ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಮತ್ತು ಸಾರಿಗೆ ಬಸ್ ನಡುವೆ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ಕುಮಟಾದ ಹೆದ್ದಾರಿಯಲ್ಲಿನ ಪಾಂಡುರಂಗ ಹೋಟೆಲ್ನ ಸಮೀಪ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಬ್ಬಿಣದ ಬೃಹತ್ ಕಂಬವೊಂದನ್ನು ಸಾಗಿಸುತ್ತಿದ್ದ ಲಾರಿಯು ಡಿಕ್ಕಿಯಾಗಿರುವುದರಿಂದ ಬಸ್ಸಿನ ಒಂದು ಬದಿಯಲ್ಲಿ ಕುಳಿತಿದ್ದವರಿಗೆ ಲಾರಿಯಲ್ಲಿದ್ದ ಕಬ್ಬಿಣದ ಕಂಬ ತೀವ್ರವಾಗಿ ಬಡಿದಿದೆ ಎನ್ನಲಾಗಿದೆ. ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹ ತೆರವು ಮಾಡುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.
ಕುಮಟಾ-ಗೋಕರ್ಣ ಸ್ಥಳೀಯ ಬಸ್ ಆಗಿದ್ದರಿಂದ ಕುಮಟಾ ಅಥವಾ ಗೋಕರ್ಣದವರಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.