದು ಆಶಯ ಎಂದು ಡಾ.ಬಿ.ಎನ್.ಶ್ರೀಕೃಷ್ಣ ಹೇಳುತ್ತಾರೆ.

See also  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಧುನಿಕ ವೆಲ್ಡಿಂಗ್ ತಂತ್ರಜ್ಞಾನದ ಕಾರ್ಯಾಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು