ಮಂಗಳೂರು: ದಕ್ಷಿಣ ಕನ್ನಡದ ಗ್ರಾಹಕರಿಗೆ ತಿರುಪುರ ಚಿಟ್ಸ್ ಪ್ರೈ ಲಿಮಿಟೆಡ್ ಹೆಸರಿನ ಕಂಪನಿಯೊಂದು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಬಗ್ಗೆ ಎಕನಾಮಿಕ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
200ಕ್ಕೂ ಹೆಚ್ಚು ಗ್ರಾಹಕರಿಂದ ₹ 9 ಕೋಟಿ ಹಣ ಸಂಗ್ರಹಿಸಿ ಮೋಸ ಮಾಡಿ ಕಚೇರಿಗೆ ಬೀಗ ಹಾಕಿದ ಘಟನೆ ನಡೆದಿದೆ. ಈ ಕಂಪೆನಿಯ ವಿರುದ್ಧ ಅರಾಫತ್ ಎಂಬವರು ದೂರು ನೀಡಿದ್ದು, ದೂರಿನಲ್ಲಿ ಕೆಲವು ವರ್ಷಗಳ ಹಿಂದೆ ಇದರ ಕಚೇರಿಯು ಬಂಟ್ಸ್ ಹಾಸ್ಟೆಲ್ನಲ್ಲಿ ತೆರೆದು ಗ್ರಾಹಕರಿಗೆ ಬೃಹತ್ ಮೊತ್ತದ ಬಡ್ಡಿಯ ಆಮಿಷ ತೋರಿಸಿ ಹಣ ಸಂಗ್ರಹಿಸಿದ್ದರು. ಪ್ರಾರಂಭದಲ್ಲಿ ಹಣ ಮರಳಿಸಿದ ಕಂಪನಿ ಬಳಿಕ ಕಚೇರಿಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಇದರ ಶಾಖೆಯು ರಾಜ್ಯದಲ್ಲಿ 34 ಇದ್ದು, ದೇಶಾದ್ಯಂತ 150ಕ್ಕೂ ಅಧಿಕ ಶಾಖೆಗಳನ್ನು ಒಳಗೊಂಡಿದೆ
ದೂರಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕರು, ಸಿಬ್ಬಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ಇನ್ನೂ ಕಂಪೆನಿಯ ನಿರ್ದೇಶಕಿ ಸುಮನಾ ಮಂಗಳೂರಿನವರು ಎಂದು ತಿಳಿದು ಬಂದಿದೆ. ಅರಾಫತ್ ಅವರು 50ಲಕ್ಷ ರೂಪಾಯಿ ತೊಡಗಿಸಿಕೊಂಡಿದ್ದು, ಮಂಗಳೂರು ಕಚೇರಿಗೆ ಬೀಗ ಹಾಕಿದ ತಕ್ಷಣ ವರು ಚೆನ್ನೈಗೆ ಹೋಗಿ ವಿವಾರಿಸಿದ್ದಾರೆ. ಅಲ್ಲೋ ಬೀಗ ಹಾಕಿದ್ದನ್ನು ನೋಡಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.