News Kannada
Saturday, November 26 2022

ಕರಾವಳಿ

ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ನಟ ಯಶ್ ಪ್ರಚಾರ - 1 min read

Photo Credit :

ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ನಟ ಯಶ್ ಪ್ರಚಾರ

ಕಾರವಾರ: ಚಿತ್ರನಟ ಯಶ್ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಕ್ಕೆ ಭೇಟಿ ನೀಡಿ ಮುಂಬರುವ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ನಡೆಸಿದರು.

ಶಿರಸಿಯ ಅಶ್ವಿನಿ ಸರ್ಕಲ್ ನಿಂದ ಶಿವಾಜಿ ಚೌಕದವರೆಗೆ ಭರ್ಜರಿ ರೋಡ್ ಶೋ ನಡೆಸಿ, ಶಾಸಕ ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ತಮ್ಮದೇ ದಾಟಿಯಲ್ಲಿ ಶಾಸಕ ಕಾಗೇರಿ ಅವರನ್ನು ಬೆಂಬಲಿಸಿ ಆರಿಸಿ ಕಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರನಟ ಯಶ್, ಈ ಹಿಂದೆ ಕೆರೆ ಅಭಿವೃದ್ಧಿ ಕೆಲಸ ಹಾಗೂ ಮಾರಿಕಾಂಬೆ ದರ್ಶನಕ್ಕೆ ಮೊದಲೆರೆಡು ಬಾರಿ ಶಿರಸಿಗೆ ಬಂದಿದ್ದೆ. ಇಲ್ಲಿನ ಜನರ ಪ್ರೀತಿಗೆ ಚಿರರುಣಿಯಾಗಿದ್ದೇನೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಸರ್ಕಾರ ಜನರ ಸಮಸ್ಯೆ ಸ್ಪಂದಿಸುವ ಕಾರ್ಯ ಮಾಡಬೇಕು. ಜನಪ್ರತಿನಿಧಿಗಳು ಜನರೆದುರು ಬರಬೇಕು. ಅದಕ್ಕೆ ಸಮಸ್ಯೆಗಳನ್ನು ನೋಡಿ ಸುಮ್ಮನೆ ಕುಳಿತುಕೊಳ್ಳದೇ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದರು.

ನಾನು ವ್ಯಕ್ತಿಗಳ ನೋಡಿ ಪ್ರಚಾರ ಮಾಡುತ್ತಿರುವೆ. ಜನರ ಬಳಿ ನಿಂತು ಮಾತಾಡುವೆ. ಕಾಗೇರಿ ಅವರನ್ನು ಇಲ್ಲಿಯವರೆಗೆ ಸತತವಾಗಿ ಗೆಲ್ಲಸಿದ್ದೀರಿ. ಈಗ ಫಲ ಕೊಡುವ ಸ್ಥಾನಕ್ಕೆ ಬಂದಿದ್ದಾರೆ. ಈಗ ಕೈ ಬಿಡಬೇಡಿ. ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿರಸಿ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದರು.

 

See also  ತ್ಯಾಜ್ಯ ಸ್ಥಳಾಂತರ: ಸಾರ್ವಜನಿಕರ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು