News Kannada
Friday, December 02 2022

ಕರಾವಳಿ

ಮುಂದಿನ ತಿಂಗಳಿಂದ ಶಾಸಕ ಹರೀಶ್ ಪೂಂಜ ಗ್ರಾ.ಪಂ.ವಾಸ್ತವ್ಯ

Photo Credit :

ಮುಂದಿನ ತಿಂಗಳಿಂದ ಶಾಸಕ ಹರೀಶ್ ಪೂಂಜ ಗ್ರಾ.ಪಂ.ವಾಸ್ತವ್ಯ

ಬೆಳ್ತಂಗಡಿ: ಸೆಪ್ಟೆಂಬರ್ ತಿಂಗಳಿನಿಂದ ತಾಲೂಕಿನ ಪ್ರತೀ ಪಂಚಾಯತ್‍ಗೆ ಭೇಟಿ ನೀಡಿ ಅರ್ಧದಿನ ಅಲ್ಲಿಯೇ ಇದ್ದು ಪ್ರತೀ ಇಲಾಖೆಗಳ ಬಗ್ಗೆ ಮಾಹಿತಿ ಪಡೆದು ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದೇನೆ ಎಂದು ಶಾಸಕ ಹರೀಶ ಪೂಂಜ ಪ್ರಕಟಿಸಿದರು.

ಲಾಯಿಲ ಗ್ರಾ.ಪಂ. ಸಭಾಂಗಣದಲ್ಲಿ ಶನಿವಾರ ಅವರು, ಪ್ರಕೃತಿ ವಿಕೋಪದಲ್ಲಿ ತಾಲೂಕಿನಲ್ಲಿ ಆದ ನಷ್ಟದ ಕುರಿತು ಸಮಾಲೋಚಿಸಲು ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಘೋಷಣೆ ಮಾಡಿದರು.

ಕೊಳೆರೋಗ ಸಮಸ್ಯೆ: ಸೆ.20ರೊಳಗೆ ತಾಲೂಕಿನ ಕೃಷಿ, ತೋಟಗಾರಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಕರಣಿಕರು ಸೇರಿ ಅಡಿಕೆ ಕೊಳೆರೋಗ ಬಂದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಹಿತ ಸಂಗ್ರಹಿಸಿಕೊಡಬೇಕು. ಇದಕ್ಕೆ ತಕ್ಷಣ ಪರಿಹಾರ ಸಿಗುವಂತೆ ಸರಕಾರದ ಗಮನಕ್ಕೆ ತರಲಾಗುವುದಲ್ಲದೆ ತಹಶಿಲ್ದಾರ್ ಸಹಿತ ಮೇಲಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು. ಇದಕ್ಕುತ್ತರಿಸಿದ ತಹಶಿಲ್ದಾರ್ ಮದನ್ ಮೋಹನ್ ಅವರು, ಈಗಾಗಲೇ ತಾಲೂಕಿನಲ್ಲಿ ಅಡಿಕೆ ಕೊಳೆರೋಗಕ್ಕೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಅನುದಾನ ಬಂದ ತಕ್ಷಣ ಪರಿಹಾರ ನೀಡಲಾಗುವುದು ಎಂದರು.

ಪಹಣಿ ಪತ್ರ ಸಮಸ್ಯೆ: ಕೃಷಿಕರು ತಾಲೂಕು ಕೇಂದ್ರಕ್ಕೆ ಬಂದು ಇನ್ನು ಮುಂದೆ ಪಹಣಿಪತ್ರಕ್ಕೆ ಕ್ಯೂ ನಿಲ್ಲುವ ಪ್ರಮೇಯ ಬರಬಾರದು. ಪ್ರತೀ ಗ್ರಾ.ಪಂ ಮಟ್ಟದಲ್ಲಿ ಪಹಣಿಪತ್ರ ನಿಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಕೆಲವೊಂದು ಪಂಚಾಯತ್‍ನಲ್ಲಿ ಈಗಾಗಲೇ ಪಹಣಿಪತ್ರ ಸಿಗುತ್ತಿದ್ದು ಎಲ್ಲಾ ಗ್ರಾಮಗಳಲ್ಲಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಪಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಶಾಸಕರು ಎಚ್ಚರಿಸಿದರು. ಪಂ.ಗಳಲ್ಲಿ ಜಂಟಿ ಬ್ಯಾಂಕ್ ಖಾತೆ ಇರುವುದರಿಂದ ಇಂಟರ್‍ನೆಟ್ ರೀಚಾರ್ಜ್‍ಗೆ ಸಮಸ್ಯೆ ಬರುತ್ತಿದ್ದು ಇದರಿಂದ ತೊಂದರೆಯಾಗುತ್ತಿದೆ ಎಂದು ಪಿಡಿಒಗಳು ತಿಳಿಸಿದರು. ಇದಕ್ಕೆ ತಹಶಿಲ್ದಾರ್ ಉತ್ತರಿಸಿ ಎಲ್ಲಿ ಸಮಸ್ಯೆ ಬರುತ್ತದೆ ಎಂಬುದರ ಬಗ್ಗೆ ನನ್ನ ಗಮನಕ್ಕೆ ತನ್ನಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮನೆ ಹಾನಿ: ಈ ಬಾರಿಯ ಮಳೆಗಾಲದಲ್ಲಿ ಬೆಳ್ತಂಗಡಿ ಹೋಬಳಿಯಲ್ಲಿ 95, ವೇಣೂರು25, ಕೊಕ್ಕಡದಲ್ಲಿ 26 ಮನೆಗಳು ಹಾನಿಯಾಗಿದ್ದು ಅವುಗಳನ್ನು ಪುನರ್ನಿಮಿಸಬೇಕಾಗಿದೆ. ಇವರಿಗೆ ಮನೆ ನಿರ್ಮಿಸಬೇಕಾಗಿದೆ. ದಾನಿಗಳ ಸಹಕಾರ ಹಾಗೂ ಅಧಿಕಾರಿಗಳು ಕೂಡ ಪರಿಹಾರ ಕಾರ್ಯಕ್ಕೆ ಕೈಜೋಡಿಸಿ ಮನೆ ನಿರ್ಮಾಣಕ್ಕೆ ಸಹಕರಿಸಿ ಎಂದು ಶಾಸಕರು ವಿನಂತಿಸಿದರು.

ಗ್ರಾ.ಪಂ. ವಾಸ್ತವ್ಯ: ಮುಂದಿನ ತಿಂಗಳಿನಿಂದ ಪ್ರತೀ ಗ್ರಾ.ಪಂನಲ್ಲಿ ಅರ್ಧದಿನ ವಾಸ್ತವ್ಯ ಹೋಡಲಿದ್ದು ಎಲ್ಲಾ ಇಲಾಖೆಯ ಮಾಹಿತಿಯನ್ನು ಪಡೆಯಲಾಗುವುದಲ್ಲದೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು ಈ ಬಗ್ಗೆ ಸ್ಥಳೀಯ ಪಂಚಾಯತ್ ಮಟ್ಟದ ಅಧಿಕಾರಿಗಳು ಸರಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿಡಬೇಕು ಎಂದು ಶಾಸಕರು ಸೂಚಿಸಿದರು.

ತಹಸೀಲ್ದಾರ್ ಮದನ್ ಮೋಹನ್ ಮಾತನಾಡಿ, ಎಲ್ಲವೂ ಸರಕಾರದ ಪ್ರಕೃತಿ ವಿಕೋಪದ ಅನುದಾನಕ್ಕೆ ಕಾಯಬೇಡಿ. ಆಯಾಯ ಇಲಾಖೆಯ ಅನುದಾನವನ್ನು ಬಳಸುವ ಬಗ್ಗೆ ಅಧಿಕಾರಿಗಳು ಪ್ರಯತ್ನಿಸಿ, ಅಡಿಕೆ ಕೊಳೆ ರೋಗಕ್ಕೆ ಅರ್ಜಿ ಸ್ವೀಕರಿಸುವಾಗ ಅದರ ದಾಖಲೀಕರಣ ಸರಿಯಾಗಿರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

See also  ಸೆ.13ರಿಂದ ಶಾಂತಿ, ಸಾಮರಸ್ಯದ ಸಂಕೇತವಾಗಿರುವ "ಓಣಂ''
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು