News Kannada
Friday, October 07 2022

ಕರಾವಳಿ

ನಿಧಿಗಾಗಿ ಶಿವಲಿಂಗವನ್ನೇ ತೆಗೆದು ಅಗೆದರು! - 1 min read

Photo Credit :

ನಿಧಿಗಾಗಿ ಶಿವಲಿಂಗವನ್ನೇ ತೆಗೆದು ಅಗೆದರು!

ಕಾರವಾರ: ನಿಧಿಗಾಗಿ ದುಷ್ಕರ್ಮಿಗಳು ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನದ ಶಿವಲಿಂಗದಡಿ ಅಗೆದು ಶೋಧ ನಡಸಿರುವ ಘಟನೆ ಉತ್ತರ ಕನ್ನಡ‌ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಪಂಚಾಯತ್ ವ್ಯಾಪ್ತಿಯ ಕುಪ್ಪಗಡ್ಡಿ ಗ್ರಾಮದಲ್ಲಿ ನಡೆದಿದೆ.

ಈ ಬಗ್ಗೆ ಮಂಗಳವಾರ ತಡ ರಾತ್ರಿ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು ದೇವಸ್ಥಾನದ ಪೂಜೆಗೆ ಅರ್ಚಕರು ಆಗಮಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ದೇವಾಲಯದಲ್ಲಿ ಶಿವಲಿಂಗದ ಅಡಿಯಲ್ಲಿ ಅಗೆದಿರುವ ದುಷ್ಕರ್ಮಿಗಳು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಈ ವೇಳೆ ಶಿವಲಿಂಗದ ಮೂಲಸ್ಥಾನವನ್ನೆ ಬದಲಿಸಿ ಶಿವಲಿಂಗಕ್ಕೆ ಅಪಚಾರ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂತಹ ಕೃತ್ಯದಿಂದ ಅಸಮಾಧಾನಗೊಂಡಿರುವ ಸ್ಥಳೀಯರು, ಕೂಡಲೇ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

See also  ಸಹಸ್ರಾರು ಭಕ್ತರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು