News Kannada
Thursday, December 08 2022

ಕರಾವಳಿ

ಕಾರ್ಮಿಕರ ಸಂಘಟನೆಯಲ್ಲಿ ಬಿಎಂಎಸ್ ವಿಶ್ವದಲ್ಲೇ ಮುಂಚೂಣಿಯಲ್ಲಿದೆ: ವಿಶ್ವನಾಥ್ ಶೆಟ್ಟಿ

Photo Credit :

ಕಾರ್ಮಿಕರ ಸಂಘಟನೆಯಲ್ಲಿ ಬಿಎಂಎಸ್ ವಿಶ್ವದಲ್ಲೇ ಮುಂಚೂಣಿಯಲ್ಲಿದೆ: ವಿಶ್ವನಾಥ್ ಶೆಟ್ಟಿ

ಬೆಳ್ತಂಗಡಿ: ಅಸಂಘಟಿತ ಕಾರ್ಮಿಕರ ಪರವಾಗಿ ಧ್ವನಿ ಎತ್ತಿ ಹೋರಾಟವನ್ನು ಮಾಡಿ ಕಾರ್ಮಿಕರ ಹಕ್ಕು ಮತ್ತು ರಕ್ಷಣೆ ಉದ್ದೇಶದಿಂದ ಕಾರ್ಮಿಕರನ್ನು ಸಂಘಟಿಸುವಲ್ಲಿ ಬಿಎಂಎಸ್ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ಭಾರತೀಯ ಮಜ್ದೂರು ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಹೇಳಿದರು.

ಸೋಮವಾರ ಬೆಳ್ತಂಗಡಿ ಅಂಚೇಡ್ಕರ್ ಭವನದಲ್ಲಿ ನಡೆದ ಸಮಾಲೋಚನಾ ಸಭೆ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಅರ್ಹರು ಪಡೆದುಕೊಂಡು ಸದಪಯೋಗಡಿಸಿಕೊಳ್ಳಬೇಕು. ಅದಕ್ಕೆ ಕಾರ್ಮಿಕ ಸಂಘಟನೆಯನ್ನು ಬಲಪಡಿಸಿಕೊಂಡು ಸದಸ್ಯರಾಗುವ ಕೆಲಸ ಆಗಬೇಕು. ಸಂಘಟನೆ ಬೀಡಿ, ಅಂಗನವಾಡಿ, ಆಶಾ, ಬಿಸಿಯೂಟ, ಕಟ್ಟಡ ಮೊದಲಾದ ಕಾರ್ಮಿಕರ ಪರವಾಗಿ ಕೆಲಸ ಮಾಡಿದೆ. ಕಾರ್ಮಿಕರು ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆಯುತ್ತಿಲ್ಲ. ಸಂಘಟನೆಯನ್ನು ಸೇರಿಕೊಂಡು ಅದರಲ್ಲಿ ಸಿಗುವ ಸವಲತ್ತುಗಳನ್ನು ಕಾರ್ಮಿಕರು ಪಡೆಯಬೇಕು ಎಂಬುದೇ ಬಿ.ಎಂ.ಎಸ್‍ನ ಉದ್ದೇಶವಾಗಿದೆ ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಗೋಪಾಕೃಷ್ಣ, ಜಿಲ್ಲಾ ಉಪಾಧ್ಯಕ್ಷ ವಕೀಲ ಉದಯ ಕುಮಾರ್ ಬಿ. ಕೆ., ಸಂಯೋಜಕ ಜಯರಾಜ್ ಸಾಲಿಯಾನ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಾರ್ಮಿಕರು ಭಾಗವಹಿಸಿದ್ದು, ತಾಲೂಕು ಘಟಕವನ್ನು ರಚಿಸಲಾಯಿತು.

See also  ಯುವತಿಗೆ ಅಶ್ಲೀಲ ಫೋಟೋ ಕಳಿಸಿ, ವಸತಿ ಗೃಹಕ್ಕೆ ಆಹ್ವಾನಿಸಿದ ಯುವಕ ಈಗ ಪೋಲೀಸರ ಅತಿಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು