News Kannada
Thursday, December 08 2022

ಕರಾವಳಿ

ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ, 22 ಮೊಬೈಲ್ ಕಳವು

Photo Credit :

ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ, 22 ಮೊಬೈಲ್ ಕಳವು

ಉಡುಪಿ: ಇಲ್ಲಿನ ಕೆಳಗಿನ ಪೇಟೆ ಬ್ಯಾಂಕ್ ಸಿಬ್ಬಂದಿಯೊಬ್ಬರನ್ನು ಕಟ್ಟಿ ಹಾಕಿ ಚಿನ್ನದ ಅಂಗಡಿ ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಮೊಬೈಲ್ ಹಾಗೂ ಚಿನ್ನಾಭರಣವನ್ನು ದೋಚಿದ ಘಟನೆ ಇಂದು ಮುಂಜಾನೆ ವೇಳೆ ಸಂಭವಿಸಿದೆ.

ಕೆಳಗಿನ ಪೇಟೆಯ ರಾಜೇಶ್ ಎಂಬವರಿಗೆ ಸೇರಿದ ಎವರ್ ಗ್ರೀನ್ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು 1.80 ಲಕ್ಷ ರೂ. ಬೆಲೆಯ ಒಟ್ಟು 22 ಮೊಬೈಲ್ ಗಳನ್ನು ಕಳವುಗೈದಿದ್ದಾರೆ. ಸಮೀಪದ ಇನ್ನೊಂದು ಕಟ್ಟಡದಲ್ಲಿರುವ ನಾರಾಯಣ ಆಚಾರ್ಯ ಎಂಬವರಿಗೆ ಸೇರಿದ ಶ್ರೀ ಧನಲಕ್ಷ್ಮೀ ಜ್ಯುವಲೆರ್ಸ್ ಗೆ ನುಗ್ಗಿದ ಕಳ್ಳರು 8 ಗ್ರಾಂ ಚಿನ್ನ ಹಾಗೂ 10 ಸಾವಿರ ರೂ. ನಗದು ಕಳವುಗೈದಿದ್ದಾರೆ.

ಚಿನ್ನದ ಅಂಗಡಿಗೆ ನುಗ್ಗುವ ವೇಳೆ ಸಮೀಪ ಕರ್ನಾಟಕ ಬ್ಯಾಂಕ್ ನ ಎಟಿಎಂನಲ್ಲಿದ್ದ ಭದ್ರತಾ ಸಿಬ್ಬಂದಿ ಲಕ್ಷ್ಮಣ್ ಎಂಬವರನ್ನು ಕಟ್ಟಿ ಹಾಕಿ ಕಟ್ಟಡದ ಹಿಂಬದಿಯಲ್ಲಿರುವ ಪೊದೆಗೆ ಎಸೆದು ಪರಾರಿಯಾಗಿದ್ದಾರೆ‌.

‘ಸುಮಾರು ನಾಲ್ಕರಿಂದ ಐದು ಮಂದಿ ಇದ್ದು ಟೀ ಶರ್ಟ್ ಹಾಗೂ ಚಡ್ಡಿ ಧರಿಸಿದ್ದ ಅವರು ನನ್ನ ಕೈ ಮುಖಕ್ಕೆ ಬಟ್ಟೆಯಿಂದ ಕಟ್ಟಿ ಚಾಕು ತೋರಿಸಿ ಬೆದರಿಕೆ ಒಡ್ಡಿದ್ದರು. ಬಳಿಕ ಪೊದೆಗೆ ಎಸೆದು ಪರಾರಿಯಾಗಿದ್ದಾರೆ. ಮುಂಜಾನೆ ಹೊತ್ತು ಕಾರು ಚಾಲಕರೊಬ್ಬರು ತನ್ನನ್ನು ರಕ್ಷಿಸಿದ್ದಾರೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ , ಸರ್ಕಲ್ ಇನ್ಸ್ ಪೆಕ್ಟರ್ ಹಾಲಮೂರ್ತಿ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳವನ್ನು ಕರೆಸಿದ್ದು, ತನಿಖೆ ಮುಂದುವರೆಯುತ್ತಿದೆ.

See also  ಉದ್ಯೋಗ ನೈಪುಣ್ಯ ಶಿಬಿರ ದಾರಿದೀಪ: ಕೋಟ ಶ್ರೀನಿವಾಸ ಪೂಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು