News Kannada
Friday, December 02 2022

ಕರಾವಳಿ

ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಕ್ಲೋತ್ ಬ್ಯಾಂಕ್ ವತಿಯಿಂದ ಬಟ್ಟೆ ಸಂಗ್ರಹಾಲಯ ಉದ್ಘಾಟನೆ

Photo Credit :

ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಕ್ಲೋತ್ ಬ್ಯಾಂಕ್ ವತಿಯಿಂದ ಬಟ್ಟೆ ಸಂಗ್ರಹಾಲಯ ಉದ್ಘಾಟನೆ

ಮಂಗಳೂರು: ಮಡಿಕೇರಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ವಿತರಿಸಲು ಮಂಗಳೂರಿನ ಪ್ರತಿಷ್ಠಿತ ಬಟ್ಟೆ ದಾನಿ ಸಹಾಯ ಸಂಸ್ಥೆಯಾದ ಕ್ಲೋತ್ ಬ್ಯಾಂಕ್, ರೋಟರಿ ಜಿಲ್ಲೆ ಸಹಯೋಗದೊಂದಿಗೆ ಹೊಸ ಬಟ್ಟೆಗಳನ್ನು ಸಂಗ್ರಹ ಮಾಡಲು ಬಿಷಪ್ ಹೌಸ್ ಬಳಿಯ ದಿಲ್ ಕುಶ್ ಬೇಕರಿ ಮುಂಭಾಗದಲ್ಲಿ ಸಂಗ್ರಹ ಕೇಂದ್ರವನ್ನು ತೆರೆದಿದೆ.

ಸಂಗ್ರಹ ಕೇಂದ್ರವನ್ನು ರೋಟರಿ ಜಿಲ್ಲೆ 3181 ಇದರ ಗವರ್ನರ್ ರೋಹಿನಾಥ್ ಪಿ. ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಆಶೀರ್ವಚನಗೈದರು.

ಸಂಗ್ರಹ ಕೇಂದ್ರವನ್ನು ಹತ್ತು ದಿನಗಳ ಕಾಲ ಸಾರ್ವಜನಿಕವಾಗಿ ಇದೆ ಜಾಗದಲ್ಲಿಡಲಾಗುವುದು ಎಂದು ಕ್ಲೋತ್ ಬ್ಯಾಂಕ್ ಅಧ್ಯಕ್ಷರಾದ ರೇಮಂಡ್ ಡಿಕುನ್ಹಾ ತಿಳಿಸಿದ್ದಾರೆ.

ಇದರ ಬಳಿಕ ರೋಟರಿ ಗವರ್ನರ್ ಮುಖಾಂತರ ಮಡಿಕೇರಿಯ ರೋಟರಿ ಕ್ಲಬ್ ಗಳಾದ ಮಿಸ್ಟಿ ಹಿಲ್ ಮತ್ತು ಮಡಿಕೇರಿ ಕ್ಲಬ್ ಗಳಿಗೆ ಹಸ್ತಾಂತರ ಮಾಡಲಾಗುವುದು. ಆ ರೋಟರಿ ಕ್ಲಬ್ ನ ಸದಸ್ಯರಿಗೆ ಸಂತ್ರಸ್ತರ ಬಗ್ಗೆ ತಿಳಿದಿದೆ. ಇದರಿಂದ ಇದು ನಿಜವಾದ ಸಂತ್ರಸ್ತರಿಗೆ ತಲುಪಲಿದೆ. ಈ ಕ್ಲಬ್ ಗಳು ರೋಟರಿ ಗವರ್ನರ್ ರೋಹಿನಾಥ್ ಅವರ ಜಿಲ್ಲೆಗೆ ಒಳಪಡುವ ಕಾರಣ ಬಟ್ಟೆಗಳು ನಿಜವಾದ ಫಲಾನುಭವಿಗಳಿಗೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.

ದಾನಿಗಳು ಈಗಾಗಲೇ ಬಟ್ಟೆಗಳನ್ನು ನೀಡಿದ್ದಾರೆ. ಪಿಂಕಿ ಫ್ಯಾಶನ್ ನ ವಿನ್ಸಂಟ್ ಡಿಸೋಜ ಅವರು ಸುಮಾರು ಹತ್ತು ಸಾವಿರ ರೂ. ಮೌಲ್ಯದ ಹುಡುಗಿಯರು ಜೀನ್ಸ್ ನೀಡಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ವಿವಿಧ ದಾನಿಗಳಿಂದ ಸಂಗ್ರಹಿಸಲಾಗಿರುವ ಐದು ಲಕ್ಷದಷ್ಟು ಮೌಲ್ಯದ ಹೊಸ ಬಟ್ಟೆಗಳನ್ನು 500 ವಿವಿಧ ಸಮುದಾಯಗಳ ಪ್ರದೇಶಗಳಲ್ಲಿ ರೇಮಂಡ್ ಡಿ ಕುನ್ಹ ಅವರ ನೇತೃತ್ವದಲ್ಲಿ ಹಂಚಲಾಗಿದೆ.  ಈ ಬಟ್ಟೆ ದಾನ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳಾದ ಕಾರವಾರ ಮಹಿಳಾ ಮತ್ತು ಚೈಲ್ಡ್ ಫಂಡ್, ಪಡಿ ಮಂಗಳುರು ಸಂಸ್ಥೆ ಮತ್ತು ಡೀಡ್ಸ್ ಸಂಸ್ಥೆಗಳ ಸೇವಾ ಕಾರ್ಯಕರ್ತರು ಸಹಕರಿಸುತ್ತಾರೆ ಎಂದು ಕ್ಲೋತ್ ಬ್ಯಾಂಕ್ ತಿಳಿಸಿದೆ.

See also  ನಾಳೆ ಬೆಳ್ತಂಗಡಿಯಲ್ಲಿ ನಳಿನ್ ಕುಮಾರ್ ಚುನಾವಣಾ ಪ್ರಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು